Chandan Shetty: ನಿವೇದಿತಾ ಹುಟ್ಟು ಹಬ್ಬಕ್ಕೆ ದುಬಾರಿ ಬೆಲೆಯ ಕಾರ್ ಗಿಫ್ಟ್ ಕೊಟ್ಟ ಚಂದನ್, ಕಾರಿನ ಬೆಲೆ ಎಷ್ಟು.

ನಿವೇದಿತಾ ಗೌಡ ಅವರ ಹುಟ್ಟುಹಬ್ಬಕ್ಕೆ ದುಬಾರಿ ಬೆಲೆಯ ಕಾರ್ ಗಿಫ್ಟ್ ಕೊಟ್ಟ ಚಂದನ್ ಶೆಟ್ಟಿ.

Chandan Shetty New Car: ಚಂದನವನದ ಕ್ಯೂಟ್ ಜೋಡಿಯಾಗಿರುವ ಚಂದನ್ ಶೆಟ್ಟಿ (Chandan Shetty) ಹಾಗೂ ನಿವೇದಿತಾ ಗೌಡ (Niveditha Gowda) ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಜೊತೆ ಆಕ್ಟಿವ್ ಆಗಿರುತ್ತಾರೆ.

ಇನ್ನು ನಟಿ ನಿವೇದಿತಾ ಗೌಡ ಮೇ 12 ರಂದು ತಮ್ಮ 25 ನೇ ವರ್ಷದ ಹುಟ್ಟುಹಬ್ಬವನ್ನು (Nivedita Gowda Birthday) ಆಚರಿಸಿಕೊಂಡಿದ್ದರು. ನಿವಿಗೆ ಸಾಕಷ್ಟು ಶುಭಾಶಯಗಳ ಸುರಿಮಳೆ ಸುರಿದಿತ್ತು.

Chandan Shetty And Nivedita Gowda
Image Credit: publictv

ಇನ್ನು ಚಂದನ್ ಶೆಟ್ಟಿ ಅವರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಪತ್ನಿಗೆ ವಿಶೇಷವಾಗಿ ಶುಭಾಶಯ ತಿಳಿಸಿದ್ದರು. ಇನ್ನು ಚಂದನ್ ಶೆಟ್ಟಿ ನಿವೇದಿತಾ ಅವರ ಹುಟ್ಟುಹಬ್ಬಕ್ಕೆ ಯಾವ ಗಿಫ್ಟ್ ಕೊಡಬಹುದು ಎನ್ನುವ ಕುತೂಹಲ ಎಲ್ಲರಲ್ಲೂ ಇತ್ತು. ಇದೀಗ ಚಂದನ್ ನಿವಿಗೆ ಕೊಟ್ಟ ಉಡುಗೊರೆಯ ಬಗ್ಗೆ ಮಾಹಿತಿ ಲಭಿಸಿದೆ.

ಚಂದನ್ ಶೆಟ್ಟಿ ನಿವೇದಿತಾ ಗೌಡ
ಬಿಗ್ ಬಾಸ್ ಸೀಸನ್ ನ ಮೂಲಕ ಪರಿಚಯವಾದ ಜೋಡಿ ಇದೀಗ ಮದುವೆಯಾಗಿ ಸಾಂಸಾರಿಕ ಜೀವನದಲ್ಲಿ ಬ್ಯುಸಿ ಆಗಿದ್ದಾರೆ. ಇನ್ನು ನಿವೇದಿತಾ ಗೌಡ ಪ್ರಸ್ತುತ ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುವ ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮದಲ್ಲಿ ಸಕ್ರಿಯರಾಗಿದ್ದಾರೆ. ಇನ್ನು ಚಂದನ್ ಶೆಟ್ಟಿ ಕನ್ನಡ ಚಿತ್ರಗಳಿಗೆ ಹೊಸ ಹೊಸ ಹಾಡುಗಳು ಬರೆಯುತ್ತಿದ್ದಾರೆ. ಇನ್ನು ಚಂದನ್ ನಿವಿ ಹುಟ್ಟುಹಬ್ಬಕೆ ಸ್ಪೆಷಲ್ ಗಿಫ್ಟ್ ನೀಡಿದ್ದಾರೆ.

Join Nadunudi News WhatsApp Group

Chandan Shetty gifted an expensive car to Nivedita
Image Credit: timesofindia

ನಿವೇದಿತಾಗೆ ದುಬಾರಿ ಕಾರ್ ಉಡುಗೊರೆ ನೀಡಿದ ಚಂದನ್ ಶೆಟ್ಟಿ
ಈ ವೇಳೆ ನಿವಿ ಹುಟ್ಟುಹಬ್ಬವನ್ನು ಚಂದನ್ ಬಹಳ ಅದ್ದೂರಿಯಾಗಿ ಆಚರಿಸಿದ್ದಾರೆ. ಪತ್ನಿಗೆ 58 ಲಕ್ಷ ಮೌಲ್ಯದ ಟೊಯಾಟಾ ಫಾರ್ಚುನರ್ ಲೆಜೆಂಡರ್ ಕಾರನ್ನು ಚಂದನ್ ಶೆಟ್ಟಿ ನಿವಿಗೆ ಉಡುಗೊರೆಯಾಗಿ ನೀಡಿದ್ದಾರೆ.

ಪತ್ನಿ ಮತ್ತು ತಾಯಿಯ ಜೊತೆ ಹೊಸ ಕಾರಿನಲ್ಲಿ ನಿವಿ ಹುಟ್ಟುಹಬ್ಬದಂದು ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ. ಇನ್ನು ನಿವೇದಿತಾ ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Join Nadunudi News WhatsApp Group