UPI Charges: UPI ಪೇಮೆಂಟ್ ಮಾಡುವವರಿಗೆ ಹೊಸ ನಿಯಮ, ಇನ್ಮುಂದೆ ಕಟ್ಟಬೇಕು ಇಷ್ಟು ಶುಲ್ಕ

UPI ವಹಿವಾಟುಗಳ ಮೇಲೆ ಶುಲ್ಕ ವಿಧಿಸಲು ನಿರ್ಧಾರ, UPI ಬಳಸುವವರಿಗೆ ಹೊಸ ರೂಲ್ಸ್

Charges On UPI Transactions: ಭಾರತದಲ್ಲಿ UPI Payment ಗೆ ಹೆಚ್ಚು ಬಳಕೆಯಾಗುತ್ತಿದೆ. ಜನರು ವಿವಿಧ UPI Application ನ ಮೂಲಕ ಆನ್ಲೈನ್ ವಹಿವಾಟನ್ನು ನಡೆಸುತ್ತಿದ್ದಾರೆ. ಮೊಬೈಲ್ ಮೂಲಕವೇ ಎಲ್ಲ ಹಣಕಾಸಿನ ವಹಿವಾಟುಗಳು ಸಿಗುತ್ತಿರುವ ಕಾರಣ ಮೊಬೈಲ್ ಬಳಕೆದಾರರ ಸಂಖ್ಯೆ ಕೂಡ ಹೆಚ್ಚಾಗಿದೆ ಎನ್ನಬಹುದು.

ಇನ್ನು ಇತ್ತೀಚಿಗೆ RBI ಜನಪ್ರಿಯ ಡಿಜಿಟಲ್ ಪಾವತಿ ಅಪ್ಲಿಕೇಶನ್ ಆಗಿರುವ Paytm ವಿರುದ್ಧ ನಿರ್ಬಂಧ ಹೇರಿರುವುದು ಎಲ್ಲರಿಗು ತಿಳಿದೇ ಇದೆ. ಈ ನಿರ್ಬಂಧದ ಬೆನ್ನಲ್ಲೇ ಪೆಟಿಎಂ ಬಳಕೆದಾರರು ಇನ್ನಿತರ UPI Application ಗಳನ್ನೂ ಬಳಸುತ್ತಿದ್ದಾರೆ. ಇದೀಗ ಕೇಳಿ ಬರುತ್ತಿರುವ ಸುದ್ದಿಯೆಂದರೆ, UPI ವಹಿವಾಟುಗಳ ಮೇಲಿನ ಶುಲ್ಕ.

Charges On UPI Transactions
Image Credit: DNA India

UPI ವಹಿವಾಟುಗಳ ಮೇಲೆ ಶುಲ್ಕ ವಿಧಿಸಲು ನಿರ್ಧಾರ
ದೊಡ್ಡ ಮೊತ್ತದ ಹಣದ ವಹಿವಾಟು ಅಥವಾ ಹಣದ ವರ್ಗಾವಣೆಗಾಗಲಿ ಜನರು UPI ಯನ್ನು ಆರಿಸುತ್ತಾರೆ. UPI ವಹಿವಾಟುಗಳನ್ನು ಸಂಪೂರ್ಣವಾಗಿ ಶುಲ್ಕ ರಹಿತವಾಗಿದೆ. ಈ ಕಾರಣಕ್ಕೆ ಜನರು ಹೆಚ್ಚಾಗಿ UPI ವಹಿವಾಟನ್ನು ಬಳಸುತ್ತಾರೆ. ಇನ್ನು NPCI ಇದೀಗ UPI ವಹಿವಾಟುಗಳ ಮೇಲೆ ಶುಲ್ಕ ವಿಧಿಸಲು ನಿರ್ಧಾರ ಕೈಗೊಂಡಿದೆ ಎನ್ನುವ ಬಗ್ಗೆ ವರದಿಯಾಗಿದೆ. ಆದರೆ ಈ ಬಗ್ಗೆ ಸ್ಪಷ್ಟ ಮಾಹಿತಿ ಲಭಿಸಿಲ್ಲ. UPI ಪಾವತಿ ಬಳಕೆ ಭವಿಷ್ಯದಲ್ಲಿ ಕಡಿಮೆಯಾಗಬಹುದು ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ.

UPI ವಹಿವಾಟುಗಳ ಮೇಲೆ ಶುಲ್ಕ ವಿಧಿಸಿದರೆ ಏನಾಗುತ್ತದೆ…?
Unified Payments Interface (UPI) ವಹಿವಾಟಿನ ಪ್ರಮಾಣವು ಫೆಬ್ರವರಿಯಲ್ಲಿ ಸಾರ್ವಕಾಲಿಕ ಗರಿಷ್ಠ 1,800 ಕೋಟಿ ರೂ ತಲುಪಿತು. ಹಣಕಾಸು ತಂತ್ರಜ್ಞಾನ (ಫಿನ್‌ಟೆಕ್) ಕಂಪನಿಗಳು ಕಳೆದ ವಾರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೊಂದಿಗೆ ನಡೆದ ಸಭೆಯಲ್ಲಿ ಯುಪಿಐ ವಹಿವಾಟುಗಳಿಗೆ ಮರ್ಚೆಂಟ್ ಡಿಸ್ಕೌಂಟ್ ರೇಟ್ (ಎಂಡಿಆರ್) ಅನುಷ್ಠಾನದ ವಿಷಯವನ್ನು ಪ್ರಸ್ತಾಪಿಸಿವೆ.

UPI Transactions Updates
Image Credit: Smefutures

ಇನ್ನು UPI ವಹಿವಾಟುಗಳಿಗೆ ಶುಲ್ಕವನ್ನು ವಿಧಿಸಿದರೆ ಅನೇಕ ಬಳಕೆದಾರರು ಜನಪ್ರಿಯ ಮೊಬೈಲ್ ಪಾವತಿ ವ್ಯವಸ್ಥೆ UPI ಅನ್ನು ಬಳಸುವುದನ್ನು ನಿಲ್ಲಿಸುತ್ತಾರೆ. ಲೋಕಲ್ ಸರ್ಕಲ್ ನ ಆನ್ ಲೈನ್ ಸಮೀಕ್ಷೆಯಲ್ಲಿ ಈ ವಿಷಯ ಬೆಳಕಿಗೆ ಬಂದಿದೆ. ಯುಪಿಐ ಪಾವತಿಗಳ ಮೇಲೆ ಶುಲ್ಕ ವಿಧಿಸಿದರೆ ಯುಪಿಐ ಬಳಸುವುದನ್ನು ನಿಲ್ಲಿಸುವುದಾಗಿ ಸಮೀಕ್ಷೆ ನಡೆಸಿದ 73 ಪ್ರತಿಶತ ಜನರು ಸೂಚಿಸಿದ್ದಾರೆ. UPI ವಹಿವಾಟುಗಳ ಮೇಲಿನ ಶುಲ್ಕ ಹೆಚ್ಚಳವು UPI ಬಳಕೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ಸರ್ಕಾರ UPI ಮೇಲೆ ಶುಲ್ಕ ವಿದಿಸುತ್ತ ಅಥವಾ ಇಲ್ಲವಾ ಅನ್ನುವುದು ಇನ್ನೇನು ಕೆಲವೇ ದಿನಗಳಲ್ಲಿ ತಿಳಿದುಬರಲಿದೆ.

Join Nadunudi News WhatsApp Group

Join Nadunudi News WhatsApp Group