Google Keyboard: ಟೈಪ್ ಮಾಡದೆ ವಾಟ್ಸಾಪ್ ನಲ್ಲಿ ಮೆಸೇಜ್ ಕಳುಹಿಸುವುದು ಹೇಗೆ…? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್.

ಟೈಪ್ ಮಾಡದೆ ವಾಟ್ಸಾಪ್ ನಲ್ಲಿ ಮೆಸೇಜ್ ಕಳುಹಿಸುವ ಫೀಚರ್ ಇಲ್ಲಿದೆ

Chat Typing By Using Google Indic Keyboard: ಸಾಮಾನ್ಯವಾಗಿ ಎಲ್ಲರು ಕೂಡ ಜನಪ್ರಿಯ ಚಾಟಿಂಗ್ ಅಪ್ಲಿಕೇಶನ್ ಆಗಿರುವ WhatsApp ಅನ್ನು ಪ್ರತಿನಿತ್ಯ ಬಳಸುತ್ತಾರೆ. ಮೊಬೈಲ್ ಬಳಸುವ ಪ್ರತಿಯೊಬ್ಬರೂ ಹೆಚ್ಚು ಬಳಸುವ ಅಪ್ಲಿಕೇಶನ್ ಅಂದರೆ ಅದು ವಾಟ್ಸಾಪ್ ಎನ್ನಬಹುದು. ಹೌದು, ಈಗಂತೂ ವಾಟ್ಸಾಪ್ ನೋಡದೆ ಕೆಲವರ ದಿನ ಶುರು ಆಗುವುದೇ ಇಲ್ಲ ಎಂದರೆ ತಪ್ಪಾಗಲಾರದು. ಬೆಳಿಗ್ಗೆ ಎದ್ದ ತಕ್ಷಣ ವಾಟ್ಸಾಪ್ ನೋಡುವುದನನ್ನು ರೂಢಿ ಮಾಡಿಕೊಂಡಿರುತ್ತಾರೆ.

Chat Typing By Using Google Indic Keyboard
Image Credit: Navasamaja

ವಾಟ್ಸಾಪ್ ನಲ್ಲಿ ಪರಿಚಯವಾಯಿತು ಹೊಸ ಫೀಚರ್
ವಾಟ್ಸಾಪ್ ತನ್ನ ಬಳಕೆದಾರರಿಗೆ ಅನುಕೂಲವಾಗಲು ಹೊಸ ಹೊಸ ಫೀಚರ್ಸ್ ಗಳನ್ನೂ ತರುತ್ತಲೇ ಇದೆ. ಇದೀಗ ವಾಟ್ಸಾಪ್ ತನ್ನ ಬಳಕೆದಾರರಿಗೆ ಮಗದೊಂದು ಒಂದು ಹೊಸ ಫೀಚರ್ ಅನ್ನು ಬಿಡುಗಡೆ ಮಾಡಿದೆ. ವಾಟ್ಸಾಪ್ ನಲ್ಲಿ ಟೈಪ್ ಮಾಡಲು ಕಷ್ಟ ಅನಿಸುವವರಿಗೆ, ಅನಕ್ಷರಸ್ಥರಿಗೆ ಸಹಾಯವಾಗಲು ವಾಟ್ಸಾಪ್ ಹೊಸ ಫೀಚರ್ ಅನ್ನು ಬಿಡುಗಡೆ ಮಾಡಿದೆ.

ಟೈಪ್ ಮಾಡದೆ ವಾಟ್ಸಾಪ್ ನಲ್ಲಿ ಮೆಸೇಜ್ ಕಳುಹಿಸಬಹುದು…!
ಸಾಮಾನ್ಯವಾಗಿ ವಾಟ್ಸಾಪ್ ನಲ್ಲಿ ಹೆಚ್ಚಿನ ಜನರು ಚಾಟ್ ಮಾಡಲು ಇಷ್ಟಪಡುತ್ತಾರೆ. ದೂರವಿರುವ ವ್ಯಕ್ತಿಗಳೊಂದಿಗೆ ವಾಟ್ಸಾಪ್ ನಲ್ಲಿ ಚಾಟ್ ಮಾಡುವ ಮೂಲಕ ಹತ್ತಿರವಾಗಬಹುದು. ಇನ್ನು ವಾಟ್ಸಾಪ್ ನಲ್ಲಿ ಟೈಪ್ ಮಾಡದೇ ಟೆಕ್ಸ್ಟ್ ಮೆಸೇಜ್ ಅನ್ನು ಕಳುಹಿಸಬಹುದು ಎನ್ನುವ ವಿಚಾರ ನಿಮಗೆ ತಿಳಿದಿದೆಯೇ..?

Google Indic Keyboard
Image Credit: Shutterstock

ಹೌದು, ವಾಟ್ಸಾಪ್ ನಲ್ಲಿ ಈ ವೈಶಿಷ್ಟ್ಯವು ಕೂಡ ಸೇರಿಕೊಂಡಿದೆ. ಈ ವೈಶಿಷ್ಟ್ಯವು ನಿಮ್ಮ ದ್ವನಿಯನ್ನು ಆಧರಿಸಿ ಕೆಲಸ ಮಾಡುತ್ತದೆ. ಅಂದರೆ ನೀವು ಕಳುಹಿಸಬೇಕಾದ ಸಂದೇಶವನ್ನು ನೀವು ಕೇವಲ ಮಾತನಾಡುವ ಮೂಲಕ ಹೇಳಬೇಕು ಮತ್ತು ನೀವು ಹೇಳಿದ್ದು ಸ್ವಯಂಚಾಲಿತವಾಗಿ ಟೈಪ್ ಆಗುತ್ತದೆ. ಟೈಪ್ ಮಾಡದೇ ಟೆಕ್ಸ್ಟ್ ಮೆಸೇಜ್ ಕಳುಹಿಸಲು ಬಳಕೆದಾರರು Google Indic Keyboard ಆಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. ವಿಶೇಷವಾಗಿ ಇದರಲ್ಲಿ ಕನ್ನಡ ಭಾಷೆಯನ್ನು ಬಳಸಬಹುದು.

ಟೈಪ್ ಮಾಡದೆ ವಾಟ್ಸಾಪ್ ನಲ್ಲಿ ಮೆಸೇಜ್ ಕಳುಹಿಸುವುದು ಹೇಗೆ…?
•ಇಂಡಿಕ್ ಕೀಬೋರ್ಡ್ ಅನ್ನು ಇನ್ಸ್ಟಾಲ್ ಮಾಡಿದ ಬಳಿಕ ಆಪ್ ಅನ್ನು ತೆರೆಯಬೇಕು.

Join Nadunudi News WhatsApp Group

•ಬಳಿಕ ನೀವು ಸಂದೇಶ ಕಳುಹಿಸಲು ಬಯಸುವವರ ಚಾಟ್ ಗೆ ಹೋಗಬೇಕು.

•ನಂತರ ಸಂದೇಶ ಬರೆಯಲು ಕೀಬೋರ್ಡ್ ತೆರೆಯಬೇಕು.

Whatsapp New Feature 2024
Image Credit: Lifehacker

•ಅಲ್ಲಿ ಹೆಚ್ಚುವರಿ ಕೀಬೋರ್ಡ್ ಗಳ ಮೇಲೆ ಮೇಲ್ಭಾಗದಲ್ಲಿ ಮೈಕ್(MIC) ಸೈನ್ ಇರುತ್ತದೆ ಅದನ್ನು ಟ್ಯಾಪ್ ಮಾಡಬೇಕು.

•ಆದರೆ ವಾಟ್ಸಾಪ್ ನಲ್ಲಿ ವಾಯ್ಸ್ ಮೆಸೇಜ್ ಕಳುಹಿಸಲು ಕೂಡ ಮೈಕ್ ನೀಡಲಾಗುತ್ತದೆ, ಇದರ ಮೇಲು ನಿಮ್ಮ ಗಮನವಿರಲಿ. ನೀವು ಆ ಮೈಕ್ ಅನ್ನು ಬಳಕೆಮಾಡಬಾರದು. ಗೂಗಲ್ ಇಂಡಿಕ್ ಕೀಬೋರ್ಡ್ ನಲ್ಲಿರುವ ಮೈಕ್ ಅನ್ನು ಮಾತ್ರ ಉಪಯೋಗಿಸಿ ವಾಯ್ಸ್ ಟೈಪಿಂಗ್ ಮಾಡಬಹುದು.

Join Nadunudi News WhatsApp Group