Drone Prathap: ಬಿಗ್ ಬಾಸ್ ರನ್ನರ್ ಅಪ್ ಪ್ರತಾಪ್ ಮೇಲೆ ಇನ್ನೊಂದು ಕೇಸ್, ಮತ್ತೆ ಸಂಕಷ್ಟಕ್ಕೆ ಸಿಲುಕಿದ ಪ್ರತಾಪ್

ಡ್ರೋನ್ ಪ್ರತಾಪ್ ಮೇಲೆ ದಾಖಲಾಯಿತು ಇನ್ನೊಂದು ವಂಚನೆಯ ಕೇಸ್

Cheating Allegations Against Drone Prathap: ಡ್ರೋನ್ ಪ್ರತಾಪ್ (Drone Prathap) ಬಿಗ್ ಬಾಸ್ ಸೀಸನ್ 10 (Bigg Boss Kannada Season 10) ರ ಸ್ಪರ್ಧಿ ಆಗಿದ್ದು, ಬಿಗ್ ಮನೆಗೆ ಬಂದ ನಂತರ ಆಗಾಗ ಹೆಚ್ಚಿನ ಸುದ್ದಿಯಲ್ಲಿರುತ್ತಿದ್ದರು. ಹಾಗೆಯೆ ಈಗ ಬಿಗ್ ಬಾಸ್ ಸೀಸನ್ 10 ಫೈನಲ್ ಮುಗಿದಿದ್ದು, ರನ್ನರ್ ಆಪ್ ಆಗಿ ಹೊರಹೊಮ್ಮಿದ್ದಾರೆ.

ವಿನ್ನರ್ ಆಗಿ ಕಾರ್ತಿಕ್ ಅವರು ಬಿಗ್ ಬಾಸ್ ಪಟ್ಟವನ್ನು ಗೆದ್ದಿದ್ದಾರೆ. ಈಗ ಬಿಗ್ ಬಾಸ್ ಮನೆಯಿಂದ ಹೊರ ಬಂದ ಪ್ರತಾಪ್ ಗೆ ಒಂದು ದೊಡ್ಡ ಆಘಾತ ಕಾದಿದೆ. ಅದೆಂದರೆ ಪ್ರತಾಪ್ ಹಾಗು ಮೂವರ ವಿರುದ್ಧ ಡಾ.ಪ್ರಯಾಗ್ ಎಂಬುವರು ಆರ್ ಆರ್ ನಗರ ಠಾಣೆಗೆ ದೂರು ನೀಡಿದ್ದಾರೆ.

Bigg Boss 1st Runner Up Drone Prathap
Image Credit: Vistaranews

ರೈತರಿಗೆ ವಂಚಿಸುತ್ತಿರುವ ಡ್ರೋನ್ ಪ್ರತಾಪ್

ಡ್ರೋನ್ ಪ್ರತಾಪ್, ಸಿರಣ್ ಮಾದವ್, ಸಾರಂಗ ಸೀಮಂತ್ ಮಾನೆ ಮತ್ತು ಸಾಗರ್ ಗಾರ್ಗ್ ಇವರು ಡ್ರೋನಾರ್ಕ್ ಏರೋಸ್ಪೇಸ್ ಪ್ರೈ.ಲಿ ಮತ್ತು ಕ್ಯಾಸ್ಟರ್ ಡ್ರೋಣಾಟಿಕ್ಸ್ ಪ್ರೈ.ಲಿ ಕಂಪನಿಗಳನ್ನ ತೆರೆದಿದ್ದು, ಈ ಕಂಪನಿ ಮೂಲಕ , ಸುಳ್ಳು ಮಾಹಿತಿಗಳನ್ನ ನೀಡಿ ರೈತರಿಂದ ಹಣ ಪಡೆದು ವಂಚಿಸುತ್ತಿದ್ದಾರೆ ಇದರ ವಿರುದ್ಧ ತಕ್ಷಣ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಜನವರಿ 25 ರಂದು ಡ್ರೋನ್ ಪ್ರತಾಪ್ ಕುರಿತು ಶಾಕಿಂಗ್ ವಿಚಾರ ಎಲ್ಲಾ ಕಡೆಗಳಲ್ಲಿ ವೈರಲ್ ಆಗಿತ್ತು. ಪ್ರತಾಪ್ ಅವರು ಬ್ಯುಸಿನೆಸ್ ಪಾರ್ಟನರ್ ಸಾರಂಗ್ ಮಾನೆಗೆ ಮೋಸ ಮಾಡಿದ್ದಾರೆ ಎಂಬ ಆರೋಪ ಮಾಡಲಾಗಿದೆ.

Cheating Allegations Against Drone Prathap
Image Credit: tv9kannada

ಡ್ರೋನ್ ಪ್ರತಾಪ್ ವಿರುದ್ಧ ವಂಚನೆಯ ಆರೋಪ

Join Nadunudi News WhatsApp Group

ಪ್ರತಾಪ್ ಅವರಿಗೆ 8 ತಿಂಗಳು ಹಿಂದೆ 35 ಲಕ್ಷದ 75 ಸಾವಿರ ನೀಡಿದ್ದ ಸಾರಂಗ್ ಅವರು 9 ಡ್ರೋನ್ ಕೇಳಿದ್ದರು. 9 ಡ್ರೋನ್ ನೀಡಲು ಅಡ್ವಾನ್ಸ್ ನೀಡಿದ್ದ ಸಾರಂಗ್ ಮಾನೇ ಅವರು ನಂತರ ಡ್ರೋನ್​ಗಾಗಿ ಕಾದು ಕೂತಿದ್ದರು. ಡ್ರೋನ್ ನೀಡಲು ಎರಡೂವರೆ ತಿಂಗಳು ಸಮಯ ತೆಗೆದುಕೊಂಡಿದ್ದ ಪ್ರತಾಪ್ ಅವರು ನಂತರ ಎರಡು ಡ್ರೋನ್ ನೀಡಿದ್ದರು.

ಅದಾದ ನಂತರ ಮತ್ತೆ ತಡ ಮಾಡಿ ಮತ್ತೆ ಎರಡು ಡ್ರೋನ್ ಕಳಿಸಲಾಗಿತ್ತು. ಪ್ರತಾಪ್ ನ ಕಂಪೆನಿ ಡ್ರೋನಾರ್ಕ್ ಏರೋಸ್ಪೇಸ್ ಪ್ರೈವೇಟ್ ಲಿಮಿಟೆಡ್ ಜೊತೆ ಬ್ಯೂಸಿನೆಸ್ ಪಾರ್ಟನರ್ ಆಗಿದ್ದ ಸಾರಂಗ್ ಅವರು ಈಗ ಈ ಆರೋಪಗಳನ್ನು ಮಾಡಿದ್ದಾರೆ. ಈ ಮೇಲ್ ಮೂಲಕ ನಾನು ವಾರ್ನಿಂಗ್ ನೀಡಿದ್ದೇನೆ ಎಂದು ಸಾರಂಗ್ ಹೇಳಿದ್ದರು. ಈ ರೀತಿಯಾದ ಆರೋಪ ಹೊತ್ತಿರುವ ಪ್ರತಾಪ್ ಅವರನ್ನು ತನಿಖೆಗೆ ಒಳಪಡಿಸಲಾಗುವುದು ಎನ್ನಲಾಗಿದೆ.

Join Nadunudi News WhatsApp Group