Drone Prathap: 35 ಲಕ್ಷ ಪಡೆದು ಮೋಸ ಮಾಡಿದ ಡ್ರೋನ್ ಪ್ರತಾಪ್, ಪ್ರತಾಪ್ ಮೇಲೆ ಕೇಳಿಬಂತು ಇನ್ನೊಂದು ಆರೋಪ

ಮತ್ತೊಂದು ವಂಚನೆಯ ಆರೋಪದಲ್ಲಿ ಸಿಲುಕಿಕೊಂಡ ಡ್ರೋನ್ ಪ್ರತಾಪ್

Drone Prathap Fraud: BBK10 ಸದ್ಯ ಬಾರಿ ಕ್ರೇಜ್ ಹುಟ್ಟಿಸುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ಬಿಗ್ ಬಾಸ್ ಫೈನಲ್ ನಡೆಯಲಿದೆ. ಈ ಫೈನಲ್ ನಲ್ಲಿ BBK10 ರ ಕಪ್ ಅನ್ನು ಯಾರು ಗೆಲ್ಲುತ್ತಾರೆ ಎನ್ನುವುದು ಹೊರಬೀಳಲಿದೆ. ಈ ಕರ್ನಾಟಕದ ಜನತೆಗೆ BBK10 ರ ವಿನ್ನರ್ ಯಾರಾಗಬಹುದು ಎನ್ನುವ ನಿರೀಕ್ಷೆಯಲ್ಲಿ ಕಾಯುತ್ತಿದ್ದಾರೆ. BBK10 ರಲ್ಲಿ Drone Prathap ಅವರು ಕೂಡ 6 ಮಂದಿ ಫೈನಲಿಸ್ಟ್ ನಲ್ಲಿ ಒಬ್ಬರಾಗಿದ್ದಾರೆ.

Drone Prathap Latest News
Image Credit: Vistaranews

ಪ್ರತಾಪ್ ಮೇಲೆ ಕೇಳಿಬಂತು ಇನ್ನೊಂದು ಆರೋಪ
ಡ್ರೋನ್ ಪ್ರತಾಪ್ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ನಂತರ ಸಾಕಷ್ಟು ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಪ್ರತಾಪ್ ಗೆಲುವಿಗಾಗಲಿ ಅವರ ಅಭಿಮಾನಿಗಳು ಪ್ರಚಾರ ಮಾಡುತ್ತಲೇ ಇದ್ದಾರೆ. ಇನ್ನು ಪ್ರತಾಪ್ BBK10 ರ ವಿನ್ನರ್ ಆಗುತ್ತಾರಾ ಎನ್ನುವ ನಿರೀಕ್ಷೆ ಜನರಲ್ಲಿ ಹೆಚ್ಚುತ್ತಿದ್ದ ವೇಳೆ ಇದೀಗ ಪ್ರತಾಪ್ ವಿರುದ್ಧ ಹೊಸ ಆರೋಪ ಕೇಳಿಬರುತ್ತಿದೆ. ಹೌದು ಪ್ರತಾಪ್ ಇದೀಗ ಮತ್ತೊಂದು ವಂಚನೆಯ ಆರೋಪದಲ್ಲಿ ಸಿಲುಕಿಕೊಂಡಿದ್ದಾರೆ. ಅಷ್ಟಕ್ಕೂ ಪ್ರತಾಪ್ ಮೇಲೆ ಇದೀಗ ಹೊಸತಾಗಿ ಬಂದಿರುವ ಆರೋಪವೇನು..? ಎನ್ನುವ ಬಗ್ಗೆ ವಿವರ ಇಲ್ಲಿದೆ.

35 ಲಕ್ಷ ಪಡೆದು ಮೋಸ ಮಾಡಿದ ಡ್ರೋನ್ ಪ್ರತಾಪ್
ಮಹಾರಾಷ್ಟ್ರ ಮೂಲದ ವ್ಯಕ್ತಿಯೊಬ್ಬರು ಗುಣಮಟ್ಟದ ಹಾಗೂ ಉತ್ತಮವಾಗಿ ಕಾರ್ಯನಿರ್ವಹಿಸುವ ಡ್ರೋನ್‌ ಗಳನ್ನು ನೀಡಿ ಸುಮಾರು 35 ಲಕ್ಷ 75,000 ವಂಚಿಸಿದ್ದಾರೆ ಎಂದು ಬಿಸಿನೆಸ್ ಪಾರ್ಟನರ್  ಸಾರಂಗ್ ಮಾನ್ ಇದೀಗ ಬಿಗ್ ಬಾಸ್ ಸ್ಪರ್ಧಿ ಡ್ರೋನ್ ಪ್ರತಾಪ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಬಿಸಿನೆಸ್ ಪಾರ್ಟನರ್  ಸಾರಂಗ್ ಮಾನ್ ಗೆ ಲಕ್ಷ ಲಕ್ಷ ವಂಚನೆ ಮಾಡಿದ್ದಾರೆ ಎನ್ನುವ ಆರೋಪ ಡ್ರೋನ್ ವಿರುದ್ಧ ದಾಖಲಾಗಿದೆ.

Drone Prathap Fraud
Image Credit: tv9kannada

ಎಂಟು ತಿಂಗಳ ಹಿಂದೆ ಪ್ರತಾಪ್‌  ಗೆ 35,75,000 ನೀಡಿದ್ದರು ಎಂದು ಸಾರಂಗ ಮಾನ್‌ ಆರೋಪಿಸಿದ್ದಾರೆ. ಪಾವತಿಸಿದ ನಂತರ ಒತ್ತಾಯ ಮಾಡಿದ ಮೇಲೆ  ಎರಡು ತಿಂಗಳ ನಂತರ ಪ್ರತಾಪ್ 4 ಡ್ರೋನ್ ನೀಡಿದ್ದರು, ಆ ನಾಲ್ಕು ಡ್ರೋನ್ ಗಳು ಕೆಲಸ ಮಾಡುತ್ತಿಲ್ಲ, ಬ್ಯಾಟರಿ ಕೆಲಸ ಮಾಡುತ್ತಿಲ್ಲ ಎಂದು ಸಾರಂಗ ಮಾನ್ ಆರೋಪಿಸಿದ್ದಾರೆ. ಡ್ರೋನ್ ಹಾರಿಸಬೇಕಾದರೆ ಕೆಳಗೆ ಬೀಳುತ್ತದೆ, ಬಡ್ಡಿಯಿಂದ ಹಣ ತಂದು ಇವರಿಗೆ 83 ಲಕ್ಷ ಖರ್ಚಾಗಿದೆ ಡ್ರೋನ್ ಪ್ರತಾಪ್ ವಂಚಿಸಿದ್ದಾರೆ ಎಂದು ಸಾರಂಗ ಮಾನ್‌ ಆರೋಪಿಸುತ್ತಿದ್ದಾರೆ.

Join Nadunudi News WhatsApp Group

Join Nadunudi News WhatsApp Group