Cheque Bounce: ನೀವು ಕೊಟ್ಟ ಚೆಕ್ ಬೌನ್ಸ್ ಆದರೆ ನಿಮಗೆ ಎಷ್ಟು ದಂಡ ಮತ್ತು ಎಷ್ಟು ವರ್ಷ ಜೈಲು ಗೊತ್ತಾ…? ಎಚ್ಚರ

ಚೆಕ್ ಮೂಲಕ ಹಣದ ವಹಿವಾಟು ನಡೆಸುವವರು ಈ ಹೊಸ ನಿಯಮದ ಬಗ್ಗೆ ತಿಳಿಯುವುದು ಉತ್ತಮ

Cheque Bounce Punishment: ಬ್ಯಾಂಕ್ ನ ಗ್ರಾಹಕರು ಹೆಚ್ಚಾಗಿ Cheque ನ ಮೂಲಕ ದೊಡ್ಡ ದೊಡ್ಡ ವ್ಯವಹಾರವನ್ನು ಮಾಡಲು ಬಯಸುತ್ತಾರೆ. ದೇಶದ ಜನಪ್ರಿಯ ಬ್ಯಾಂಕ್ ಗಳು ತನ್ನ ಗ್ರಾಹಕರಿಗೆ ಚೆಕ್ ಸೌಲಭ್ಯವನ್ನು ನೀಡುತ್ತದೆ. ಇನ್ನು ಚೆಕ್ ನಲ್ಲಿ ಹಣದ ವಹಿವಾಟು ನಡೆಸುವುದು ಅಷ್ಟು ಸುಲಭದ ಮಾತಲ್ಲ. ಚೆಕ್ ವ್ಯವಹಾರವನ್ನು ನಡೆಸುವಾಗ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ.

Cheque Bounce Punishment
Image Credit: The Economic Times

ಚೆಕ್ ವ್ಯವಹಾರ ಮಾಡುವವರಿಗೆ ಬಿಗ್ ಅಪ್ಡೇಟ್
ಇನ್ನು ದೇಶದಲ್ಲಿ ಈಗಾಗಲೇ ಸಾಕಷ್ಟು ಚೆಕ್ ಬೌನ್ಸ್ ಪ್ರಕರಣಗಳು ಬೆಳಕಿಗೆ ಬಂದಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಚೆಕ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಕಠಿಣಾ ಕ್ರಮ ಕೈಗೊಂಡಿದೆ. Cheque Bounce ನಿಯಮದಲ್ಲಿ ಸರ್ಕಾರ ದೊಡ್ಡ ಬದಲಾವಣೆಯನ್ನು ಮಾಡಲು ಮುಂದಾಗಿದೆ. ಚೆಕ್ ಬೌನ್ಸ್ ಪ್ರಕರಣಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಸರ್ಕಾರ ಈ ನಿಯಮ ಜಾರಿಗೊಳಿಸಲು ನಿರ್ಧರಿಸಿದೆ. ಚೆಕ್ ಮೂಲಕ ಹಣದ ವಹಿವಾಟು ನಡೆಸುವವರು ಈ ಹೊಸ ನಿಯಮದ ಬಗ್ಗೆ ತಿಳಿಯುವುದು ಉತ್ತಮ.

ನೀವು ಕೊಟ್ಟ ಚೆಕ್ ಬೌನ್ಸ್ ಆದರೆ ನಿಮಗೆ ಎಷ್ಟು ದಂಡ ಮತ್ತು ಎಷ್ಟು ವರ್ಷ ಜೈಲು ಗೊತ್ತಾ…?
ಚೆಕ್ ಬೌನ್ಸ್ ಅನ್ನು ಅಪರಾಧ ಎಂದು ಪರಿಗಣಿಸಲಾಗುತ್ತದೆ. ಚೆಕ್ ಬೌನ್ಸ್ ಆಗಿದ್ದರೆ ಅದಕ್ಕೆ ಶಿಕ್ಷೆ ವಿಧಿಸುವ ಅವಕಾಶವಿದೆ. ಶಿಕ್ಷೆ ಮಾತ್ರವಲ್ಲ ದಂಡವನ್ನೂ ತೆರಬೇಕಾಗುತ್ತದೆ. ಚೆಕ್ ಬೌನ್ಸ್ ಆಗಿದ್ದರೆ, ಚೆಕ್ ನೀಡಿದ ವ್ಯಕ್ತಿಯನ್ನು ತಪ್ಪಿತಸ್ಥ ಎಂದು ಪರಿಗಣಿಸಲಾಗುತ್ತದೆ. ಅಂದರೆ, ಬೇರೊಬ್ಬರು ನಿಮಗೆ ಚೆಕ್ ನೀಡಿದ್ದರೆ ಮತ್ತು ಅದು ಬೌನ್ಸ್ ಆಗಿದ್ದರೆ ಆ ವ್ಯಕ್ತಿ ತಪ್ಪಿತಸ್ಥನಾಗುತ್ತಾನೆ.

Cheque Bounce Punishment In India
Image Credit: Tipsnepal

ಚೆಕ್ ಬೌನ್ಸ್ ಆಗಿದ್ದರೆ ಆ ವ್ಯಕ್ತಿಗೆ ಲೀಗಲ್ ನೋಟಿಸ್ ಕಳುಹಿಸಲಾಗುತ್ತದೆ. ವ್ಯಕ್ತಿ 15 ದಿನಗಳಲ್ಲಿ ಇದಕ್ಕೆ ಉತ್ತರಿಸಬೇಕಾಗುತ್ತದೆ. ಹಾಗೆ ಮಾಡದಿದ್ದರೆ ಅವರ ವಿರುದ್ಧ ನೆಗೋಷಿಯೇಬಲ್ ಇನ್‌ ಸ್ಟ್ರುಮೆಂಟ್ಸ್ ಆಕ್ಟ್ 1881ರ ಅಡಿಯಲ್ಲಿ ಪ್ರಕರಣ ದಾಖಲಿಸಬಹುದು. ಈ ಕಾಯಿದೆಯ ಸೆಕ್ಷನ್ 148 ರ ಅಡಿಯಲ್ಲಿ ಚೆಕ್ ಬೌನ್ಸ್ ಪ್ರಕರಣವನ್ನು ಸಹ ದಾಖಲಿಸಬಹುದು.

ಚೆಕ್ ಬೌನ್ಸ್ ಶಿಕ್ಷಾರ್ಹ ಅಪರಾಧವಾಗಿದೆ. ಇದರಲ್ಲಿ ಅಪರಾಧಿಗೆ 2 ವರ್ಷಗಳವರೆಗೆ ಜೈಲು ಶಿಕ್ಷೆಯಾಗಬಹುದು. ಅಷ್ಟೇ ಅಲ್ಲ ಚೆಕ್ ಬೌನ್ಸ್ ಆದಲ್ಲಿ 800 ರೂ. ವರೆಗೆ ದಂಡ ವಿಧಿಸಬಹುದಾಗಿದೆ. ದಂಡದ ಹೊರತಾಗಿ, ಬೌನ್ಸ್ ಆದ ಚೆಕ್‌ ಗೆ ದಂಡವನ್ನೂ ವಿಧಿಸಲಾಗುತ್ತದೆ. ಇದು ಚೆಕ್‌ ನಲ್ಲಿ ಬರೆದಿರುವ ಮೊತ್ತಕ್ಕಿಂತ ದುಪ್ಪಟ್ಟು ಆಗಿರಬಹುದು. ಚೆಕ್ ಬೌನ್ಸ್‌ಗೆ 7 ವರ್ಷಕ್ಕಿಂತ ಕಡಿಮೆ ಶಿಕ್ಷೆಯಾಗಿದ್ದರೆ, ಅದು ಜಾಮೀನು ಪಡೆಯಬಹುದಾದ ಅಪರಾಧವಾಗಿದೆ.

Join Nadunudi News WhatsApp Group

Join Nadunudi News WhatsApp Group