Cheque Write: ಚೆಕ್ ಬರೆಯುವಾಗ ಈ ಅಕ್ಷರದಲ್ಲಿ ತಪ್ಪು ಮಾಡಿದರೆ ನಿಮ್ಮ ಚೆಕ್ ಕ್ಯಾನ್ಸಲ್ ಆಗುತ್ತೆ, RBI ನಿಯಮ.

ಈ ಅಕ್ಷರಗಳಲ್ಲಿನ ತಪ್ಪುಗಳು ನಿಮ್ಮ ಚೆಕ್ ಕ್ಯಾನ್ಸಲ್ ಆಗುವುದಕ್ಕೆ ಕಾರಣವಾಗಬಹುದು.

Cheque Writing Rule: ಇತ್ತೀಚಿನ ದಿನಗಳಲ್ಲಿ ಎಲ್ಲವು ಕೂಡ ಡಿಜಿಟಲೀಕರಣಗೊಳ್ಳುತ್ತಿದೆ. ಎಲ್ಲ ರೀತಿಯ ಹಣಕಾಸಿನ ವಹಿವಾಟುಗಳು ಇದೀಗ ಆನ್ಲೈನ್ ಮೂಲಕ ನಡೆಯುತ್ತಿದೆ. ಆನ್ಲೈನ್ ಮೂಲಕ ಹಣದ ಪಾವತಿಗಾಗಿ NPCI ವಿವಿಧ ಪಾವತಿ ಅಪ್ಲಿಕೇಶನ್ ಅನ್ನು ನೀಡುತ್ತಿದೆ. ಜನರು ಇದರ ಸಹಾಯದ ಮೂಲಕ ಹಣದ ವಹಿವಾಟನ್ನು ಮಾಡುತ್ತಿದ್ದಾರೆ.

ಇನ್ನು UPI ನಲ್ಲಿ ಹಣದ ವರ್ಗಾವಣೆಗೆ ಮಿತಿ ಅಳವಡಿಸಿರುವುದರಿಂದ ದೊಡ್ಡ ಮೊತ್ತದ ನಗದು ವಹಿವಾಟು ಆನ್ಲೈನ್ ಮೂಲಕ ನಡೆಯಲು ಸಾಧ್ಯವಿಲ್ಲ. ಈ ಕಾರಣಕ್ಕೆ ಜನರು ಈಗಲೂ ಕೂಡ ಚೆಕ್ ವ್ಯವಹಾರವನ್ನು ಮಾಡುತ್ತಿದ್ದರೆ. ಚೆಕ್ ನ ಮೂಲಕ ದೊಡ್ಡ ದೊಡ್ಡ ಮೊತ್ತದ ವಹಿವಾಟುಗಳು ನಡೆಯುತ್ತಿದೆ. ಇನ್ನು ನೀವು ಚೆಕ್ ಬರೆಯುವಾಗ ಈ ವಿಷ್ಯದ ಬಗ್ಗೆ ಹೆಚ್ಚು ಗಮನ ಹರಿಸಬೇಕಾಗುತ್ತದೆ.

Cheque Writing Rule
Image Credit: Moneymint

ಚೆಕ್ ಬರೆಯುವಾಗ ಈ ಅಕ್ಷರದಲ್ಲಿ ತಪ್ಪು ಮಾಡಿದರೆ ನಿಮ್ಮ ಚೆಕ್ ಕ್ಯಾನ್ಸಲ್ ಆಗುತ್ತೆ
ಚೆಕ್ ಬರೆಯುವ ಸಂದರ್ಭದಲ್ಲಿ ಯಾವುದೇ ರೀತಿಯ ತಪ್ಪುಗಳು ಆದರು ಕೂಡ ಚೆಕ್ ಬೌನ್ಸ್ ಆಗುವ ಸಾಧ್ಯತೆ ಇರುತ್ತದೆ. ಖಾತೆಯಲ್ಲಿ ಬ್ಯಾಲೆನ್ಸ್ ಕೊರತೆ, ಸಹಿ ಬದಲಾವಣೆ, ಬರವಣಿಗೆಯಲ್ಲಿನ ತಪ್ಪು, ಖಾತೆ ಸಂಖ್ಯೆ ಬರೆಯುವಲ್ಲಿ ತಪ್ಪು, ತಿದ್ದಿ ಬರೆಯುವುದು, ಸಾಮತ್ಯದ ಮಿತಿಯ ಮುಕ್ತಾಯ, ಚೆಕ್ಕರ್ ಖಾತೆಯನ್ನು ಕ್ಲೋಸ್ ಮಾಡಿದರೆ, ಚೆಕ್ ನಲ್ಲಿ ಕಂಪನಿಯ ಮುದ್ರೆಯಲ್ಲಿನ ತಪ್ಪು, ಓವರ್ ಡ್ರಾಫ್ಟ್ ಮಿತಿಯನ್ನು ದಾಟಿದರೆ ನಿಮ್ಮ ಚೆಕ್ ಬೌನ್ಸ್ ಆಗುವ ಸಾಧ್ಯತೆಗಳು ಇರುತ್ತದೆ.

ಚೆಕ್ ನ ಮೂಲಕ ಹಣವನ್ನು ಡ್ರಾ ಮಾಡಿಕೊಳ್ಳಲು ಬ್ಯಾಂಕ್ ಗಳು ಅನುಮತಿಸುತ್ತದೆ. ಆದರೆ ಚೆಕ್ ನಲ್ಲಿ ಕೆಲ ತಪ್ಪುಗಳು ಇದ್ದರೆ ಆ ಚೆಕ್ ಕೆಲಸ ಮಾಡುವುದಿಲ್ಲ. ಕಾಗುಣಿತದ ತಪ್ಪಿದ್ದರೆ ಅಂತಹ ಚೆಕ್ ಗಳನ್ನೂ ಬ್ಯಾಂಕ್ ಸ್ವೀಕರಿಸುವುದಿಲ್ಲ. ಬ್ಯಾಂಕ್ ಚೆಕ್ ನಲ್ಲಿ ಕೆಲವರು ಲಕ್ಷ ಎನ್ನುವುದನ್ನು Lakh ಎಂದು ಇಂಗ್ಲಿಷ್ ನಲ್ಲಿ ಬರೆದರೆ ಕೆಲವರು Lac ಎಂದು ಬರೆಯುತ್ತಾರೆ. ಈ ಅಕ್ಷರಗಳಲ್ಲಿನ ತಪ್ಪುಗಳು ನಿಮ್ಮ ಚೆಕ್ ಕ್ಯಾನ್ಸಲ್ ಆಗುವುದಕ್ಕೆ ಕಾರಣವಾಗಬಹುದು.

Cheque Writing Rules In India
Image Credit: Bankrate

ಚೆಕ್ ನಲ್ಲಿ ಲಕ್ಷ ಬರೆಯುವಾಗ ಈ ರೀತಿಯ ಅಕ್ಷರ ಬಳಸುವುದು ಅಗತ್ಯ
ಭಾರತೀಯ ರಿಸರ್ವ್ ಬ್ಯಾಂಕ್ ಚೆಕ್ ಗಳಿಗೆ ಸಂಬಂಧಿಸಿದಂತೆ ಕೆಲವು ನಿಯಮಗಳನ್ನು ನೀಡಿದೆ. ಆರ್ ಬಿಐ ನಿಯಮಾನುಸಾರ ಬ್ಯಾಂಕುಗಳು ತಮ್ಮ ವ್ಯವಹಾರವನ್ನು ಮಾಡಬೇಕಿದೆ. ಚೆಕ್ ಬರೆಯುವಾಗ ಎರಡು ಕಾಗುಣಿತಗಳನ್ನು ಏಕಕಾಲದಲ್ಲಿ ಬಳಸಲಾಗುವುದಿಲ್ಲ ಎಂದು RBI ಹೇಳುತ್ತದೆ.

Join Nadunudi News WhatsApp Group

ಆದರೆ ಬ್ಯಾಂಕ್ ಗಳ ಮೂಲ ಮಾರ್ಗಸೂಚಿಯಲ್ಲಿ ಲಕ್ಷಗಟ್ಟಲೆ ಹಣ ತೆಗೆಯುವಾಗ ಚೆಕ್ ನಲ್ಲಿ ಇಂಗ್ಲಿಷ್ ನಲ್ಲಿ Lakh ಪದ ಬಳಸಬೇಕು ಎಂದು ಹೇಳಲಾಗಿದೆ. ಇದರರ್ಥ ಅಧಿಕೃತ ಬ್ಯಾಂಕಿಂಗ್ ಪರಿಭಾಷೆಯಲ್ಲಿ Lakh ಸೂಕ್ತವಾದ ಪದವಾಗಿದೆ. RBI ವೆಬ್‌ ಸೈಟ್ ಮತ್ತು ಬ್ಯಾಂಕ್‌ ಗಳು ನೀಡುವ ಎಲ್ಲಾ ಚೆಕ್‌ ಗಳು ಸಹ Lakh ಪದವನ್ನು ಬಳಸುತ್ತವೆ. ಆದರೆ ‘Lak’ ಪದವನ್ನು ಬಳಸಲೇ ಇಲ್ಲ. ಹೀಗಾಗಿ ಗ್ರಾಹಕರು ಬ್ಯಾಂಕ್ ನ ಚೆಕ್ ಬರೆಯುವಾಗ Lak ಬದಲಿಗೆ Lakh ಬಳಸುವುದು ಅಗತ್ಯವಾಗಿದೆ. ನೀವು ಒಂದೇ ವೇಳೆ ಚೆಕ್ ನಲ್ಲಿ Lak ಪದವನ್ನು ಬಳಸಿದರೆ ನಿಮ್ಮ ಚೆಕ್ ಕ್ಯಾನ್ಸಲ್ ಆಗುವ ಸಾಧ್ಯತೆ ಇರುತ್ತದೆ.

Join Nadunudi News WhatsApp Group