Chetan Ahimsa: ಮೋದಿ ಮತ್ತೆ ಪ್ರಧಾನಿ ಆಗ್ತಾರೆ, ಮೋದಿ ಪ್ರಧಾನಿಯಾಗುವ ಬಗ್ಗೆ ಚೇತನ್ ಅಹಿಂಸಾ ಹೇಳಿದ್ದೇನು ನೋಡಿ

ಸಮೀಕ್ಷೆಗಳು ಯಾವತ್ತೂ ತಪ್ಪಾಗಲ್ಲ ಎಂದ ಚೇತನ್ ಅಹಿಂಸಾ

Chetan Ahimsa About Loksabha Election: ನಟ ಚೇತನ್ ಅಹಿಂಸಾ ಬಗ್ಗೆ ಎಲ್ಲರಿಗು ತಿಳಿದೇ ಇದೆ. ನಟ ಚೇತನ್ ಅವರು ಆಗಾಗ ಹೊಸ ಹೊಸ ವಿವಾದಕ್ಕೆ ಗುರಿಯಾಗುತ್ತ ಇರುತ್ತಾರೆ. ಇತ್ತೀಚೆಗಂತೂ ನಟ ಚೇತನ್ ಅವರು ವಿವಾದದಿಂದಲೇ ಹೆಚ್ಚು ಸುದ್ದಿಯಾಗಿದ್ದರು.

ಇದೀಗ ಮತ್ತೆ ಲೋಕಸಭಾ ಚುನಾವಣೆಯ ಬಗ್ಗೆ ಚೇತನ್ ಅಹಿಂಸಾ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದರೆ. ಈ ಬಾರಿ ದೇಶದಲ್ಲಿ ಯಾವ ಸರ್ಕಾರ ಅಧಿಕಾರವನ್ನು ಪಡೆಯುತ್ತದೆ ಎನ್ನುವ ಬಗ್ಗೆ ಚೇತನ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಲೋಕಸಭಾ ಚುನಾವಣೆಯ ಸಮೀಕ್ಷೆಯ ಬಗ್ಗೆ ಚೇತನ್ ಹೇಳಿಕೆ ನೀಡಿದ್ದಾರೆ.

Chetan Ahimsa About Loksabha Election
Image Credit Publictv

ಮೋದಿ ಮತ್ತೆ ಪ್ರಧಾನಿ ಆಗ್ತಾರೆ…!
ಇದೀಗ ಮೋದಿ ಮತ್ತೆ ಪ್ರಧಾನಿ ಆಗ್ತಾರೆ ಎನ್ನುವ ಬಗ್ಗೆ ಚೇತನ್ ಅಹಿಂಸಾ ಅವರು ಹೇಳಿದ್ದಾರೆ. ಚೇತನ್ ಅವರು 2014-2019ರಲ್ಲಿ ಇದ್ದ ಮೋದಿ ಅಲೆ ಈಗಿಲ್ಲ. ಮೋದಿ ಬ್ರ್ಯಾಂಡ್ ಕಡಿಮೆ ಇರಬಹುದು. ಆದ್ರೇ ಬಿಜೆಪಿಗೆ ಭರ್ಜರಿ ಫಲಿತಾಂಶ ಬರಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಲೋಕಸಭೆ ಚುನಾವಣೆಯ ಮತದಾನದ ನಂತರದ ಚುನಾವಣೋತ್ತರ ಸಮೀಕ್ಷೆಗಳ ವರದಿಯನ್ನು ನೋಡಿದರೆ ಎಲ್ಲ ಸಮೀಕ್ಷೆಗಳೂ ಒಂದೇ ಆಗಿವೆ. ಅದರಲ್ಲಿ ಯಾವುದೇ ಗೊಂದಲವಿಲ್ಲ. ಈ ಸಮೀಕ್ಷೆಗಳು ಯಾವತ್ತೂ ತಪ್ಪಲ್ಲ ಎಂದರು. 2004 ರ ಸಮೀಕ್ಷೆಯಲ್ಲಿ ಬಿಜೆಪಿ ಹೆಚ್ಚಿನ ಪಾಲು ಪಡೆಯಲಿದೆ ಎಂದು ಹೇಳಲಾಗಿತ್ತು. ಅದು ಹಾಗೆ ಇತ್ತು.

ಸಮೀಕ್ಷೆಗಳು ಯಾವತ್ತೂ ತಪ್ಪಾಗಲ್ಲ ಎಂದ ಚೇತನ್ ಅಹಿಂಸಾ
ಇದೀಗ ಚುನಾವಣೋತ್ತರ ಸಮೀಕ್ಷೆಯಲ್ಲಿ 2019ರ ಚುನಾವಣೆಗಿಂತ ಹೆಚ್ಚು ಸ್ಥಾನ ಪಡೆಯಲಿದೆ ಎಂದು ಸಮೀಕ್ಷೆಗಳು ಹೇಳಿವೆ. ಅದೇ ಫಲಿತಾಂಶ ಬರಲಿದೆ ಎಂದರು. ಲೋಕಸಭೆ ಚುನಾವಣೆ ನಂತರದ ಸಮೀಕ್ಷೆಯ ವರದಿ ಪ್ರಕಾರ ಎನ್‌ಡಿಎ 370ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದಿದೆ. ಅದರಂತೆ ಸ್ಥಾನ ಬರಲಿದೆ. ಕೇಂದ್ರದಲ್ಲಿ ಎನ್ ಡಿಎ ಸರ್ಕಾರ ಬಂದ ಮೇಲೆ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದರಲ್ಲಿ ಅನುಮಾನವಿಲ್ಲ. ಜೂನ್ 4ರ ಫಲಿತಾಂಶದ ನಂತರ ಆ ಬಗ್ಗೆ ಖಚಿತ ಮಾಹಿತಿ ತಿಳಿಯಲಿದೆ. ಲೋಕಸಭೆಯ ಚುನಾವಣೋತ್ತರ ಸಮೀಕ್ಷೆಗಳು ಯಾವತ್ತೂ ತಪ್ಪಾಗಲ್ಲ. ಎನ್‌ಡಿಎ ಹೆಚ್ಚು ಸ್ಥಾನ ಗಳಿಸಲಿದೆ. ಮೋದಿ ಮತ್ತೊಮ್ಮೆ ಪ್ರಧಾನಿಯಾಗುತ್ತಾರೆ ಎಂದು ನಟ ಚೇತನ್ ಹೇಳಿದ್ದಾರೆ.

Modi will become Prime Minister again, says actor Chetan Ahimsa
Image Credit: India Today

Join Nadunudi News WhatsApp Group

Join Nadunudi News WhatsApp Group