Rama Janmabhoomi: ರಾಮ ಜನ್ಮಭೂಮಿ ಬಗ್ಗೆ ಚೇತನ್ ವಿವಾದಾತ್ಮಕ ಹೇಳಿಕೆ, ಶ್ರೀರಾಮ ಕಾಲ್ಪನಿಕ ವ್ಯಕ್ತಿ.

ಶ್ರೀರಾಮನ ಜನ್ಮ ಭೂಮಿಯ ಬಗ್ಗೆ ನಟ ಚೇತನ್ ಅವರು ವಿವಾದಾತ್ಮಕ ಹೇಳಿಕೆಯನ್ನ ನೀಡಿದ್ದಾರೆ.

Actor Chetan Ahimsa About Rama Janmabhoomi: ನಟ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ (Chetan Ahimsa) ಇದೀಗ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ. ನಟ ಇತ್ತೀಚೆಗಂತೂ ಒಂದಲ್ಲ ಒಂದು ವಿವಾದದ ಮೂಲಕ ಸುದ್ದಿಯಲ್ಲಿದ್ದಾರೆ.

ಈ ಹಿಂದೆ ತಿರುಪತಿ ದೇವಸ್ಥಾನದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ ಸಂಕಷ್ಟಕ್ಕೆ ಸಿಲುಕಿದ್ದರು. ಇದೀಗ ಮತ್ತೆ ಹೊಸ ವಿವಾದಕ್ಕೆ ಒಳಗಾಗಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿಯೋಣ.

Actor Chetan has made a controversial statement about Sri Rama's birthplace.
Image Credit: rediff

ರಾಮ ಜನ್ಮಭೂಮಿಯ ಬಗ್ಗೆ ನಟ ಚೇತನ್ ವಿವಾದಾತ್ಮಕ ಹೇಳಿಕೆ
ಈ ಹಿಂದೆ ನಟ ಚೇತನ್ ಅವರು ಹಿಂದುತ್ವದ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವುದರಿಂದ ಚೇತನ್ ಅವರನ್ನು ಬಂಧಿಸಲಾಗಿತ್ತು. ಇದೀಗ ಮತ್ತೆ ನಟ ಚೇತನ್ ಸಂದರ್ಶನದಲ್ಲಿ ಮಾತನಾಡುವಾಗ ರಾಮಜನ್ಮ ಭೂಮಿಯ ಬಗ್ಗೆ ಮಾತನಾಡಿದ್ದಾರೆ. ನಟ ಚೇತನ್ ಅವರ ಮಾತುಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಪರ ವಿರೋಧದ ಚರ್ಚೆಯನ್ನು ಹುಟ್ಟುಹಾಕುತ್ತಿದೆ.

ರಾಮಜನ್ಮಭೂಮಿ ಎನ್ನುವುದು ಅವೈಜ್ಞಾನಿಕ
“ಸಾರ್ವಕರ್ ಹೇಳುವಂತೆ ರಾಮ ರಾವಣನನ್ನು ಸಾಯಿಸಿ ಅಯೋದ್ಯೆಗೆ ಬಂದ, ಅಲ್ಲಿ ದೇಶ ಶುರುವಾಯಿತು ಎನ್ನುವುದನ್ನು ನಾನು ಒಪ್ಪುವುದಿಲ್ಲ. ಅದು ಸುಳ್ಳು. 1992 ದೊಡ್ಡ ಘಟನೆ ನಡೆದು ರಾಮ ಜನ್ಮಭೂಮಿ ಆಗುತ್ತದೆ. ಬಾಬ್ರಿ ಮಸೀದಿ ಒಡೆದು ಹಾಕುತ್ತಾರೆ. ರಾಮಜನ್ಮಭೂಮಿ ಎನ್ನುವುದು ಕೇವಲ ಒಂದು ಕಾನ್ಸೆಪ್ಟ್, ಅದು ಅವೈಜ್ಞಾನಿಕ”.

Join Nadunudi News WhatsApp Group

Actor Chetan has made a controversial statement about Rama's birthplace saying that Rama is an imaginary person
Image Credit: detechter

ರಾಮ ಅನ್ನೋದು ಕಾಲ್ಪನಿಕ ವ್ಯಕ್ತಿ
ರಾಮ ಅನ್ನೋದು ಕಾಲ್ಪನಿಕ ವ್ಯಕ್ತಿ ಅಷ್ಟೇ. ಅಲ್ಲದೆ ಸಾರ್ವಕರ್ ರಾಮ ಬೇರೆ, ಮಹಾತ್ಮಾ ಗಾಂಧಿಯವರ ರಾಮ ಬೇರೆ, ರಾಮಾಯಣದ ರಾಮ ಬೇರೆ.

ರಾಮನ ಭಾವನೆ ಇಟ್ಟುಕೊಳ್ಳಿ ಪರವಾಗಿಲ್ಲ. ರಾಮ, ಕೃಷ್ಣ, ಗಣೇಶ ಇವರೆಲ್ಲ ನಂಬಿಕೆ ಮೇಲೆ ಕಟ್ಟಿರುವ ದೇವರುಗಳು, ವೈಜ್ಞಾನಿಕತೆ ಎಂದು ಬಂದಾಗ ಇತಿಹಾಸದಲ್ಲಿ ಬದುಕಿದವರು. ಅಂದರೆ ಜೀಸಸ್, ಮಹಮದ್, ಬುದ್ಧ , ಬಸವಣ್ಣ, ಅಂಬೇಡ್ಕರ್ ಈ ರೀತಿ ಇವರೆಲ್ಲ ವೈಜ್ಞಾನಿಕವಾಗಿ ಸಾಭೀತಾದವರು, ಇವರುಗಳ ಕುರಿತು ದಾಖಲೆ ಇದೆ ಎಂದಿದ್ದಾರೆ.

Join Nadunudi News WhatsApp Group