Chetan Ahimsa: ಬುದ್ಧನ ಮಂದಿರ ಒಡೆದು ತಿರುಪತಿ ದೇವಸ್ಥಾನ ನಿರ್ಮಾಣ, ಚೇತನ್ ವಿವಾದಾತ್ಮಕ ಹೇಳಿಕೆ.

ಬುದ್ಧನ ಮಂದಿರ ಒಡೆದು ತಿರುಪತಿ ದೇವಸ್ಥಾನ ನಿರ್ಮಾಣ ಮಾಡಲಾಗಿದೆ ಎಂದು ನಟ ಚೇತನ್ ಅವರು ವಿವಾದಾತ್ಮಕ ಹೇಳಿಕೆಯನ್ನ ನೀಡಿದ್ದಾರೆ

Actor Chetan About Tirupati Temple: ನಟ ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ (Chetan Ahimsa) ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ನಟ ಹಿಂದೂ ಧರ್ಮದ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಲೇ ಇರುತ್ತಾರೆ. ಇತ್ತೀಚೆಗಷ್ಟೇ ಚೇತನ್ ಅವರು ಕಿಚ್ಚ ಸುದೀಪ್ ಅವರ ರಾಜಕೀಯ ಸೇರ್ಪಡೆಯ ಬಗ್ಗೆ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದರು.

ಇದರ ಬೆನ್ನಲ್ಲೇ ಇದೀಗ ತಿರುಪತಿ ತಿರುಮಲ ದೇವಸ್ಥಾನದ ಬಗ್ಗೆ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. ನಟ ಚೇತನ್ ಅವರ ಮಾತುಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಪರ ವಿರೋಧ ಚರ್ಚೆಯನ್ನು ಹುಟ್ಟುಹಾಕುತ್ತಿದೆ.

Chetan's controversial statement on demolition of Buddha temple and construction of Tirupati temple.
Image Credit: instagram

ತಿಮ್ಮಪ್ಪನ ದೇವಸ್ಥಾನದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಚೇತನ್ ಅಹಿಂಸಾ
ಯೂಟ್ಯೂಬ್ ಚಾನೆಲ್ ನಲ್ಲಿ ನೀಡಿದ ಸಂದರ್ಶನದಲ್ಲಿ ನಟ ಚೇತನ್ ಅವರು ತಿರುಪತಿ ತಿರುಮಲ ದೇವಸ್ಥಾನದ ಬಗ್ಗೆ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. ರಾಮ ಎನ್ನುವ ವ್ಯಕ್ತಿ ಈ ಕಾಲದಲ್ಲಿ ಇದ್ದರು, ಇಲ್ಲಿ ಹುಟ್ಟಿದರು ಎಂದು ತೋರಿಸಿ, ನಿಮ್ಮ ಧಾರ್ಮಿಕ ನಂಬಿಕೆ ಸತ್ಯ ಇರಬಹುದು. ಆದರೆ ನಮ್ಮ ವೈಚಾರಿಕತೆ, ಬೌದ್ಧಿಕತೆ ಪ್ರಪಂಚದ ಸತ್ಯ ಎಂದೆಂದಿಗೂ ಅಲ್ಲ, ಅದಕ್ಕೆ ಸಾಕ್ಷಿಯು ಇಲ್ಲ ಎಂದಿದ್ದಾರೆ.

ಬುದ್ಧನ ಮಂದಿರ ಒಡೆದು ತಿರುಪತಿ ದೇವಸ್ಥಾನ ಕಟ್ಟಿದ್ದಾರೆ
ಇಲ್ಲಿನ ಕೆಲವು ದೇವಸ್ಥಾನಗಳೆಲ್ಲ ಹಿಂದೆ ಬುದ್ಧ ವಿಹಾರಗಳಾಗಿತ್ತು. ವೈದಿಕ ಕಾಲದ ನಂತರ ಬುದ್ಧ ಬರುತ್ತಾರೆ. ವೈದಿಕ ಕಾಲದಲ್ಲಿ ಹೋಮ, ಹವೆಯ, ಯಜ್ಞ ಎಲ್ಲವು ಇತ್ತು. ಆದರೆ ದೇವಸ್ಥಾನ ಮಂದಿರಗಳು ಇರಲಿಲ್ಲ.

Join Nadunudi News WhatsApp Group

ಬುದ್ಧ ಬಂದ ಮೇಲೆ ಅಶೋಕನ ನಂತರ ಬೌದ್ಧ ಧರ್ಮ ಹರಡಿದ ನಂತರ ಬುದ್ಧ ಸ್ತೂಪಗಳು, ವಿಹಾರಗಳು ಬಂದಿದೆ. ಆ ನಂತರ ಮತ್ತೆ ಬ್ರಾಹ್ಮಣ, ವೈದಿಕ ಪರಂಪರೆ ಬಂದಾಗ 84 ಸಾವಿರ ಬುದ್ಧ ವಿಹಾರಗಳನ್ನು ಒಡೆದು ಹಾಕಿ ಹಿಂದೂ ಮಂದಿರಗಳನ್ನಾಗಿ ಮಾಡಿದರು.

Earlier there was a Buddha temple in the place where Tirupati temple was. Actor Chetan Ahimsa has given a statement that Tirupati temple was built after the temple of Buddha was demolished
Image Credit: vibrant4

ಅಲ್ಲಿಯವರೆಗೂ ದೇವಸ್ಥಾನಗಳು ಇರಲಿಲ್ಲ. ಯಾಕೆಂದರೆ ವೈದಿಕ ಪರಂಪರೆಯಲ್ಲಿ ಹೋಮ, ಹವೆಯ, ಯಜ್ಞ ಎಲ್ಲವು ಇರುತ್ತದೆ. ಇದಕ್ಕೆ ಬೇಕಾದರೆ ಸಾಕ್ಷಿ ತೋರಿಸುತ್ತೇನೆ. ತಿರುಪತಿ, ಕೇದಾರನಾಥ ದೇವಸ್ಥಾನಗಳನ್ನು ಇದೆ ರೀತಿ ಕಟ್ಟಿದ್ದಾರೆ. ತಿರುಪತಿ ದೇವಸ್ಥಾನ ಕೂಡ ಮೊದಲು ಬುದ್ಧ ಮಂದಿರವಾಗಿತ್ತು. ನಮ್ಮ ಇತಿಹಾಸ ದಾಖಲೆಗಳಲ್ಲಿ 84 ಸಾವಿರ ಬುದ್ಧ ವಿಹಾರಗಳು ಇವೆ ಎಂದು ಇದೆ. ಅದನ್ನೆಲ್ಲ ರಾಜ ಆಶೋಕ ಹಾಗೂ ಆತನ ನಂತರದವರು ಕಟ್ಟಿದ್ದಾರೆ.

185 ಕ್ರಿಸ್ತಪೂರ್ವ ಬಂದ ಮೇಲೆ ವೈದಿಕ ಪರಂಪರೆ ಹಿಂತಿರುಗಿ ಬಂದ ಮೇಲೆ ಈ ಬುದ್ಧ ವಿವರಗಳನ್ನು ಒಡೆದು, ಬುದ್ಧ ಬಿಕ್ಕುಗಳನ್ನು ಸಾಯಿಸಿ, ಬುದ್ಧ ವಿಹಾರಗಳನ್ನು ವೈದಿಕ ಮಂದಿರಗಳನ್ನಾಗಿ ಮಾಡಿದ್ದಾರೆ ಎಂದು ನಟ ಚೇತನ್ ಸಂದರ್ಶನದಲ್ಲಿ ಮಾತನಾಡಿದ್ದಾರೆ.

Join Nadunudi News WhatsApp Group