Chetan About Rahul Gandhi: ರಾಹುಲ್ ಗಾಂಧಿ ಬಗ್ಗೆ ಪೋಸ್ಟ್ ಮಾಡಿದ ಚೇತನ್ ಅಹಿಂಸಾ, ರಾಹುಲ್ ಪರವಾಗಿ ಮಾತನಾಡಿದ ನಟ ಚೇತನ್.

ನಟ ಚೇತನ್ ಅವರು ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ. ರಾಹುಲ್ ಗಾಂಧಿ (Rahul Gandhi)  ಅವರ ಪರ ಪೋಸ್ಟ್ ಹಾಕುವ ಮೂಲಕ ಸರ್ಕಾರಕ್ಕೆ ಪ್ರಶ್ನೆ ಹಾಕಿದ್ದಾರೆ.

Actor Chetan Ahimsa Viral Post About Rahul Gandhi: ನಟ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸ (Chetan Ahimsa) ಅವರು ಫಂದಲ್ಲ ಒಂದು ವಿವಾದಲ್ಲಿ ಸಿಲುಕುತ್ತಾರೆ.

ಇತ್ತೀಚೆಗಷ್ಟೇ ಹಿಂದೂ ಧರ್ಮದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಕೋರ್ಟ್ ಮೆಟ್ಟಿಲೇರಿ ಜಾಮೀನು ಪಡೆದು ಹಿಂದಿರುಗಿದ್ದರು. ಹೀಗಿರುವ ಇದೀಗ ಮತ್ತೆ ನಟ ಚೇತನ್ ಅವರು ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ. ರಾಹುಲ್ ಗಾಂಧಿ (Rahul Gandhi)  ಅವರ ಪರ ಪೋಸ್ಟ್ ಹಾಕುವ ಮೂಲಕ ಸರ್ಕಾರಕ್ಕೆ ಪ್ರಶ್ನೆ ಹಾಕಿದ್ದಾರೆ.

Actor Chetan Ahimsa Viral Post About Rahul Gandhi
Image Source: India Today

ರಾಹುಲ್ ಗಾಂಧಿ ಅವರಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್
ಕಳೆದ ಲೋಕಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಕರ್ನಾಟಕದ ಕೋಲಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಒಬ್ಬ ಕಳ್ಳ ಎಂದು ರಾಹುಲ್ ಗಾಂಧೀ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಪ್ರಕರಣ ವಿಚಾರಣೆ ನಡೆಸಿದ್ದ ಕೋರ್ಟ್ ರಾಹುಲ್ ದೋಷಿ ಎಂದು ತೀರ್ಪು ನೀಡಿ ಶಿಕ್ಷೆಯ ಪ್ರಮಾಣ ಪ್ರಕಟಿಸಿದೆ.

ಸೂರತ್ ಜಿಲ್ಲಾ ಕೋರ್ಟ್ ತೀರ್ಪು ನೀಡಿ ರಾಹುಲ್ ಗಾಂಧಿ ಅವರಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಇದೀಗ ರಾಹುಲ್ ಗಾಂಧಿ ಅವರ ಸಂಸತ್ ಸದಸ್ಯತ್ವ ಮತ್ತು ಜೈಲು ಶಿಕ್ಷೆ ಪ್ರಕಟವಾದ ಬಳಿಕ ಇದು ನಿಜಕ್ಕೂ ಅತಿರೇಕ ಎಂದು ನಟ ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸ ಪ್ರಶ್ನೆ ಮಾಡಿದ್ದಾರೆ.

Actor Chetan Ahimsa Viral Post About Rahul Gandhi
Image Source: India Today

Join Nadunudi News WhatsApp Group

ರಾಹುಲ್ ಗಾಂಧಿ ಪರ ನಟ ಚೇತನ್ ಪೋಸ್ಟ್
“ಎಲ್ಲಾ ಕಳ್ಳರು ಮೋದಿ ಉಪನಾಮಗಳನ್ನು ಹೊಂದಿದ್ದಾರೆ ಎಂಬ ವಿವಾದಾತ್ಮಕ ಪ್ರತಿಕ್ರಿಯೆಗಾಗಿ ರಾಹುಲ್ ಗಾಂಧಿಯವರಿಗೆ ಎರಡು ವರ್ಷಗಳ ಕಾಲ ಜೈಲು ಶಿಕ್ಷೆಯಾಗಿದೆ ಮತ್ತು ಲೋಕಸಭೆಯ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿದೆ.

ಇದು ನಿಜಕ್ಕೂ ಅತಿರೇಕವಾಗಿದೆ. ಮೋದಿ ಹೆಸರಿನ ವ್ಯಕ್ತಿ ಹೇಗೆ ಸಮರ್ಥನೀಯವಾಗಿ ಆಕ್ರೋಶಗೊಳ್ಳಬಹುದು ಎಂಬುದು ಸ್ಪಷ್ಟವಾಗಿದೆ. ಎಲ್ಲಾ ಭಯೋತ್ಪಾಧಕರು ಖಾನ್ ಉಪನಾಮಗಳನ್ನು ಹೇಗೆ ಹೊಂದಿದ್ದಾರೆ ಎಂಬುವುದು ಮನನಷ್ಟವಾಗುವುದಿಲ್ಲವೇ”? ಎಂದು ನಟ ಚೇತನ್ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

Actor Chetan Ahimsa Viral Post About Rahul Gandhi
Image Source: India Today

 

Join Nadunudi News WhatsApp Group