Chetan Ahimsa Latest: ಸುದೀಪ್ ಮತ್ತು ಪ್ರಕಾಶ್ ರಾಜ್ ಜೂಜಿನಲ್ಲಿ ಹಣ ಗಳಿಸಿದವರು, ಚೇತನ್ ಅಹಿಂಸಾ ಪೋಸ್ಟ್

ಪ್ರಕಾಶ್ ರಾಜ್ ಮತ್ತು ಸುದೀಪ್ ಅವರು ಜೂಜಿನಲ್ಲಿ ಹಣ ಗಳಿಸಿದವರು ಎಂದು ಪೋಸ್ಟ್ ಮಾಡಿದ್ದಾರೆ ಚೇತನ್ ಅಹಿಂಸಾ.

Actor Chetan About Sudeep And Prakash Raj: ಸ್ಯಾಂಡಲ್ ವುಡ್ ನ ಸ್ಟಾರ್ ನಟ ಕಿಚ್ಚ ಸುದೀಪ್ (Kiccha Sudeep) ರಾಜಕೀಯ ಸೇರ್ಪಡೆ ಬಗ್ಗೆ ಸಾಕಷ್ಟು ವಿಚಾರಗಳು ಹರಡುತ್ತಿದೆ. ಸುದೀಪ್ ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿ ಕೂಡ ಹರಡಿತ್ತು.

ಈ ಬಗ್ಗೆ ನಟ ಕಿಚ್ಚ ಸುದೀಪ್ ಅವರು ಸ್ಪಷ್ಟನೆ ಕೂಡ ನೀಡಿದ್ದಾರೆ. ನಾನು ಈ ಬಾರಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ, ಬದಲಾಗಿ 2028 ರಲ್ಲಿ ಸ್ಪರ್ಧಿಸುತ್ತೇನೆ ಹಾಗೂ ಬಿಜೆಪಿ ಪರವಾಗಿ ಪ್ರಚಾರ ಮಾಡುವುದಾಗಿ ಹೇಳಿದ್ದಾರೆ.

Actor Chetan About Sudeep And Prakash Raj
Image Source: Subrang India

 

ಕಿಚ್ಚನ ಬಿಜಿಪಿ ಸೇರ್ಪಡೆಯ ಬೆನ್ನಲ್ಲೇ ಪ್ರಕಾಶ್ ರಾಜ್ (Prakash Raj) ವಿರೋಧ ವ್ಯಕ್ತಪಡಿಸುತ್ತಿದ್ದರು. ಇದೀಗ ನಟ ಚೇತನ್ ಅಹಿಂಸಾ (Chetan Ahimsa) ಪ್ರಕಾಶ್ ರಾಜ್ ಹಾಗೂ ಸುದೀಪ್ ಬಗ್ಗೆ ಟ್ವೀಟ್ ಮಾಡಿದ್ದಾರೆ. ಇವರ ಟ್ವೀಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಸುದೀಪ್ ಹಾಗೂ ಪ್ರಕಾಶ್ ರಾಜ್ ವಿರುದ್ಧ ಚೇತನ್ ಟ್ವೀಟ್
ಇತ್ತೀಚಿಗೆ ಕಿಚ್ಚ ಸುದೀಪ್ ಅವರು ಬಿಜೆಪಿ ಸೇರ್ಪಡೆಯ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಇನ್ನು ಕನ್ನಡದ ಖ್ಯಾತ ನಟ ಪ್ರಕಾಶ್ ರಾಜ್ ಸರಣಿ ಟ್ವೀಟ್ ನ ಮೂಲಕ ಕಿಚ್ಚನ ಬಿಜೆಪಿ ಸೇರ್ಪಡೆಯ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದರು. ಇದೀಗ ನಟ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ನಟ ಸುದೀಪ್ ಹಾಗೂ ಪ್ರಕಾಶ್ ರಾಜ್ ಬಗ್ಗೆ ಟ್ವೀಟ್ ಮಾಡುವ ಮೂಲಕ ಟಾಂಗ್ ನೀಡಿದ್ದಾರೆ.

Join Nadunudi News WhatsApp Group

Actor Chetan About Sudeep And Prakash Raj
Image Source: India Today

ನಟ ಚೇತನ್ ಅಹಿಂಸಾ ಪೋಸ್ಟ್
ಬಿಜೆಪಿಗೆ ಸುದೀಪ್ ರವರು ನೀಡಿದ ಬೆಂಬಲದಿಂದ ಪ್ರಕಾಶ್ ರಾಜ್ ಅವರು ಆಶ್ಚರ್ಯ ಮತ್ತು ಆಘಾತಕ್ಕೊಳಗಾಗಿದ್ದಾರೆ ಮತ್ತು ಇದು ಕುತೂಹಲಕಾರಿ ವಿಷಯವಾಗಿದೆ. ಇಬ್ಬರು ಪ್ರತಿಭಾವಂತ ನಟರು. ಒಬ್ಬರು ಬಿಜೆಪಿ ಪರ ಮತ್ತೊಬ್ಬರು ಬಿಜೆಪಿ ವಿರೋಧಿ. ಜೂಜಿನ ಜಾಹಿರಾತುಗಳ ಮೂಲಕ ಇಬ್ಬರು ಸಹ ಹೆಚ್ಚು ಹಣವನ್ನು ಗಳಿಸಿದ್ದಾರೆ.

ನಾನು ಇಬ್ಬರ ನಿಲವುಗಳು/ ಸಿದ್ದಂತಗಳು ಒಪ್ಪದಿದ್ದರೂ, ಅಂತಹ ಪ್ರಶ್ನಾರ್ಹ ಸಂಪಾದನೆಯನ್ನು ಮೊದಲು ಯಾರು ಸದ್ಬಳಕೆ ಹಿಂದಿರುಗಿಸುತ್ತಾರೋ ಆ ವ್ಯಕ್ತಿ ಮೇಲುಗೈಯಾಗುತ್ತಾರೆ ಎಂದು ಸುದೀಪ್ ಹಾಗೂ ಪ್ರಕಾಶ್ ರಾಜ್ ಅವರಿಗೆ ನಟ ಚೇತನ್ ಅಹಿಂಸಾ ಪೋಸ್ಟ್ ಮಾಡುವ ಮೂಲಕ ಟಾಂಗ್ ನೀಡಿದ್ದಾರೆ.

Actor Chetan About Sudeep And Prakash Raj
Image Source: Nadunudi

Join Nadunudi News WhatsApp Group