Chetan And Sudeep: ಸುದೀಪ್ ಬಿಜೆಪಿ ಪ್ರಚಾರ ಮಾಡುವುದರ ಕುರಿತು ಟ್ವೀಟ್ ಮಾಡಿದ ನಟ ಚೇತನ್.

ಕಿಚ್ಚ ಸುದೀಪ್ ಅವರು ಬಿಜೆಪಿ ಪಕ್ಷದ ಪರವಾಗಿ ಪ್ರಚಾರ ಮಾಡುವುದರ ಬಗ್ಗೆ ಟ್ವೀಟ್ ಮಾಡಿದ ನಟ ಚೇತನ್ ಅಹಿಂಸಾ

Chetan Ahimsa Tweet About Sudeep: ಕನ್ನಡದ ಖ್ಯಾತ ನಟ ಕಿಚ್ಚ ಸುದೀಪ್ (Kiccha Sudeep) ರಾಜಕೀಯ ಸೇರ್ಪಡೆ ಬಗ್ಗೆ ಸಾಕಷ್ಟು ವಿಚಾರಗಳು ಹರಡುತ್ತಿದೆ. ಸುದೀಪ್ ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿ ಕೂಡ ಹರಡಿತ್ತು.

ಈ ಬಗ್ಗೆ ನಟ ಕಿಚ್ಚ ಸುದೀಪ್ ಅವರು ಇದರ ಬಗ್ಗೆ ಸ್ಪಷ್ಟನೆ ಕೂಡ ನೀಡಿದ್ದಾರೆ. ನಾನು ಈ ಬಾರಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ, ಬದಲಾಗಿ 2028 ರಲ್ಲಿ ಸ್ಪರ್ಧಿಸುತ್ತೇನೆ ಎಂದಿದ್ದಾರೆ. ಆದರೆ ನಟ ಸುದೀಪ್ ಅವರು ಬಿಜೆಪಿ ಪರವಾಗಿ ಪ್ರಚಾರ ಮಾಡುವುದಾಗಿ ಹೇಳಿದ್ದಾರೆ.

Actor Chetan Ahimsa has responded through a tweet as Sudeep said that he will campaign on behalf of the BJP party.
Image Credit: news18

ಕಿಚ್ಚ ಸುದೀಪ್ ಬಿಜೆಪಿ ಸೇರ್ಪಡೆ ಬಗ್ಗೆ ಮಾತನಾಡಿದ ನಟ ಚೇತನ್ ಅಹಿಂಸಾ
ಇದೀಗ ನಟ ಕಿಚ್ಚ ಬಿಜೆಪಿ ಸೇರ್ಪಡೆ ಬಗ್ಗೆ ನಟ ಚೇತನ್ ಅಹಿಂಸಾ (Chetan Ahimsa) ಮಾತನಾಡಿದ್ದಾರೆ. ನಟ ಚೇತನ್ ಸಿನಿಮಾ ತಾರೆ ಬಿಜೆಪಿ ಸೇರ್ಪಡೆಯಾದರೆ ಉದಾರವಾದಿಗಳು ಅದನ್ನು ‘ಮಾರಾಟ’ ಎನ್ನುವುದು ಏಕೆ. ಈ ಉದಾರವಾದಿಗಳು ಈಗಾಗಲೇ ಕಾಂಗ್ರೆಸ್ ಜೆಡಿಎಸ್, ಎಎಪಿ ಅಂತಹ ವ್ಯವಸ್ಥಿತ ರಾಜಕೀಯ ಹಿಂದೂ ಶಕ್ತಿಗೆ ಮಾರಾಟವಾಗಿದ್ದಾರೆ.

ನೆನಪಿಡಿ ಬಿಜೆಪಿ ಮಾತ್ರ ಶತ್ರು ಎಂದು ಹೇಳುವವರು ಸಹ ನಮ್ಮ ಶತ್ರುಗಳೇ. ನಾವು ಅನ್ಯಾಯದ ಮತ್ತು ಅಸಮಾನತೆಯ ಸಂಪೂರ್ಣ ವ್ಯವಸ್ಥೆಯ ವಿರುದ್ಧ ಹೋರಾಡಬೇಕಿದೆ ಎಂದು ಚೇತನ್ ಅಹಿಂಸಾ ಬರೆದಿದ್ದಾರೆ.

Join Nadunudi News WhatsApp Group

ಬೆದರಿಕೆ ಪತ್ರದ ಕುರಿತು ಮಾತನಾಡಿರುವ ಸುದೀಪ್
ನಟಿ ಚೇತನ್ ಅಹಿಂಸಾ ಯಾವಾಗಲು ಒಂದಲ್ಲ ಒಂದು ವಿಚಾರಕ್ಕೆ ಮುಂದೆ ಬರುತ್ತಾರೆ. ಇದೀಗ ನಟ ಸುದೀಪ್ ಅವರ ರಾಜಕೀಯ ಸೇರ್ಪಡೆ ಬಗ್ಗೆ ಟ್ವೀಟ್ ಮಾಡಿದ್ದು ವೈರಲ್ ಆಗಿದೆ. ನಟ ಸುದೀಪ್ ರಾಜಕೀಯ ಪಕ್ಷ ಸೇರ್ಪಡೆ ಬಗ್ಗೆ ಸ್ಪಷ್ಟನೆ ನೀಡುತ್ತಿದ್ದಂತೆಯೇ ಅವರಿಗೆ ಬೆದರಿಕೆಯ ಬಂದಿದೆ.

ನಟ ಸುದೀಪ್ ಅವರು ಈ ಪಾತ್ರದ ಕುರಿತು ಮಾತನಾಡಿದ್ದಾರೆ. ಈ ಪತ್ರ ಬರೆದಿದ್ದು ಬೇರೆ ಯಾರು ಅಲ್ಲ ಚಿತ್ರರಂಗದಲ್ಲಿದ್ದವರೇ. ನನಗೆ ಅವರು ಯಾರು ಅಂತಾನೂ ಗೊತ್ತು, ಆದರೆ ಈಗ ನಾನು ಅವರ ಹೆಸರು ಹೇಳಲ್ಲ. ಸಮಯ ಬಂದಾಗ ಹೇಳುತ್ತೇನೆ ಎಂದಿದ್ದಾರೆ.

Actor Chetan Ahimsa tweeted that if the film star joins the BJP, the liberals will sell it.
Image Credit: rediff

Join Nadunudi News WhatsApp Group