Chetan Ahimsa: ಭಾರತದ ಸೋತ ಬೆನ್ನಲ್ಲೇ ಇನ್ನೊಂದು ಹೇಳಿಕೆ ನೀಡಿದ ಚೇತನ್ ಅಹಿಂಸಾ, ಕೋಪಗೊಂಡ ಫ್ಯಾನ್ಸ್.

ಟೀಮ್ ಇಂಡಿಯಾ ಸೋಲಿನ ಬಗ್ಗೆ ಚೇತನ್ ಅಹಿಂಸಾ ಟ್ವೀಟ್.

Chetan Ahimsa Tweet About Team India: ಸದ್ಯ ಇಡೀ ಭಾರತ ICC World Cup 2023 ರಲ್ಲಿ ಭಾರತ ವಿಜಯ ಸಾಧಿಸದೆ ಇರುವ ಬೇಸರದಲ್ಲಿದೆ. ಭಾರತೀಯರು ಈ ಬಾರಿ ಟೀಮ್ ಇಂಡಿಯಾ ಕಪ್ ಗೆದ್ದೇ ಗೆಲ್ಲುತ್ತದೆ ಎನ್ನುವ ಖುಷಿಯಲ್ಲಿದ್ದರು. ಆದರೆ ಕಪ್ ಪಡೆಯುವ ಕೊನೆಯ ಹೆಜ್ಜೆಯಲ್ಲಿದ್ದ ಭಾರತ ಕಪ್ ಗೆಲ್ಲುವ ಅವಕಾಶವನ್ನು ಕೊನೆಯ ಕ್ಷಣದಲ್ಲಿ ಕಳೆದುಕೊಂಡಿದೆ.

ನಿನ್ನೆ ನಡೆದ India v/s Australia ಪಂದ್ಯದಲ್ಲಿ 6 ವಿಕೆಟ್ ಗಳ ಮೂಲಕ ಟೀಮ್ ಇಂಡಿಯಾವನ್ನು ಆಸ್ಟ್ರೇಲಿಯಾ ತಂಡ ಸೋಲಿಸಿದೆ. ಈ ಬಾರಿ ಕೂಡ ಇಂಡಿಯಾ ಕಪ್ ಗೆ ಮುತ್ತಿಕ್ಕುವ ಅವಕಾಶವನ್ನು ಕಳೆದುಕೊಂಡಿದೆ. ನಟ ಚೇತನ್ ಅಹಿಂಸಾ ಅವರ ಮಾತು ಬೇಸರವನ್ನ ತರಿಸಿದೆ ಎಂದು ಹೇಳಬಹುದು. ಸದ್ಯ ಚೇತನ್ ಅಹಿಂಸಾ ಅವರ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Chetan Ahimsa Tweet About Team India
Image Credit: Hindustan Times

ಭಾರತದ ಸೋತ ಬೆನ್ನಲ್ಲೇ ಇನ್ನೊಂದು ಹೇಳಿಕೆ ನೀಡಿದ ಚೇತನ್ ಅಹಿಂಸಾ
ಸೋಶಿಯಲ್ ಮೀಡಿಯಾದಲ್ಲಿ ಅವಹೇಳನಕಾರಿ ಟ್ವೀಟ್ ಮಾಡುವ ಮೂಲಕ ವೈರಲ್ ಆಗುವ ನಟ ಸಾಮಾಜಿಕ ಹೋರಾಟಗಾರ Chetan Ahimsa ಇದೀಗ Team India ಸೋಲಿನ ಬಗ್ಗೆ ಮತ್ತೊಂದು ಹೇಳಿಕೆ ನೀಡಿದ್ದಾರೆ. ಚೇತನ್ ಅವರ ಈ ಹೇಳಿಕೆ ಕ್ರಿಕೆಟ್ ಪ್ರಿಯರ ಬೇಸರಕ್ಕೆ ಕಾರಣವಾಗಿದೆ. ಮೊದಲೇ ಸೋಲಿನ ಬೇಸರದಲ್ಲಿದ್ದ ಜನತೆಗೆ ಇದೀಗ ಚೇತನ್ ಅವರ ಟ್ವೀಟ್ ಮತ್ತಷ್ಟು ಬೇಸರವನ್ನು ಹುಟ್ಟಿಸಿದೆ. ನಟ ಚೇತನ್ ನ ಟ್ವೀಟ್ ವಿರುದ್ಧ ನೆಟ್ಟಿಗರು ತಿರುಗಿಬಿದ್ದಿದ್ದಾರೆ. ಚೇತನ್ ಅವರನ್ನು ಮನೋರೋಗಿ ಎಂದು ಬಿಂಬಿಸುವ ಮೂಲಕ ತಮ್ಮ ಆಕ್ರೋಶವನ್ನು ಭಾರತೀಯರು ವ್ಯಕ್ತಪಡಿಸುತ್ತಿದ್ದಾರೆ.

ಟೀಮ್ ಇಂಡಿಯಾ ಸೋಲಿನ ಬಗ್ಗೆ ಚೇತನ್ ಅಹಿಂಸಾ ಟ್ವೀಟ್
“ನಾನು ಮತ್ತೆ ಹೇಳುತ್ತಿದ್ದೇನೆ, ಭಾರತಕ್ಕೆ ಕ್ರಿಕೆಟ್ ನಲ್ಲಿ ಮೀಸಲಾತಿ ಅಗತ್ಯವಿದೆ. ಭಾರತಕ್ಕೆ ಕ್ರಿಕೆಟ್ ನಲ್ಲಿ ಮೀಸಲಾತಿ ಇದ್ದಿದ್ದರೆ ಭಾರತ ಸುಲಭವಾಗಿ ಈ ವಿಶ್ವಕಪ್ ಅನ್ನು ಗೆಲ್ಲುತ್ತಿತ್ತು” ಎಂದು ನಟ ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಟ್ವೀಟ್ ಮಾಡಿದ್ದಾರೆ. ಚೇತನ್ ಅವರ ಈ ಟ್ವೀಟ್ ನೆಟ್ಟಿಗರನ್ನು ಕೆರಳಿಸಿದೆ.

ಯಾವುದೇ ಕ್ರೀಡೆಯಲ್ಲಿ ಆಯ್ಕೆಯ ಮೇಲೆ ಕಣ್ಣಿಗೆ ಕಾಣದ ಕೈ ಪ್ರಭಾವ ಬೀರುವುದು ಹೊಸದೇನಲ್ಲ, ಆಶ್ಚರ್ಯವೂ ಅಲ್ಲ. ಆದರೆ ಕ್ರೀಡೆಯಲ್ಲಿ ಮೀಸಲಾತಿ ಬಯಸುವ ಮನಸ್ಥಿತಿ ಹೊಂದಿರುವ ಪ್ರತಿಯೊಬ್ಬ, ಆಟಗಾರನ ಸಾಮರ್ಥ್ಯವನ್ನು ಅವಮಾನಿಸುವ ಮನಸ್ಸು ಹೊಂದಿರುತ್ತಾರೆ ಎಂದು ಚೇತನ್ ಟ್ವೀಟ್ ನ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಿಪಡಿಸಿದ್ದಾರೆ.

Join Nadunudi News WhatsApp Group

ಭಾರತೀಯ ಕ್ರಿಕೆಟಿಗರು ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡುವುದಿಲ್ಲ
ಇನ್ನು ಕ್ರಿಕೆಟ್ ನ ಬಗ್ಗೆ ಮೀಸಲಾತಿ ವಿಷಯವಾಗಿ ಟ್ವೀಟ್ ಮಾಡುವುದಕ್ಕೂ ಮುನ್ನ ಈ ರೀತಿಯಾಗಿ ಇನ್ನೊಂದು ಟ್ವೀಟ್ ಮಾಡಿದ್ದರು. ‘ಭಾರತೀಯರು ಕ್ರಿಕೆಟಿಗರು ಇಂದು ಚೆಂಡನ್ನು ಎಸೆಯಬಹುದು, ಹಿಡಿಯಬಹುದು ಅಥವಾ ಹೊಡೆಯಬಹದು ಆದರೆ ರಾಷ್ಟ್ರ ನಿರ್ಮಾಣಕ್ಕೆ ಹೆಚ್ಚಿನ ಕೊಡುಗೆಯನ್ನು ನೀಡುವುದಿಲ್ಲ. 100 + ವರ್ಷಗಳ ಹಿಂದೆ ಪಲ್ವಂಕರ್ ಬಾಲು ಮತ್ತು ಭಾರತದ 1 ನೇ ದಲಿತ ಕ್ರಿಕೆಟಿಗ ಬಾಬಾ ಸಾಹೇಬ್ ಅವರ ಕಾರ್ಯಕರ್ತ ಮತ್ತು ಪರಿಚಯಸ್ಥರಾಗಿದ್ದರು.. ಭಾರತಕ್ಕೆ ಸಮಾಜವನ್ನು ಕಾಳಜಿ ವಹಿಸುವ ಕ್ರಿಕೆಟಿಗರ ಅಗತ್ಯವಿದೆ, ಹಣ ಮತ್ತು ವೈಭವದಲ್ಲಲ್ಲ’ ಎಂದು ಟ್ವೀಟ್ ಮಾಡಿದ್ದರು.

Join Nadunudi News WhatsApp Group