Chicken Form: ಈ ಕೋಳಿ ಫಾರ್ಮ್ ತೆರೆದರೆ ಕೆಲವೇ ತಿಂಗಳಲ್ಲಿ ನೀವು ಲಕ್ಷಾಧಿಪತಿಗಳು ಆಗಬಹುದು, ಲಾಭದಾಯಕ ಬಿಸಿನೆಸ್.

ಕೋಳಿ ಫಾರಂ ವ್ಯವಹಾರದಿಂದ ಎಷ್ಟು ಹಣ ಗಳಿಸಬಹುದು ಎನ್ನುವ ಬಗ್ಗೆ ಮಾಹಿತಿ ತಿಳಿದುಕೊಳ್ಳಿ.

Poultry Form Business Tip: ದೇಶಿಯ ಮಾರುಕಟ್ಟೆಯಲ್ಲಿ ಎಲ್ಲ ರೀತಿಯ ವ್ಯವಹಾರವು ಬೇಡಿಕೆಯನ್ನು ಪಡೆದುಕೊಂಡಿದೆ ಎನ್ನಬಹುದು. ಇನ್ನು ಯಾವುದೇ ವ್ಯವಹಾರವನ್ನು ಪ್ರಾರಂಭಿಸಬೇಕಿದ್ದರು ಅದಕ್ಕೆ ಬೇಕಾಗುವ ಬಂಡವಾಳದ ಬಗ್ಗೆ ಗಮನ ಹರಿಸುವುದು ಸಹಜ. ಸಾಕಷ್ಟು ಜನರಲ್ಲಿ ಸ್ವಂತ ಉದ್ಯೋಗದ ಕನಸಿದ್ದರು ಹಣಕಾಸಿನ ತೊಂದರೆಯ ಕಾರಣ ತಮ್ಮ ಆಸೆಯನ್ನು ಕೈಬಿಡುತ್ತಾರೆ.

ಭಾರತೀಯ ಮಾರುಕಟ್ಟೆಯಲ್ಲಿ ಕೋಳಿ ಸಾಕಾಣಿಕೆಯ ವ್ಯವಹಾರ ಬಹುದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಕೋಳಿ ಸಾಕಾಣಿಕೆಯು ಹೆಚ್ಚಿನ ಲಾಭವನ್ನು ನೀಡುತ್ತದೆ. ಮಾಂಸ ಉತ್ಪಾದನೆಗೆ ಕೋಳಿಗಳನ್ನು ಹೆಚ್ಚು ಸಾಕಾಣಿಕೆ ಮಾಡಲಾಗುತ್ತದೆ. ಮಾಂಸಗಳಲ್ಲಿ ಕೋಳಿ ಮಾಂಸಗಳಿಗೆ ಹೆಚ್ಚಿನ ಬೇಡಿಕೆ ಇದೆ. ಇದೀಗ ಕೋಳಿ ವ್ಯಾಪಾರದ ಬಗ್ಗೆ ಒಂದಿಷ್ಟು ವಿವರ ತಿಳಿದುಕೊಳೋಣ.

Chicken Farm Business Tips
Image Credit: Livibatterycage

ಈ Chicken Formತೆರೆದರೆ ಕೆಲವೇ ತಿಂಗಳಲ್ಲಿ ನೀವು ಲಕ್ಷಾಧಿಪತಿಗಳು ಆಗಬಹುದು
Chicken ಸಾಕಾಣಿಕೆ ಮಾಡಿದರೆ ಕೋಳಿ ಮೊಟ್ಟೆಗಳಿನಿಂದ ಕೂಡ ಆದಾಯವನ್ನು ಗಳಿಸಬಹುದಾಗಿದೆ. ಕೋಳಿಗಳ ಆರೈಕೆಗಾಗಿ ಹೆಚ್ಚು ಖರ್ಚು ಮಾಡಬೇಕಾಗುತ್ತದೆ. ಇದು ಶುಚಿಗೊಳಿಸುವಿಕೆ, ವ್ಯಾಕ್ಸಿನೇಷನ್ ಮತ್ತು ಕೋಳಿ ಆಹಾರದ ವೆಚ್ಚವನ್ನು ಸಹ ಒಳಗೊಂಡಿದೆ. ಮೊಟ್ಟೆ ಇಡಲು ಕೋಳಿ ದಿನಕ್ಕೆ 110 ಗ್ರಾಂ ಧಾನ್ಯವನ್ನು ತಿನ್ನುತ್ತದೆ. ಇದು ಮಾರುಕಟ್ಟೆಯಲ್ಲಿ ಕೆಜಿಗೆ 22-25 ರೂ. ಗೆ ಲಭ್ಯವಿದೆ. ಒಂದು ಕೋಳಿಗೆ ಸರಿಸುಮಾರು 0.8 ಚದರ ಅಡಿ ಜಾಗ ಬೇಕಾಗುತ್ತದೆ.

Poultry Farm Business ಮಾಡುವ ಮೂಲಕ ನೀವು ಪ್ರತಿದಿನ ಲಕ್ಷ ಲಕ್ಷ ಆದಾಯವನ್ನು ಗಳಿಸಬಹುದು. ಒಂದು ಕೋಳಿ ತನ್ನ 72 ವಾರಗಳ ವಾಣಿಜ್ಯ ಜೀವಿತಾವಧಿಯಲ್ಲಿ 360 ಮೊಟ್ಟೆಗಳನ್ನು ಇಡುತ್ತದೆ. ಒಂದು ಕೋಳಿ ಸುಮಾರು 2 ರಿಂದ 3 ವರ್ಷಗಳವರೆಗೆ ಜೀವಿಸುತ್ತದೆ. ಮೊಟ್ಟೆ ಸಿಗದಿದ್ದರೂ ಈ ಕೋಳಿಗಳಿಗೆ ಉತ್ತಮ ಬೆಲೆ ಸಿಗುತ್ತದೆ. ಮೊಟ್ಟೆಗಳು ಪ್ರೊಟೀನ್ ಮೂಲ ಎನ್ನುವ ಬಗ್ಗೆ ಎಲ್ಲರಿಗು ತಿಳಿದೇ ಇದೆ.

Chicken Farm Business profit
Image Credit: Other Source

ಕೋಳಿ ಫಾರಂ ವ್ಯವಹಾರದಿಂದ ಎಷ್ಟು ಹಣ ಗಳಿಸಬಹುದು..?
ಕೋಳಿ ಫಾರಂನಲ್ಲಿ ಕೋಳಿಗಳಿಂದ ಒಂದು ಮೊಟ್ಟೆಯನ್ನು ತಯಾರಿಸಲು 3.50 ರಿಂದ 4 ರೂ. ಬೇಕಾಗಬಹುದು. ಇದರಲ್ಲಿ ಕೋಳಿಗಳಿಗೆ ಆಹಾರ ನೀಡುವುದು, ಅವುಗಳ ಆರೈಕೆ ಇತ್ಯಾದಿ ಸೇರಿಕೊಂಡಿದೆ. ಮಾರುಕಟ್ಟೆಯಲ್ಲಿ ಮೊಟ್ಟೆಯ ಬೆಲೆ 5 ರಿಂದ 10 ರೂ. ಮೊಟ್ಟೆಗಳ ಬೆಲೆ ಸಂಪೂರ್ಣವಾಗಿ ಕೋಳಿ ಜಾತಿಯ ಮೇಲೆ ಅವಲಂಬಿತವಾಗಿರುತ್ತದೆ.

Join Nadunudi News WhatsApp Group

ಮಾಮೂಲಿ ದೇಸಿ ಕೋಳಿಗಳನ್ನು ಹೊರತುಪಡಿಸಿ ಕಡಕ್ ನಾಥ್ ಮೊಟ್ಟೆ ಒಂದಕ್ಕೆ 30 ರೂ. ಒಂದು ಅಂದಾಜಿನ ಪ್ರಕಾರ 50,000 ರೂಪಾಯಿ ಬಂಡವಾಳದಲ್ಲಿ ಕೋಳಿ ಫಾರಂ ಆರಂಭಿಸಿ, ಪ್ರತಿ ತಿಂಗಳು ಸುಮಾರು 3 ಲಕ್ಷ ರೂಪಾಯಿ ಲಾಭ ಗಳಿಸಬಹುದು.

Join Nadunudi News WhatsApp Group