Chicken Meet: ಚಿಕನ್ ಪ್ರಿಯರಿಗೆ ಬೇಸರದ ಸುದ್ದಿ, ಚಿಕನ್ ಮಾಂಸದ ಬೆಲೆಯಲ್ಲಿ ದಾಖಲೆಯ ಏರಿಕೆ

ಚಿಕನ್ ಬೆಲೆಯಲ್ಲಿ ದಾಖಲೆಯ ಏರಿಕೆ, ಕೋಳಿ ಪ್ರಿಯರಿಗೆ ಬೇಸರದ ಸುದ್ದಿ

Chicken Meet Price Hike: ದೇಶದಲ್ಲಿ ಒಂದಲ್ಲ ಒಂದು ವಸ್ತುವಿನ ಬೆಲೆ ಆಗಾಗ ಏರಿಕೆ ಆಗುತ್ತಲೇ ಇದೆ. ಇತ್ತೀಚೆಗಂತೂ ಜನರಿಗೆ ಅಗತ್ಯವಿರುವ ವಸ್ತುಗಳ ಬೆಲೆಯಲ್ಲಿ ಏರಿಕೆ ಕಂಡು ಬರುತ್ತಿದೆ. ಹಾಲು, ತರಕಾರಿ, ಬೇಳೆಕಾಳು, ಗ್ಯಾಸ್ ಸಿಲಿಂಡರ್, ಈರುಳ್ಳಿ, ಬೆಳ್ಳುಳ್ಳಿ ಸೇರಿದಂತೆ ಇದೀಗ ಮಾಂಸಗಳ ಬೆಲೆ ಕೂಡ ಏರಿಕೆಯತ್ತ ಮುಖ ಮಾಡುತ್ತಿದೆ. ಸದ್ಯ ಮಾರುಕಟ್ಟೆಯಲ್ಲಿ ಮಾಂಸ ಪ್ರಿಯರ Chicken ದರ ಇದೀಗ ಗಗನಕ್ಕೇರಿದೆ. ಚಿಕನ್ ದರದ ಏರಿಕೆಯು ಮಾಂಸ ಪ್ರಿಯರನ್ನು ಕಂಗಾಲು ಮಾಡಿದೆ ಎನ್ನಬಹುದು.

chicken price hike
Image Credit: Original Source

ಮಾಂಸ ಪ್ರಿಯರಿಗೆ ಬಿಗ್ ಶಾಕಿಂಗ್ ನ್ಯೂಸ್
ಇತ್ತೀಚಿಗೆ ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ದರ ಬರೋಬ್ಬರಿ ಏರಿಕೆ ಕಾಣುತ್ತಿದೆ. ಈಗಲೂ ಕೂಡ ಬೆಳ್ಳುಳ್ಳಿ ದರ ಏರುಗತಿಯಲ್ಲಿಯೇ ಸಾಗುತ್ತಿದೆ ಎನ್ನಬಹುದು. ಬೆಳ್ಳುಳ್ಳಿಯ ಬೆಲೆಯ ಏರಿಕೆಯೇ ಜನರು ರೋಸಿಹೋಗಿದ್ದರು. ಇದೀಗ ಬೆಳ್ಳುಳಿ ದರದ ಏರಿಕೆಯ ಬೆನ್ನಲ್ಲೇ ಮಾರುಕಟ್ಟೆಯಲ್ಲಿ ಚಿಕನ್ ದರ ಗಗನಕ್ಕೇರಿದೆ. ಹೌದು, ಮಾರುಕಟ್ಟೆಯಲ್ಲಿ ಕೋಳಿ ಮಾಂಸದ ದರ ದಿಡೀರ್ ಏರಿಕೆಯಾಗಿದೆ. ಈ ಮೂಲಕ ಮಾಂಸ ಪ್ರಿಯರಿಗೆ ಶಾಕ್ ನೀಡಿದೆ ಎನ್ನಬಹುದು.

ಮಾರುಕಟ್ಟೆಯಲ್ಲಿ ಚಿಕೆನ್ ಬೆಲೆ ದಿಢೀರ್ ಏರಿಕೆ
ಈ ಹಿಂದೆ ಮಾರುಕಟ್ಟೆಯಲ್ಲಿ ಚಿಕೆನ್ ಕೆಜಿಗೆ 100 ರಿಂದ 150 ರೂ. ಗಳಲ್ಲಿ ಲಭ್ಯವಾಗುತ್ತಿತ್ತು. ಆದರೆ ಇದೀಗ ಮಾರುಕಟ್ಟೆಯಲ್ಲಿ ಒಮ್ಮೆಲೇ ಚಿಕನ್ ದರ ಜಿಗಿತ ಕಂಡಿದೆ. ಒಂದು ವರದ ಹಿಂದೆ 180 ರೂ. ಇದ್ದ ಚಿಕನ್ ಬೆಲೆ ಇದೀಗ ದಿಡೀರ್ 250 ರೂ. ತಲುಪಿದೆ. ಒಂದು ಕೆಜಿ ಚಿಕನ್ ಖರೀದಿಸಲು ಈಗ ಮಾಂಸಪ್ರಿಯರು ಹೆಚ್ಚಿನ ಹಣವನ್ನು ನೀಡುವ ಪರಿಸ್ಥಿತಿ ಎದುರಾಗಿದೆ.

chicken meet price hike in karnataka
Image Credit: Original Source

ಚಿಕೆನ್ ಬೆಲೆ ದಿಢೀರ್ ಏರಿಕೆಗೆ ಕಾರಣವೇನು..?
ಮೇಲಿಂದ ಮೇಲೆ ಜನಸಾಮಾನ್ಯರಿಗೆ ಬೆಲೆ ಏರಿಕೆಯ ಬಿಸಿ ತಾಗುತ್ತಿದೆ ಎನ್ನಬಹುದು. ತಾಪಮಾನದ ಏರಿಕೆಯ ಹಿನ್ನಲೆ ಕೋಳಿಗಳ ಬೆಳವಣಿಗೆ ಹೆಚ್ಚಿನ ಪ್ರಮಾಣದಲ್ಲಿ ಕುಂಠಿತವಾಗುತ್ತಿದೆ. ಬಿಸಿಲಿನ ದಗೆ ಹಾಗೂ ಶೆಕೆ ತಾಳದೆ ಕೋಳಿಗಳು ಸಾವನ್ನಪ್ಪುತ್ತಿವೆ. ಹೀಗಾಗಿ ಕೋಳಿ ಮಾಂಸ ಉತ್ಪಾದನೆ ಕಡಿಮೆಯಾಗಿದೆ. ಕೋಳಿ ಮಾಂಸ ಉತ್ಪಾದನೆಯ ಮೇಲೆ ಪ್ರಭಾವ ಬೀರಿದ್ದ ಕಾರಣ ಮಾರುಕಟ್ಟೆಯಲ್ಲಿ ಚಿಕನ್ ದರ ದಿಢೀರ್ ಏರಿಕೆ ಕಾಣುತ್ತಿವೆ.

Join Nadunudi News WhatsApp Group

Join Nadunudi News WhatsApp Group