Child Life Insurance: ಹೆತ್ತವರಿಗೆ ಇನ್ಮುಂದೆ ಮಕ್ಕಳ ಶಿಕ್ಷಣ ಮತ್ತು ಮದುವೆಯ ಚಿಂತೆ ಇಲ್ಲ, ಮಕ್ಕಳಿಗಾಗಿ ಬಂತು ವಿಶೇಷ ವಿಮಾ ಪಾಲಿಸಿ.

ಪೋಸ್ಟ್ ಆಫೀಸ್ ನಲ್ಲಿ ಮಕ್ಕಳಿಗಾಗಿ ಬಂತು ವಿಶೇಷ ವಿಮಾ ಪಾಲಿಸಿ, ಮಕ್ಕಳ ಭವಿಷ್ಯಕ್ಕೆ ಒಂದೇ ಯೋಜನೆ ಆರಂಭಿಸಿ

Child Life Insurance Scheme: ಸಾಮಾನ್ಯವಾಗಿ ಮಕ್ಕಳ ಭವಿಷ್ಯದ ಚಿಂತೆ ಎಲ್ಲರಿಗು ಇದ್ದೆ ಇರುತ್ತದೆ. ಮಕ್ಕಳಿಗೆ ಉತ್ತಮ ಭವಿಷ್ಯವನ್ನು ರೂಪಿಸುವುದು ಪೋಷಕರ ಜವಾಬ್ದಾರಿಯಾಗಿರುತ್ತದೆ. ಮಕ್ಕಳ ಶಿಕ್ಷಣದಿಂದ ಹಿಡಿದು ಮಕ್ಕಳ ಸಂಪೂರ್ಣ ಭವಿಷ್ಯವನ್ನು ರೂಪಿಸುವ ಹೊಣೆ ಹೆತ್ತವರದ್ದೇ ಆಗಿರುತ್ತದೆ. ಮಕ್ಕಳ ಭವಿಷ್ಯಕ್ಕಾಗಿ ಹೂಡಿಕೆಯ ಯೋಜನೆಗಳು ಸಹಾಯವಾಗುತ್ತದೆ.

ಮಕ್ಕಳು ಸಣ್ಣ ವಯಸ್ಸಿನಲ್ಲಿರುವಾಗಲೇ ಹೂಡಿಕೆಯನ್ನು ಆರಂಭಿಸಿದರೆ ಅವರ ಶಿಕ್ಷಣ ಮಾಡುವೆ ಎಲ್ಲದ್ದಕ್ಕೂ ಸಹಾಯವಾಗುತ್ತದೆ. ಸಣ್ಣ ಉಳಿತಾಯ ಯೋಜನೆಗಲಿಗಿಂತಾ ಮಕ್ಕಳ ಹೆಸರಿನಲ್ಲಿ ಜೀವ ವಿಮ ಯೋಜನೆಗಳ ಹೂಡಿಕೆ ಹೆಚ್ಚಿನ ಪ್ರಯೋಜನಕಾರಿಯಾಗುತ್ತದೆ. ಅಂಚೆ ಕಚೇರಿಯು ಮಕ್ಕಳಿಗಾಗಿ ಜೀವ ವಿಮ ಯೋಜನೆಯನ್ನು ಪರಿಚಯಿಸಿದೆ. ಈ ಜೀವ ವಿಮ ಯೋಜನೆ ಯಾವುದು..? ವಿಮ ಯೋಜನೆಯ ಹೂಡಿಕೆ ಹೇಗೆ..? ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

Child Life Insurance Scheme
Image Credit: Drivemidia

Child Life Insurance Scheme
ಮಕ್ಕಳ ಜೀವ ವಿಮೆಯನ್ನು ಮಕ್ಕಳ ಪೋಷಕರು ತೆಗೆದುಕೊಳ್ಳುತ್ತಾರೆ. ಈ ಯೋಜನೆಯ ಲಾಭವನ್ನು ಗರಿಷ್ಠ ಇಬ್ಬರು ಮಕ್ಕಳು ಸಹ ಪಡೆಯುತ್ತಾರೆ. ಪೋಷಕರು 5 ರಿಂದ 20 ವರ್ಷದೊಳಗಿನ ತಮ್ಮ ಮಕ್ಕಳಿಗೆ ಈ ಯೋಜನೆಯನ್ನು ಖರೀದಿಸಬಹುದು. ತಮ್ಮ ಮಕ್ಕಳಿಗೆ ಈ ವಿಮಾ ಯೋಜನೆಯನ್ನು ಖರೀದಿಸಲು ಬಯಸುವ ಪೋಷಕರ ವಯಸ್ಸು 45 ವರ್ಷಕ್ಕಿಂತ ಹೆಚ್ಚಿರಬಾರದು.

ಮಕ್ಕಳ ಜೀವ ವಿಮಾ ಯೋಜನೆಯ ಹೂಡಿಕೆಯ ವಿಧಾನ ಹೇಗೆ..?
ಅಂಚೆ ಕಛೇರಿಯ ವಿಮೆಯ ಅಡಿಯಲ್ಲಿ 3 ಲಕ್ಷದ ವರೆಗಿನ ವಿಮಾ ಮೊತ್ತವು ಲಭ್ಯವಿದೆ. ನೀವು ಗ್ರಾಮೀಣ ಅಂಚೆ ಕಛೇರಿ ವಿಮೆ ಅಡಿಯಲ್ಲಿ ಪಾಲಿಸಿಯನ್ನು ತೆಗೆದುಕೊಂಡಿದ್ದರೆ ನಂತರ ಪಾಲಿಸಿದಾರರು 1 ಲಕ್ಷದವರೆಗಿನ ವಿಮಾ ಮೊತ್ತವನ್ನು ಪಡೆಯುತ್ತಾರೆ. ಇದರಲ್ಲಿ ನೀವು ಎಂಡೋಮೆಂಟ್ ಪಾಲಿಸಿಯಂತಹ ಬೋನಸ್ ಅನ್ನು ಸಹ ಪಡೆಯುತ್ತೀರಿ.

ನೀವು ಗ್ರಾಮೀಣ ಪೋಸ್ಟಲ್ ಲೈಫ್ ಇನ್ಶೂರೆನ್ಸ್ ಅಡಿಯಲ್ಲಿ ಈ ಪಾಲಿಸಿಯನ್ನು ತೆಗೆದುಕೊಂಡಿದ್ದರೆ, ನಿಮಗೆ ರೂ. 1,000 ವಿಮಾ ಮೊತ್ತದ ಮೇಲೆ ವಾರ್ಷಿಕವಾಗಿ ರೂ. 48 ಬೋನಸ್ ನೀಡಲಾಗುತ್ತದೆ. ಆದರೆ ಪೋಸ್ಟ್ ಆಫೀಸ್ ಇನ್ಶೂರೆನ್ಸ್ ಅಡಿಯಲ್ಲಿ, ಪ್ರತಿ ವರ್ಷ ರೂ. 52 ಬೋನಸ್ ನೀಡಲಾಗುತ್ತದೆ.

Join Nadunudi News WhatsApp Group

Child Life Insurance Scheme Updates
Image Credit: The Economic times

ವಿಮ ಯೋಜನೆಯ ಪ್ರಯೋಜನಗಳು
ಹೂಡಿಕೆದಾರರು 5 ವರ್ಷಗಳ ಕಾಲ ನಿಯಮಿತ ಪ್ರೀಮಿಯಂ ಪಾವತಿಸಿದ ನಂತರ, ಈ ಪಾಲಿಸಿಯು ಪಾವತಿಸಿದ ಪಾಲಿಸಿಯಾಗುತ್ತದೆ. ಈ ಯೋಜನೆಯಲ್ಲಿ ಪ್ರೀಮಿಯಂ ಪಾವತಿಸುವುದು ಪೋಷಕರ ಜವಾಬ್ದಾರಿಯಾಗಿದೆ. ಆದರೆ ಪಾಲಿಸಿಯ ಮುಕ್ತಾಯದ ಮೊದಲು ಅವರು ಸತ್ತರೆ, ನಂತರ ಮಕ್ಕಳ ಪ್ರೀಮಿಯಂ ಅನ್ನು ಮನ್ನಾ ಮಾಡಲಾಗುತ್ತದೆ. ಮಗು ಸತ್ತರೆ ನಾಮಿನಿಗೆ ಬೋನಸ್‌ ನೊಂದಿಗೆ ವಿಮಾ ಮೊತ್ತವನ್ನು ನೀಡಲಾಗುತ್ತದೆ. ಈ ಪಾಲಿಸಿಯ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಹತ್ತಿರ ಅಂಚೆ ಕಚೇರಿಗೆ ಇಂದೇ ಭೇಟಿ ನೀಡಬಹುದಾಗಿದೆ.

Join Nadunudi News WhatsApp Group