Marriage Divorce: ತಾಯಿ ಡಿವೋರ್ಸ್ ಕೊಟ್ಟರೆ ಮಕ್ಕಳಿಗೆ ಅಪ್ಪನ ಆಸ್ತಿಯಲ್ಲಿ ಪಾಲು ಸಿಗುತ್ತಾ, ಕೋರ್ಟ್ ತೀರ್ಪು ಪ್ರಕಟ

ತಾಯಿ ವಿಚ್ಛೇಧನ ಪಡೆದರೆ ಮಕ್ಕಳಿಗೆ ಅಪ್ಪನ ಆಸ್ತಿಯಲ್ಲಿ ಎಷ್ಟು ಪಾಲಿದೆ ಎನ್ನುವ ಬಗ್ಗೆ ನ್ಯಾಯಾಲಯ ಮಹತ್ವದ ತೀರ್ಪನ್ನು ನೀಡಿದೆ.

Children’s property Right: ಇತ್ತೀಚಿನ ದಿನಗಳಲ್ಲಿ ದಾಂಪತ್ಯ ಜೀವನದಲ್ಲಿ ಬಿರುಕು ಉಂಟಾಗಿ ವಿಚ್ಛೇದನ ಪಡೆದಿರುವವರ ಸಂಖ್ಯೆ ಸಾಕಷ್ಟಿದೆ. ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು ಕೂಡ ಯಾವುದೊ ಒಂದು ಸಣ್ಣ ಕಾರಣಗಳಿಗೆ ದಂಪತಿಗಳು ವಿಚ್ಛೇದನ ಪಡೆಯುತ್ತಾರೆ.

ಇನ್ನು ವಿಚ್ಛೇದನ ಪಡೆದ ಮೇಲೆ ವಿಚ್ಛೇದನ ಪಡೆದ ಮಕ್ಕಳಿಗೆ ಅವರ ಆಸ್ತಿಯಲ್ಲಿ ಪಾಲು ಇರುವ ಬಗ್ಗೆ ಸಾಕಷ್ಟು ಗೊಂದಲಗಳಿರುತ್ತದೆ. ತಾಯಿ ವಿಚ್ಛೇಧನ ಪಡೆದರೆ ಮಕ್ಕಳಿಗೆ ಅಪ್ಪನ ಆಸ್ತಿಯಲ್ಲಿ ಎಷ್ಟು ಪಾಲಿದೆ ಎನ್ನುವ ಬಗ್ಗೆ ನ್ಯಾಯಾಲಯ ಮಹತ್ವದ ತೀರ್ಪನ್ನು ನೀಡಿದೆ.

What is the right of the children in the father's property if the mother gets divorced?
Image Credit: Legalwiz

ತಾಯಿ ವಿಚ್ಛೇಧನ ಪಡೆದರೆ ಮಕ್ಕಳಿಗೆ ಅಪ್ಪನ ಆಸ್ತಿಯಲ್ಲಿ ಎಷ್ಟು ಹಕ್ಕಿದೆ
ದಂಪತಿ ವಿಚ್ಛೇದನ ಪಡೆದಾಗ ತಂದೆಯು ಇನ್ನೊಂದು ಮದುವೆ ಆದರೆ ಮೊದಲ ಪತ್ನಿಯ ಮಗುವಿಗೆ ತಂದೆಯ ಸ್ವಯಾರ್ಜಿತ ಮತ್ತು ಪೂರ್ವಜರ ಆಸ್ತಿಯಲ್ಲಿ ಹಕ್ಕು ಇರುತ್ತದೆ ಎಂದು ಹೈಕೋರ್ಟ್ ಆದೇಶ ನೀಡಿದೆ.

ತಂದೆಯ ಆಸ್ತಿಯಲ್ಲಿ ಮಗುವಿಗೆ ಹಕ್ಕು ಇರಬಾರದು ಎನ್ನುವ ನಿಯಮದ ಮೇಲೆ ದಂಪತಿಗಳು ವಿಚ್ಛೇದನ ಪಡೆಯುವಂತಿಲ್ಲ ಎಂದು ಆದೇಶ ನೀಡಲಾಗಿದೆ. ಮಕ್ಕಳ ಆಸ್ತಿಯ ಹಕ್ಕುಗಳು ತಂದೆ ತಾಯಿಯ ವಿಚ್ಛೇದನದ ಬಳಿಕ ಯಾವುದೇ ಪರಿಣಾಮವನ್ನು ಬೀರುವುದಿಲ್ಲ. ತಂದೆಯ ಸ್ವಯಾರ್ಜಿತ ಆಸ್ತಿಯ ಮೇಲೆ ಮಕ್ಕಳು ಹಕ್ಕನ್ನು ಹೊಂದಿರುತ್ತಾರೆ.

ಪತ್ನಿಗೆ ನೀಡುವ ಜೀವನಾಂಶದ ಕುರಿತು ಮಹತ್ವದ ಆದೇಶ
ಇನ್ನು ದಂಪತಿಗಳು ತಮ್ಮ ಒಪ್ಪಿಗೆಯ ಮೇರೆಗೆ ವಿಚ್ಛೇದನ ಪಡೆಯುತ್ತಾರೆ. ಇನ್ನು ಪತಿಯು ತನ್ನ ಪತ್ನಿಗೆ ಜೀವನಾಂಶವನ್ನು ನೀಡಬೇಕಾಗುತ್ತದೆ. ಪತಿಯು ವಿಚ್ಛೇದನನ ಬಳಿಕ ಪತ್ನಿಗೆ ನೀಡುವ ಜೀವನಾಂಶದ ಕುರಿತು ಕೂಡ ಹೈಕೋರ್ಟ್ ಆದೇಶವನ್ನು ಹೊರಡಿಸಿದೆ.

Join Nadunudi News WhatsApp Group

What is the right of the children in the father's property if the mother gets divorced?
Image Credit: Supportpay

ಪತಿಯಿಂದ ವಿವಾಹ ವಿಚ್ಛೇಧನ ನೋಟಿಸ್ ಬಂದ ಬಳಿಕ ಪತ್ನಿ ತನ್ನ ಗಂಡ ಮತ್ತು ಪತಿಯ ಸಂಬಂಧಿಕರ ವಿರುದ್ಧ ಪ್ರಕರಣ ದಾಖಲಿಸಿದರೆ ಆ ಪ್ರಕರಣ ತನ್ನ ಮಹತ್ವವನ್ನು ಕಳೆದುಕೊಳ್ಳುತ್ತದೆ. ಇನ್ನು ಪತಿಗಿಂತ ಪತ್ನಿಗೆ ಹೆಚ್ಚು ಸಂಭಾವನೆ ಇದ್ದರೆ ಜೀವನಾಂಶ ನೀಡುವ ಅಗತ್ಯ ಇಲ್ಲ ಎಂದು ಕೋರ್ಟ್ ಆದೇಶ ನೀಡಿತ್ತು.

Join Nadunudi News WhatsApp Group