Influenza Virus: ಕರೋನ ಸಂಪೂರ್ಣ ಅಂತ್ಯಕ್ಕೂ ಮುನ್ನವೇ ಬಂತು ಇನ್ನೊಂದು ಮಹಾಮಾರಿ ವೈರಸ್, ಹೈ ಅಲರ್ಟ್ ಘೋಷಣೆ.

ಕೋವಿಡ್ ನಂತರ ಹೊಸ ಅಲೆ ಎಬ್ಬಿಸಲು ಬಂದ ವೈರಸ್, 5 ರಾಜ್ಯಗಳಲ್ಲಿ ಮಾರ್ಗಸೂಚಿ ಬಿಡುಗಡೆ.

China Influenza Virus 2023: ಕಳೆದ ಎರಡು ವರ್ಷಗಳ ಹಿಂದೆ ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿದ Corona Virus ಅನ್ನು ಯಾರು ಮರೆಯಲು ಸಾಧ್ಯವಿಲ್ಲ. ಈ ಕೊರೊನ ವೈರಸ್ ನಿಂದ ಲಕ್ಷಾಂತರ ಜನ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ದೇಶದಲ್ಲಿ ಕೆಲವು ತಿಂಗಳು ಲಾಕ್ ಡೌನ್ ಅನ್ನು ಕೂಡ ಮಾಡಲಾಗಿತ್ತು.

Corona Virus ಅಂದರೆ ಒಂದು ಕ್ಷಣ ಎಲ್ಲರೂ ಬೆಚ್ಚಿ ಬೀಳುತ್ತಾರೆ ಏಕೆಂದರೆ ಅದು ಜನರಲ್ಲಿ ಅಷ್ಟೊಂದು ಭಯ ಹುಟ್ಟಿಸಿದೆ. ಇದೀಗ ಕೊರೊನ ವೈರಸ್ ಕಡಿಮೆ ಆಗಿದೆ ಎಂದು ನಿರಾಳರಾಗಿದ್ದ ಜನರಿಗೆ ಮತ್ತೊಂದು ಆಘಾತಕಾರಿ ಸುದ್ದಿ ಎದುರಾಗಿದೆ. ಹೌದು ಇದೀಗ ಚೀನಾದಲ್ಲಿ ಮತ್ತೊಂದು ವೈರಸ್ ಕಾಣಿಸಿಕೊಂಡಿದೆ.

Influenza Virus In China
Image Credit: Sky News

ಕೋವಿಡ್ ನಂತರ ಹೊಸ ಅಲೆ ಎಬ್ಬಿಸಲು ಬಂದ ವೈರಸ್
ಇನ್ನೇನು ಕೊರೊನ ವೈರಸ್ ಕಡಿಮೆ ಆಗಿದೆ ಅನ್ನುವ ಹೊತ್ತಿಗೆ ಚೀನಾದಲ್ಲಿ influenza ವೈರಸ್ ನ ಭೀತಿ ಹೆಚ್ಚಾಗಿದೆ. ಈ ವೈರಸ್ ವಿಶೇಷವಾಗಿ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತದೆ. ಸಾಂಕ್ರಾಮಿಕ ರೋಗ ಹರಡುದನ್ನು ತಡೆಗಟ್ಟಲು ವೈದ್ಯಕೀಯ ಸಿಬಂದಿಗಳು ಜಾಗರೂಕರಾಗಬೇಕು ಹಾಗು ಮಕ್ಕಳ ಘಟಕಗಳು ಮತ್ತು ಔಷಧ ವಿಭಾಗದಲ್ಲಿ ಸಾಕಷ್ಟು ವ್ಯವಸ್ಥೆಯನ್ನು ಮಾಡಬೇಕು ಎಂದು ರಾಜಸ್ತಾನ ಅರೋಗ್ಯ ಇಲಾಖೆ ಆದೇಶ ಹೊರಡಿಸಿದೆ. ಉತ್ತರಾಖಂಡದ ಮೂರೂ ಜಿಲ್ಲೆಗಳು ಚೀನಾದೊಂದಿಗೆ ತನ್ನ ಗಡಿಯನ್ನು ಹಂಚಿಕೊಳ್ಳುತ್ತವೆ. ಅವುಗಳೆಂದರೆ ಚಮೋಲಿ, ಉತ್ತರಕಾಶಿ, ಪಿಥೋರಗಢ. ಹಾಗಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಅಧಿಕಾರಿಗಳಿಗೆ ತಿಳಿಸಿದ್ದಾರೆ.

5 ರಾಜ್ಯಗಳಲ್ಲಿ ಮಾರ್ಗಸೂಚಿ ಬಿಡುಗಡೆ
Rajasthan, Karnataka, Gujarat, Uttarakhand and Tamil Nadu ಈ ರಾಜ್ಯಗಳಲ್ಲಿ ಉಸಿರಾಟದ ಸಮಸ್ಯೆ ಕಂಡುಬಂದ ರೋಗಿಗಳನ್ನು ನಿಭಾಯಿಸಲು ಆಸ್ಪತ್ರೆಗಳು ಮತ್ತು ಆರೋಗ್ಯ ಸಿಬ್ಬಂದಿಯನ್ನು ನೇಮಕ ಮಾಡುವಂತೆ ರಾಜ್ಯ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಈ 5 ರಾಜ್ಯಗಳು ತಮ್ಮ ಆರೋಗ್ಯ ಮೂಲಸೌಕರ್ಯವನ್ನು ಅಲರ್ಟ್ ಮೋಡ್‌ ನಲ್ಲಿ (Alert Mode) ಇಡಲು ಸಜ್ಜಾಗಿದೆ. ಇನ್ನು ಈ ವೈರಸ್ ಬಗ್ಗೆ ನಾಗರಿಕರು ಜಾಗೃತರಾಗಿರಲು ಕರ್ನಾಟಕ ಆರೋಗ್ಯ ಇಲಾಖೆ ಸಹ ಕೇಳಿಕೊಂಡಿದೆ.

China influenza Virus 2023
Image Credit: News 18

ಜನಜಾಗ್ರತಿ ಕ್ರಮಗಳು
*ಕೆಮ್ಮುವಾಗ ಅಥವಾ ಸೀನುವಾಗ ನಿಮ್ಮ ಬಾಯಿ ಮತ್ತು ಮೂಗನ್ನು ಕರವಸ್ತ್ರ ದಿಂದ  ಮುಚ್ಚಿಕೊಳ್ಳಬೇಕು.

Join Nadunudi News WhatsApp Group

*ಸಾಬೂನು ಮತ್ತು ನೀರಿನಿಂದ ಕೈ ಅನ್ನು ಆಗಾಗ ತೊಳೆದುಕೊಳ್ಳುತಿರಬೇಕು.

*ಕಣ್ಣು, ಮೂಗು ಅಥವಾ ಬಾಯಿಯನ್ನು ಅನಗತ್ಯವಾಗಿ ಸ್ಪರ್ಶಿಸಬಾರದು.

*ಜನಸಂದಣಿ ಇರುವ ಸ್ಥಳಗಳಿಗೆ ಭೇಟಿ ನೀಡುವುದನ್ನು ಕಡಿಮೆ ಮಾಡಬೇಕು ಅಥವಾ ಅಂತಹ ಸ್ಥಳಗಳಿಗೆ ಹೋಗುವ ಮುನ್ನ ಮಾಸ್ಕ ಧರಿಸಬೇಕು.

*ಫ್ಲೂ ಪೀಡಿತ ವ್ಯಕ್ತಿಗಳಿಂದ ಕನಿಷ್ಠ ಅಂತರವನ್ನು ಕಾಯ್ದುಕೊಳ್ಳಬೇಕು.

*ಚನ್ನಾಗಿ ನಿದ್ರೆ ಮಾಡಬೇಕು, ದೈಹಿಕವಾಗಿ ಕ್ರಿಯಾಶೀಲರಾಗಿ ಮತ್ತು ಒತ್ತಡವನ್ನು ಪರಿಣಾಮಕಾರಿಯಾಗಿ ನಿಭಾಯಿಸಬೇಕು.

Join Nadunudi News WhatsApp Group