Gayle About Appu: ಅಪ್ಪು ಬಗ್ಗೆ ಮಾತನಾಡಿದ ಕ್ರಿಸ್ ಗೆಲ್, ವೈರಲ್ ಆಯಿತು ಅಪ್ಪು ಬಗ್ಗೆ ಗೆಲ್ ಹೇಳಿದ ಮಾತು.

ಇಂಟರ್ವ್ಯೂ ನಲ್ಲಿ ಯೂನಿವರ್ಸ್ ಬಾಸ್ ಮತ್ತು ಅಪ್ಪು ಬಾಸ್ ಬಗ್ಗೆ ಮಾತನಾಡಿದ್ದಾರೆ ಕ್ರಿಸ್ ಗೆಲ್

Chris Gayle Interview: ವೆಸ್ಟ್ ಇಂಡೀಸ್ ಅಂತಾರಾಷ್ಟ್ರೀಯ ಆಟಗಾರ ಕ್ರಿಸ್ ಗೆಲ್ (Chris Gayle) ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ಇನ್ನು ರಾಯಲ್ ಚಾಂಲೆಜರ್ಸ್ ಬೆಂಗಳೂರು ಟೀಮ್ ತಂಡದ ಪ್ರಮುಖ ಆಟಗಾರನಾಗಿ ಸಾಕಷ್ಟು ಕನ್ನಡಿಗರ ಮನಸ್ಸಿನಲ್ಲಿ ಸ್ಥಾನವನ್ನ ಗಿಟ್ಟಿಸಿಕೊಂಡಿದ್ದಾರೆ ಕ್ರಿಸ್ ಗೆಲ್

ಇದೀಗ ಕ್ರಿಕೆಟಿಗ ಕ್ರಿಸ್ ಗೆಲ್ ಅವರು ಸ್ಯಾಂಡಲ್ ವುಡ್ ನ ಸ್ಟಾರ್ ನಟರಾದ ಪುನೀತ್ ರಾಜಕುಮಾರ್ (Puneeth Rajkumar) ಅವರ ಬಗ್ಗೆ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಕ್ರಿಸ್ ಗೆಲ್ ಅವರು ಅಪ್ಪು ಬಗ್ಗೆ ಮಾತನಾಡಿರುವುದು ವೈರಲ್ ಆಗುತ್ತಿದೆ.

Gayle About Appu
Image Source: India Today

ಪುನೀತ್ ರಾಜಕುಮಾರ್ ಅವರನ್ನು ನೆನಪು ಮಾಡಿಕೊಂಡ ಕ್ರಿಸ್ ಗೆಲ್
ಆರ್ ಸಿಬಿ ತಂಡದ ಸಾಕಷ್ಟು ಆಟಗಾರರು ಕನ್ನಡ ಚಿತ್ರರಂಗದ ನಟರ ಬಗ್ಗೆ ಸಾಕಷ್ಟು ಬಾರಿ ಮಾತನಾಡಿದ್ದಾರೆ. ಇದೀಗ ಆರ್ ಸಿಬಿ ತಂಡದ ಮಾಜಿ ಆಟಗಾರ ಕ್ರಿಸ್ ಗೆಲ್ ಪುನೀತ್ ರಾಜಕುಮಾರ್ ಅವರ ಬಗ್ಗೆ ಮಾತನಾಡಿದ್ದಾರೆ. ಸಂದರ್ಶನದಲ್ಲಿ ಮಾತನಾಡುವಾಗ ಪುನೀತ್ ರಾಜಕುಮಾರ್ ಅವರನ್ನು ಕ್ರಿಸ್ ಗೆಲ್ ನೆನೆದಿದ್ದಾರೆ. ತಮ್ಮ ಇಷ್ಟದ ವಿಚಾರದ ಬಗ್ಗೆ ಚರ್ಚಿಸುವಾಗ ಕ್ರಿಸ್ ಗೆಲ್ ಸಂದರ್ಶನದಲ್ಲಿ ಪುನೀತ್ ಅವರ ಬಗ್ಗೆ ಪ್ರಶ್ನೆ ಕೇಳಲಾಗಿದೆ.

Gayle About Appu
Image Source: Filmineat

ಅಪ್ಪು ಬಾಸ್ ರಿಯಲ್ ಬಾಸ್ ಎಂದ ಕ್ರಿಸ್ ಗೆಲ್
ಸಂದರ್ಶನದಲ್ಲಿ ಮಾತನಾಡುವಾಗ ಕ್ರಿಸ್ ಗೆಲ್ ಅವರಿಗೆ ನೀವು ಕಲಬುರಗಿಯಲ್ಲಿ ಯಾವುದಾದರು ಮ್ಯೂಸಿಕ್ ಪ್ಲೇ ಮಾಡುತ್ತೀರಾ ಎನ್ನುವ ಪ್ರಶ್ನೆಯನ್ನು ಕೇಳಲಾಗಿದೆ. ಈ ಪ್ರಶ್ನೆಗೆ ಉತ್ತರಿಸಿದ ಕ್ರಿಸ್ ಗೆಲ್ “ಅಲ್ಲಿ ಕೇವಲ ಇಬ್ಬರು ಬಾಸ್ ಇದ್ದಾರೆ. ಯೂನಿವರ್ಸ್ ಬಾಸ್ ಹಾಗೂ ಅಪ್ಪು ಬಾಸ್. ಅಪ್ಪು ಬಾಸ್ ರಿಯಲ್ ಬಾಸ್” ಎಂದು ಕ್ರಿಸ್ ಗೆಲ್ ಹೇಳಿದ್ದಾರೆ. ಹಾಗೆಯೇ ಪುನೀತ್ ರಾಜಕುಮಾರ್ ಅಭಿನಯದ ದೊಡ್ಮನೆ ಹುಡಕ ಚಿತ್ರದ ತ್ರಾಸ್ ಆಕೈತಿ ಹಾಡನ್ನು ಕ್ರಿಸ್ ಗೆಲ್ ಹಾಡಿದರು.

Gayle About Appu
Image Source: Hindusthan Times

Join Nadunudi News WhatsApp Group

Join Nadunudi News WhatsApp Group