Chris Gayle: ವಿರಾಟ್ ಕೊಹ್ಲಿ ಬಗ್ಗೆ ದೊಡ್ಡ ಭವಿಷ್ಯ ನುಡಿದ ಕ್ರಿಸ್ ಗೆಲ್, ನಿಜವಾಗುತ್ತ ಗೆಲ್ ನುಡಿದ ಭವಿಷ್ಯ.

ವಿರಾಟ್ ಕೊಹ್ಲಿ ಅವರ ವಿಶ್ವಕಪ್ ಆಟದ ಬಗ್ಗೆ ಭವಿಷ್ಯ ನುಡಿದ ಕ್ರಿಸ್ ಗೆಲ್.

Chris Gayle About Virat Kohli: ವೆಸ್ಟ್ ಇಂಡೀಸ್ ಅಂತಾರಾಷ್ಟ್ರೀಯ ಆಟಗಾರ ಕ್ರಿಸ್ ಗೆಲ್ (Chris Gayle) ಇದೀಗ ಸುದ್ದಿಯಲ್ಲಿದ್ದಾರೆ. ಇದೀಗ ಕ್ರಿಸ್ ಗೆಲ್ ವಿರಾಟ್ ಕೊಹ್ಲಿ ಅವರ ಬಗ್ಗೆ ಮಾತನಾಡಿ ಮತ್ತೆ ಸುದ್ದಿಯಾಗಿದ್ದಾರೆ. ವಿರಾಟ್ ಕೊಹ್ಲಿ (Virat Kohli) ಹಾಗೂ ಕ್ರಿಸ್ ಗೆಲ್ ಉತ್ತಮ ಸ್ನೇಹಿತರಾಗಿದ್ದಾರೆ.

ಈ ಹಿಂದೆ ಸಾಕಷ್ಟು ಬಾರಿ ಕ್ರಿಸ್ ಗೆಲ್ ವಿರಾಟ್ ಕೊಹ್ಲಿ ಅವರ ಕುರಿತು ಮೆಚ್ಚುಗೆಯ ಮಾತನಾಡಿದ್ದರು. ಇದೀಗ ವಿರಾಟ್ ಕೊಹ್ಲಿ ಬಗ್ಗೆ ಕ್ರಿಸ್ ಗೆಲ್ ದೊಡ್ಡ ಬಹುಷ್ಯ ನುಡಿದ್ದಾರೆ.

Chris Gayle made a big prediction about Virat Kohli
Image Credit: Ndtv

 

ವಿರಾಟ್ ಕೊಹ್ಲಿ ಬಗ್ಗೆ ದೊಡ್ಡ ಭವಿಷ್ಯ ನುಡಿದ ಕ್ರಿಸ್ ಗೆಲ್
ಇನ್ನು ಐಪಿಎಲ್ ಮುಗಿಯುತ್ತಿದ್ದಂತೆ ಇದೀಗ ಕ್ರಿಕೆಟ್ ಪ್ರಿಯರು ವಿಶ್ವಕಪ್ ನಿರೀಕ್ಷೆಯಲ್ಲಿದ್ದಾರೆ. ಇನ್ನು ಕ್ರಿಕೆಟ್ ಪ್ರಿಯರ ಬಹುನಿರೀಕ್ಷಿತ ವಿಶ್ವಕಪ್ ಅಕ್ಟೊಬರ್ 5 ರಿಂದ ಆರಂಭವಾಗಲಿದೆ. ಇನ್ನು ಇದೀಗ ಕ್ರಿಸ್ ಗೆಲ್ ವಿರಾಟ್ ಕೊಹ್ಲಿ ಅವರ ವಿಶ್ವಕಪ್ ಆಟದ ಬಗ್ಗೆ ಮಾತನಾಡಿದ್ದಾರೆ.

ವಿಶ್ವಕಪ್ ಟೂರ್ನಿಯಲ್ಲಿ ಈ ಬಾರಿ ವಿರಾಟ್ ಅಬ್ಬರಿಸಲಿದ್ದಾರೆ
ಈ ವರ್ಷ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಅನುಭವಿ ಆಟಗಾರ ವಿರಾಟ್ ಕೊಹ್ಲಿ ಅಬ್ಬರಿಸಲಿದ್ದಾರೆ ಎಂದು ಕ್ರಿಸ್ ಗೆಲ್ ಭವಿಷ್ಯ ನುಡಿದಿದ್ದಾರೆ. ಅಕ್ಟೊಬರ್ 5 ರಿಂದ ಆರಂಭವಾಗಲಿರುವ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ತಮ್ಮ ಫಾರ್ಮ್ ನ ಅತ್ಯುನ್ನತ ಮಟ್ಟಕ್ಕೆ ತಲುಪಲಿದ್ದಾರೆ ಎಂದು ಕ್ರಿಸ್ ಗೆಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Join Nadunudi News WhatsApp Group

Chris Gayle made a big prediction about Virat Kohli
Image Credit: Icccricketschedule

ಇನ್ನು 2011 ರಲ್ಲಿ ವಿಶ್ವಕಪ್ ಟೂರ್ನಿ ಭಾರತದಲ್ಲಿ ನಡೆದಿದೆ. ಈ ವೇಳೆ ಎಂಎಸ್ ದೋನಿ ನೇತೃತ್ವದಲ್ಲಿ ಟೀಮ್ ಇಂಡಿಯಾ ವಿಶ್ವಕಪ್ ಟ್ರೋಫಿ ಗೆದ್ದಿದೆ. ನಂತರ 2013 ರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಬಳಿಕ ಭಾರತ ತಂಡ ಐಸಿಸಿ ಟೂರ್ನಿಯಲ್ಲಿ ಸತತ ಸೋಲು ಕಂಡಿದೆ.

ಇನ್ನು 2014 ರಲ್ಲಿ ಟೀಮ್ ಇಂಡಿಯಾ ಫೈನಲ್ ಗೆ ತಲುಪಿ ಸೋಲು ಕಂಡಿದೆ. ಇನ್ನು 2021 ರಲ್ಲಿ ಟೀಮ್ ಇಂಡಿಯಾ ಸೋತಿದೆ. ಇನ್ನು ಸತತ ಸೋಲು ಕಾಣುತ್ತಿರುವ ಟೀಮ್ ಇಂಡಿಯಾ ತಂಡ ಈ ಬಾರಿಯಾದರೂ ಕಪ್ ಗೆಲ್ಲುತ್ತದೆ ಎಂದು ಕ್ರಿಕೆಟ್ ಪ್ರಿಯರು ಕಾಯುತ್ತಿದ್ದಾರೆ.

Join Nadunudi News WhatsApp Group