Government Job: ಸರ್ಕಾರೀ ಉದ್ಯೋಗದ ನಿರೀಕ್ಷೆಯಲ್ಲಿ ಇದ್ದವರಿಗೆ ಸಿದ್ದರಾಮಯ್ಯ ಕಡೆಯಿಂದ ಸಿಹಿಸುದ್ದಿ, ಅರ್ಜಿ ಸಲ್ಲಿಸಲು ತಯಾರಾಗಿ

ಸರ್ಕಾರಿ ಹುದ್ದೆಗಳ ನೇಮಕಾತಿಯ ಕುರಿತು ಸಿಎಂ ಮಹತ್ವದ ಹೇಳಿಕೆ

CM Siddaramaiah Latest News Update: ಲಕ್ಷಾಂತರ ವಿಧ್ಯಾವಂತರು ಸರಕಾರಿ ನೌಕರರಾಗಬೇಕೆಂದು ಕಾಯುತ್ತಿರುತ್ತಾರೆ. ತಮ್ಮ ಅರ್ಹತೆಗೆ ತಕ್ಕಂತೆ Government Job ಸಿಕ್ಕರೆ ಜೀವನ ಸೆಟ್ಲ್ ಆದಂತೆ ಎಂದು ಕನಸು ಕಾಣುತ್ತಿರುತ್ತಾರೆ. ಅಷ್ಟೇ ಅಲ್ಲದೇ ಈಗ ರಾಜ್ಯದಲ್ಲೂ ಖಾಲಿ ಇರುವ ಹುದ್ದೆಗಳು ಅಧಿಕ ಇದ್ದು, ಹಲವು ಅಭ್ಯರ್ಥಿಗಳಿಗೆ ಕೆಲಸ ಸಿಕ್ಕುವ ಸೂಚನೆಗಳನ್ನು ಸಿಎಂ ಅವರು ನೀಡಿದ್ದಾರೆ.

ವಿವಿಧ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಪರಿಶೀಲನೆ ಮಾಡಿದ ಮುಖ್ಯ ಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಇಂತಹ ಹುದ್ದೆಗಳನ್ನು ಆದಷ್ಟು ಬೇಗ ಭರ್ತಿ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Government Job
Image Credit: India TV News

ಹುದ್ದೆಗಳ ನೇಮಕದಲ್ಲಿ ವಿಳಂಬದ ಬಗ್ಗೆ ಕಠಿಣ ಕ್ರಮ

ರಾಜ್ಯದಲ್ಲಿ ಹಲವು ವಲಯದ ಇಲಾಖೆಗಳಲ್ಲಿ ಹುದ್ದೆಗಳು ಖಾಲಿ ಇದ್ದು, ಇದರ ಕುರಿತು ವಿಧಾನಪರಿಷತ್ ನಲ್ಲಿ ಶೂನ್ಯ ವೇಳೆಯಲ್ಲಿ ಬಿಜೆಪಿಯ ಶಶಿಲ್ ನಮೋಶಿ ಪ್ರಸ್ತಾಪಿಸಿದ ವಿಷಯಕ್ಕೆ ಲಿಖಿತ ಉತ್ತರ ನೀಡಿರುವ ಸಿಎಂ, ಲೋಕಸೇವಾ ಆಯೋಗದಿಂದ ವಿವಿಧ ಹುದ್ದೆಗಳ ನೇಮಕದಲ್ಲಿ ಆಗುತ್ತಿರುವ ವಿಳಂಬ ತಡೆಗೆ ಕ್ರಮ ಕೈಗೊಂಡಿದ್ದು, ನೇಮಕಾತಿ ಪ್ರಕ್ರಿಯೆ ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಆಯೋಗದ ಅಧಿಕಾರಿಗಳು ನೌಕರರು ಸಾರ್ವತ್ರಿಕ ರಜಾ ದಿನಗಳಲ್ಲಿಯೂ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಕಾಲಮಿತಿ ಒಳಗೆ ಭರ್ತಿಮಾಡಲು ಕರ್ನಾಟಕ ಲೋಕಸೇವಾ ಆಯೋಗಕ್ಕೆ ಗುರಿ ನಿಗದಿಪಡಿಸಿದ್ದು, ಶೀಘ್ರಗತಿಯಲ್ಲಿ ನೇಮಕಾತಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

Join Nadunudi News WhatsApp Group

CM Siddaramaiah Latest News Update
Image Credit: The Indian Express

ಬಹಳ ಶೀಘ್ರದಲ್ಲೇ ಖಾಲಿ ಇರುವ ಸರ್ಕಾರೀ ಹುದ್ದೆಗಳು ಭರ್ತಿ ಆಗಲಿದೆ

ಈಗಾಗಲೇ ಹುದ್ದೆ ನೇಮಕಾತಿಯ ವಿಚಾರವಾಗಿ ಹಲವು ಸಮಯ ವ್ಯರ್ಥ ಆಗಿ ಹೋಗಿದೆ ಇನ್ನಾದರೂ ಈ ವಿಷಯದ ಕುರಿತು ಕಠಿಣ ಕ್ರಮ ಕೈ ಗೊಳ್ಳುವುದು ಬಹಳ ಮುಖ್ಯ ಆಗಿದೆ ಆದ್ದರಿಂದ ತಾತ್ಕಾಲಿಕ ವೇಳಾಪಟ್ಟಿ ಹಾಕಿಕೊಂಡು ನೇಮಕಾತಿ ಪ್ರಕ್ರಿಯೆಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಲು ಗುರಿ ನಿಗದಿಪಡಿಸಲಾಗಿದೆ.

ಪ್ರತಿ ನೇಮಕಾತಿ ಪ್ರಕ್ರಿಯೆಯಲ್ಲೂ ಅಭ್ಯರ್ಥಿಗಳು ಕಾನೂನು ಪ್ರಕರಣ ದಾಖಲಿಸುತ್ತಿದ್ದು, ಇದರಿಂದ ವಿಳಂಬವಾಗುತ್ತಿದೆ. ನಿಗದಿತ ಸಮಯದಲ್ಲಿ ಅಭ್ಯರ್ಥಿಗಳು ಮೂಲ ದಾಖಲೆ ಸಲ್ಲಿಸದಿರುವುದೂ ವಿಳಂಬಕ್ಕೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಂಡು ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಕಾಲಮಿತಿಯೊಳಗೆ ಭರ್ತಿ ಮಾಡಲಾಗುವುದು ಎಂದು ಮುಖ್ಯ ಮಂತ್ರಿಗಳು ತಿಳಿಸಿದ್ದಾರೆ.

Join Nadunudi News WhatsApp Group