Ayodhya Inauguration: ರಾಮ ಮಂದಿರ ಉದ್ಘಾಟನೆಗೆ ಸಿದ್ದರಾಮಯ್ಯಗೆ ಯಾಕಿಲ್ಲ ಆಹ್ವಾನ…? ನಡೆಯುತ್ತಿದೆಯೇ ರಾಜಕೀಯ

ರಾಮ ಮಂದಿರ ಉದ್ಘಾಟನೆಗೆ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಹ್ವಾನ ಇಲ್ಲ

CM Siddaramaiah Not Invited For Ayodhya Inauguration : ದೇಶದೆಲ್ಲೆಡೆ ಈಗ ರಾಮನಾಮ ಜಪನೆ, ಅಯೋಧ್ಯೆ ರಾಮಮಂದಿರ ನಿರ್ಮಾಣ ಕನಸು ನನಸಾಗುವ ಸಮಯ ಬಂದಿದೆ. ಇದೆ ಜನವರಿ 22 ರಂದು ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ ಭರ್ಜರಿ ಸಿದ್ದತೆ ನಡೆಯುತ್ತಿದೆ.

ಈ ನಡುವೆ ರಾಮನ ಪ್ರತಿಷ್ಠಾಪನೆ ಆಗಿ ಜನ ರಾಮನನ್ನು ನೋಡುವ ಕುತೂಹಲದಲ್ಲಿ ಕಾಯುತ್ತಿದ್ದಾರೆ. ಸಕಲ ಸಿದ್ಧತೆಯಲ್ಲಿರುವ ರಾಮ ಮಂದಿರ ಉದ್ಘಾಟನೆ ಸಮಯದಲ್ಲಿ ಇನ್ನೊಂದು ವಿಚಾರ ಹೊರಬಿದ್ದಿದ್ದೆ. ಹೌದು ದೇಶದ ಪ್ರಮುಖ ಗಣ್ಯರಿಗೆ ಆಹ್ವಾನ ನೀಡಲಾಗಿದ್ದು, ರಾಜ್ಯದ ಸಿಎಂ ಸಿದ್ದರಾಮನಯ್ಯ ಅವರಿಗೆ ಆಹ್ವಾನ ಬಂದಿಲ್ಲ ಎನ್ನುವುದಾಗಿದೆ.

CM Siddaramaiah Latest News
Image Credit: India

ರಾಮ ಮಂದಿರ ಉದ್ಘಾಟನಾ ಸಮಾರಂಭಕ್ಕೆ ಸಿಎಂ ಸಿದ್ದರಾಮಯ್ಯ ಅವರಿಗೆ ಆಹ್ವಾನ ಇಲ್ಲಾ

ರಾಮಮಂದಿರ ಉದ್ಘಾಟನೆ ಜನವರಿ 22 ರಂದು ಅದ್ದೂರಿಯಾಗಿ ನಡೆಯಲಿದ್ದು, ಈ ನಡುವೆ ಕಾಂಗ್ರೆಸ್ ಸಚಿವರು ರಾಜ್ಯದ ಸಿಎಂಗೆ ಆಹ್ವಾನ ನೀಡಿಲ್ಲ ಅಂದ್ರೆ ಅದು ದ್ವೇಷದ ರಾಜಕಾರಣ ಎಂದು ಕೋಪವನ್ನು ಮಾಡಿಕೊಂಡು ತಮ್ಮ ಬೇಜಾರನ್ನು ವ್ಯಕ್ತಪಡಿಸಿದ್ದಾರೆ. ರಾಮ ಯಾರೊಬ್ಬರ ಜಹಗೀರ್ ಅಲ್ಲ.. ಖಾಸಗಿ ಆಸ್ತಿನೂ ಅಲ್ಲ ಅಂತ ಅರಣ್ಯ ಸಚಿವ ಈಶ್ವರ್ ಖಂಡ್ರೆ ವಾಗ್ದಾಳಿ ನಡೆಸಿದ್ದಾರೆ.. ಭಾರತ್ ಮಾತಾಕಿ ಜೈ ಎಂದು ಅತ್ಯಾಚಾರ ಕೊಲೆ ಮಾಡಿದ್ರೆ, ಅದನ್ನ ಒಪ್ಪಿಕೊಳ್ಳೋದಕ್ಕೆ ಆಗುತ್ತಾ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.

Ayodhya Inauguration Latest News
Image Credit: Businesstoday

ಹಲವು ಕಾಂಗ್ರೆಸ್ ಶಾಸಕರಿಂದ ವಾಗ್ದಾಳಿ

Join Nadunudi News WhatsApp Group

ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರು, ಅಡ್ವಾಣಿಯವರು ರಾಮ ಮಂದಿರ ನಿರ್ಮಾಣಕ್ಕೆ ಕಾರಣ. ಅವರನ್ನೇ ಬರಬೇಡಿ ಎಂದಿದ್ದಾರೆ.. ಇನ್ನು ಸಿಎಂ ಸಿದ್ದರಾಮಯ್ಯ ನವರಿಗೆ ಆಹ್ವಾನ ಕೊಡ್ತಾರಾ ಎಂದು ಕಿಡಿ ಕಾರಿದ್ರು.. ರಾಮ ಮಂದಿರ ನಿರ್ಮಾಣಕ್ಕೆ ಹತ್ತು ಲಕ್ಷ ಕೊಟ್ಟಿದ್ದೇನೆ.. ಆಗ ಅವರಿಗೆ ಎಲ್ಲಾರು ನೆನಪು ಆದ್ರು.. ಈಗಿಲ್ಲ ಎಂದರು. ಚುನಾವಣೆ ಬಂದಾಗ ಬಿಜೆಪಿಯವರು ಧರ್ಮದ ವಿಚಾರವನ್ನ ಕೈಗೆತ್ತಿಕೊಳ್ತಾರೆ ಎಂದು ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದ್ದರು. ಒಟ್ಟಾರೆಯಾಗಿ ಏನೇ ಇರಲಿ ನಮ್ಮ ದೇಶದ ಹೆಮ್ಮೆ ರಾಮ ಮಂದಿರ, ಈ ಕಾರ್ಯಗಳು ಸುಸಜ್ಜಿತವಾಗಿ ನೆರವೇರಲಿ ಎಂದು ನಾವು ಆಶಿಸೋಣ.

Join Nadunudi News WhatsApp Group