Gas Price 2024: ಕೇಂದ್ರದಿಂದ ಹೊಸ ವರ್ಷದ ಮೊದಲ ಉಡುಗೊರೆ, ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಮತ್ತೆ ಇಷ್ಟು ಇಳಿಕೆ.

ವರ್ಷದ ಮೊದಲ ದಿನವೇ ಇಳಿಕೆ ಕಂಡ ಗ್ಯಾಸ್ ಸಿಲಿಂಡರ್ ಬೆಲೆ.

Commercial Gas Cylinder Price Down: ಪ್ರಸ್ತುತ 2024 ಆರಂಭವಾಗಿದೆ. 2023 ರಲ್ಲಿ ಅನೇಕ ನಿಯಮಗಳು ಜಾರಿಗೆ ಬಂದ ಹಾಗೆಯೆ 2024 ರಲ್ಲಿ ಕೂಡ ಸಾಕಷ್ಟು ಹೊಸ ಹೊಸ ನಿಯಮಗಳು ಜಾರಿಗೆ ಬರುವುದು ಭಾಕಿ ಇದೆ. ಹೌದು ಹೊಸ ವರ್ಷದಲ್ಲಿ ಜನರು ಹೊಸ ಹೊಸ ಜೀವನವನ್ನ ಆರಂಭ ಮಾಡಲು ತಯಾರಾಗಿದ್ದು ಇದೆ ಸಮಯದಲ್ಲಿ ಕೇಂದ್ರದಿಂದ ಜನಸಾಮಾನ್ಯರಿಗೆ ಗುಡ್ ನ್ಯೂಸ್ ಬಂದಿದೆ ಎಂದು ಹೇಳಬಹುದು.

ಹೊಸ ಹೊಸ ನಿಯಮಗಳ ಜೊತೆಗೆ 2023 ರಲ್ಲಿ ಇದ್ದಂತಹ ಅನೇಕ ನಿಯಮಗಳು ಬದಲಾಗಲಿವೆ. ಇನ್ನು ದೇಶದ ಜನತೆ 2023 ರ ಆರಂಭದಿಂದ ಹಣದುಬ್ಬರತೆಯ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಸದ್ಯ ಬೆಲೆ ಏರಿಕೆಯ ಪರಿಣಾಮದಿಂದ ತತ್ತರಿಸುತ್ತಿರುವ ಜನರಿಗೆ ಕೇಂದ್ರ ಸರ್ಕಾರ ಹೊಸ ವರ್ಷಕ್ಕೆ ಭರ್ಜರಿ ಸುದ್ದಿಯೊಂದನ್ನು ನೀಡಿದೆ.

Commercial Gas Cylinder Price Down
Image Credit: Thestatesman

ಕೇಂದ್ರದಿಂದ ಹೊಸ ವರ್ಷದ ಮೊದಲ ಉಡುಗೊರೆ
ದಿನಬಳಕೆಯ ವಸ್ತುಗಳ ಬೆಲೆ ಹೆಚ್ಚಾಗುತ್ತಿತ್ತು. ಅದರಲ್ಲೂ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬಾರಿ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿತ್ತು. ಸದ್ಯ ಕೇಂದ್ರ ಸರ್ಕಾರ ಹೊಸ ವರ್ಷದ ವಿಶೇಷಕ್ಕೆ ಗ್ಯಾಸ್ ಸಿಲಿಂಡರ್ ಬೆಲೆಯ ವಿಚಾರವಾಗಿ ಸಿಹಿ ಸುದ್ದಿ ನೀಡಲು ಮುಂದಾಗಿದೆ. LPG ವಾಣಿಜ್ಯ ಸಿಲಿಂಡರ್ ಬೆಲೆ ಇಳಿಕೆ ಮಾಡುವ ಮೂಲಕ ದೇಶದ ಜನತೆಗೆ ಸಿಹಿ ಸುದ್ದಿ ನೀಡಿದೆ. ದೇಶದ ಪ್ರಮುಖ ನಗರಗಳಲ್ಲೂ LPG Commercial Gas Cylinder ಬೆಲೆ ಇಳಿಕೆಯಾಗಲಿದೆ.

ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಮತ್ತೆ ಇಷ್ಟು ಇಳಿಕೆ
ಜನವರಿ 1 2024 ರ ಆರಂಭದಲ್ಲಿ ಜನತೆಗೆ ಗ್ಯಾಸ್ ಸಿಲಿಂಡರ್ ವಿಷಯವಾಗಿ ಸಿಹಿ ಸುದ್ದಿ ಹೊರಬಿದ್ದಿದೆ. ಹೌದು, 19KG ವಾಣಿಜ್ಯ ಗಾಸ್ ಸಿಲಿಂಡರ್ ಬೆಲೆಯಲ್ಲಿ ಇಳಿಕೆ ಮಾಡಲು ನಿರ್ಧರಿಸಲಾಗಿದೆ. ಜನವರಿ 1 ರಿಂದ 19KG ವಾಣಿಜ್ಯ ಗಾಸ್ ಸಿಲಿಂಡರ್ ಬೆಲೆಯಲ್ಲಿ ಇಳಿಕೆಯಾಗಲಿದೆ. ಇನ್ನು ಗೃಹ ಬಳಕೆಯ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಇಳಿಕೆ ಇಲ್ಲ ಎನ್ನುವುದರ ಬಗ್ಗೆ ನಿಮಗೆ ತಿಳಿದಿರಲಿ. ಇನ್ನುಮುಂದೆ ಎಲ್ಲ ಕಡೆ ವಾಣಿಜ್ಯ ಗ್ಯಾಸ್ ಸಿಲಿಂಡರ್ ಗಳು ಅಗ್ಗವಾಗಿ ಮಾರಾಟವಾಗಲಿದೆ. ಇಂದಿನಿಂದಲೇ ವಾಣಿಜ್ಯ ಗ್ಯಾಸ್ ಸಿಲಿಂಡರ್ ಗಳ ಹೊಸ ದರ ಜಾರಿಯಾಗಲಿದೆ.

Commercial Gas Cylinder Price
Image Credit: Deccanherald

ಗ್ಯಾಸ್ ಸಿಲಿಂಡರ್ ದರದ ಇಳಿಕೆಯ ಬಗ್ಗೆ ವಿವರ ಇಲ್ಲಿದೆ
ದೆಹಲಿಯಲ್ಲಿ 19kg ಗ್ಯಾಸ್ ಸಿಲಿಂಡರ್ ಬೆಲೆ 1757 ರೂ. ಇದ್ದು, ಸದ್ಯ 1755 ರೂ. ಗೆ ಲಭ್ಯವಾಗಲಿದೆ. ಇನ್ನು ಮುಂಬೈನಲ್ಲಿ 19kg ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 1.50 ರೂ. ಇಳಿಕೆಯಾಗಿದ್ದು, 1708 .50 ರೂ. ಗೆ ಲಭ್ಯವಾಗಲಿದೆ. 2023 ರ ಡಿಸೆಂಬರ್ 22 ರಂದು 19KG ವಾಣಿಜ್ಯ ಗಾಸ್ ಸಿಲಿಂಡರ್ ಬೆಲೆಯಲ್ಲಿ 39.50 ರೂ. ಇಳಿಕೆ ಮಾಡಲಾಗಿತ್ತು. ಇದೀಗ ಮತ್ತೆ ಜನವರಿ ಆರಂಭದಲ್ಲಿ ಮತ್ತೆ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಕಡಿತಗೊಳಿಸಲಾಗಿದೆ. ಇನ್ನು ಜನವರಿ ಮೊದಲ ವಾರದಲ್ಲಿ ಗ್ಯಾಸ್ ಬೆಲೆಯಲ್ಲಿ ಇನ್ನಷ್ಟು ಇಳಿಕೆ ಆಗುವ ಸಾಧ್ಯತೆ ಇದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.

Join Nadunudi News WhatsApp Group

Join Nadunudi News WhatsApp Group