Compensation Money: 5 ಗ್ಯಾರಂಟಿ ಬೆನ್ನಲ್ಲೇ ಇನ್ನೊಂದು ಘೋಷಣೆ ಮಾಡಿದ ಸಿದ್ದರಾಮಯ್ಯ, ಈ ರೈತರ ಖಾತೆಗೆ 2000 ರೂ ಜಮಾ.

ರೈತರ ಖಾತೆಗೆ 2000 ಬೆಳೆ ಪರಿಹಾರ ಹಣ ಜಮಾ ಮಾಡಿದ ರಾಜ್ಯ ಸರ್ಕಾರ.

Compensation Amount For Farmers: ಸದ್ಯ ರಾಜ್ಯ ಸರ್ಕಾರ ರೈತರ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿದೆ ಎನ್ನಬಹುದು. ಈ ಬಾರಿ ಸಕಾಲದಲ್ಲಿ ಮಳೆ ಬಾರದೆ ಇರುವುದರಿಂದ ರೈತರು ಬಾರಿ ಪ್ರಮಾಣದಲ್ಲಿ ನಷ್ಟ ಅನುಭವಿಸುವಂತಾಗಿದೆ. ರೈತರು ಬೆಳೆದ ಬೆಳೆ ಮಳೆಯ ಕೊರೆಯಿಂದಾಗಿ ರೈತರ ಕೈಗೆ ತಲುಪಿಲ್ಲ. ರೈತರಿಗೆ ಲಾಭ ದೊರೆಯದೆ ನಷ್ಟದಲ್ಲಿ ರೈತರು ಕಣ್ಣೀರಿಡುವಂತಾಗಿದೆ. ರೈತರ ಈ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಕ್ರಮ ಕೈಗೊಂಡಿದೆ.

C M Siddaramaiah Latest News
Image Credit: Hindustantimes

ರಾಜ್ಯದ ರೈತರಿಗೆ ಬೆಳೆ ಪರಿಹಾರ
ಈ ಬಾರಿ ರಾಜ್ಯದಲ್ಲಿ ಮಳೆಯ ಕೊರತೆ ಉಂಟಾಗಿರುವುದು ಎಲ್ಲರಿಗು ತಿಳಿದೇ ಇದೆ. ಮಳೆಯ ಅಭಾವದಿಂದ ರಾಜ್ಯದಲ್ಲಿ ಹೆಚ್ಚಿನ ನಷ್ಟವನ್ನು ರೈತರು ಅನುಭವಿಸುವಂತಾಗಿದೆ. ರೈತರು ಬೆಳೆ ಹಾನಿಯಿಂದಾಗಿ ಲಕ್ಷಾಂತರ ನಷ್ಟವನ್ನು ಅನುಭವಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ರೈತರಿಗೆ ಬರ ಪರಿಹಾರ ನೀಡಲು ಯೋಜನೆ ಹೂಡಿದೆ. ರೈತರಿಗೆ ಬೆಲೆ ಪರಿಹಾರ ಬಿಡುಗಡೆ ಮಾಡುವ ಬಗ್ಗೆ ಸಚಿವಾ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಾಗುತ್ತಿದೆ. ರೈತರ ಬೆಳೆ ಪರಿಹಾರದ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಅಧಿಕೃತ ಘೋಷಣೆ ಹೊರಡಿಸಿದ್ದಾರೆ.

ರೈತರ ಖಾತೆಗೆ 2000 ರೂ. ಹಣ ಜಮಾ
ಕೇಂದ್ರ ಸರ್ಕಾರಕ್ಕೆ ರಾಜ್ಯದ ರೈತರಿಗೆ ಬೆಳೆ ಪರಿಹಾರ ನೀಡುವಂತೆ ಮನವಿ ಮಾಡಲಾಗಿದೆ. ಆದರೆ ಕೇಂದ್ರ ಇನ್ನು ಈ ಬಗ್ಗೆ ಪ್ರಾಥಮಿಕ ಸಭೆ ಕೂಡ ನಡೆಸದೆ ಇರುವ ಕಾರಣ ರಾಜ್ಯ ಸರ್ಕಾರ ಈ ಬಗ್ಗೆ ಕ್ರಮ ಕೈಗೊಂಡಿದೆ. ಕೇಂದ್ರದಿಂದ ಬೆಳೆ ಪರಿಹಾರ ಬಿಡುಗಡೆ ತಡವಾಗಬಹುದು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಬೆಳೆಯ ಪರಿಹಾರಕ್ಕೆ ಮೊದಲ ಕಂತಿನ ಹಣವನ್ನು ಬಿಡುಗಡೆ ಮಾಡಿದೆ ಎಂದು ಸಿದ್ದರಾಮಯ್ಯ ಅವರು ಮಾಹಿತಿ ನೀಡಿದ್ದಾರೆ.

Compensation Amount For Farmers
Image Credit: India

ಮೊದಲೇ ಕಂತಿನಲ್ಲಿ ರೂ. 2000 ವರೆಗೆ ಬೆಳೆ ಪರಿಹಾರ ಬಿಡುಗಡೆಗೆ ರಾಜ್ಯ ಸರ್ಕಾರ ಮುಂದಾಗಿದ್ದು, ಈ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕೃತ ಘೋಷಣೆ ಹೊರಡಿಸಿದ್ದಾರೆ. ಮೊದಲ ಕಂತಿನಲ್ಲಿ ಅರ್ಹ ರೈತರಿಗೆ DBT ಮೂಲಕ ತಲಾ 2000 ರೂ. ಬೆಳೆ ಪರಿಹಾರ ನೀಡಲು ನಿರ್ಧರಿಸಿದ್ದೇವೆ ಎಂದು ಸಿದ್ದರಾಮಯ್ಯ ಅವರು ಸೂಚಿಸಿದ್ದಾರೆ. ಸದ್ಯ ರಾಜ್ಯದ ರೈತರು ಮೊದಲ ಕಂತಿನ ಬೆಳೆ ಪರಿಹಾರವನ್ನು ಪಡೆಯಬಹುದು.

Join Nadunudi News WhatsApp Group

Join Nadunudi News WhatsApp Group