Traffic Challan: ಇನ್ಮುಂದೆ ಟ್ರಾಫಿಕ್ ಪೊಲೀಸರು ಸುಖಾಸುಮ್ಮನೆ ದಂಡ ಹಾಕಿದರೆ ಚಿಂತಿಸಬೇಡಿ, ಈ ರೀತಿ ಪೋಲೀಸರ ಮೇಲೆ ದೂರು ನೋಡಿ

ಸಂಚಾರಿ ಪೊಲೀಸರುನಿಮಗೆ ತಪ್ಪಾದ ಚಲನ್ ನೀಡಿದರೆ ನೀವು ಪೋಲೀಸರ ವಿರುದ್ಧವೇ ದೂರು ದಾಖಲಿಸಬಹುದಾಗಿದೆ

Complaint Against Wrong Traffic Challan: ಸದ್ಯ ದೇಶದಲ್ಲಿ ರಸ್ತೆ ಸಂಚಾರಿ ನಿಯಮಗಳು ಕಠಿಣಗೊಳ್ಳುತ್ತಿದೆ. ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆಯನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಹೊಸ ಹೊಸ ಸಂಚಾರಿ ನಿಯಮವನ್ನು ಪರಿಚಯಿಸುತ್ತಿದೆ. ಹೊಸ ನಿಯಮಗಳ ಅಡಿಯಲ್ಲಿ ಸಂಚಾರಿ ನಿಯಮಗಳನ್ನ ಉಲ್ಲಂಘನೆ ಮಾಡುವ ವಾಹನ ಸವವರಿಗೆ ದಂಡವನ್ನ ವಿಧಿಸಲಾಗುತ್ತಿದೆ.

ರಸ್ತೆಯಲ್ಲಿ ಸಂಚರಿಸುವ ಪ್ರತಿ ವಾಹನ ಸವರಾರವು ಕೂಡ ಟ್ರಾಫಿಕ್ ನಿಯಮಗಳ ಬಗ್ಗೆ ಮಾಹಿತಿ ತಿಳಿದುಕೊಂಡು ಪಾಲಿಸುವುದು ಅಗತ್ಯವಾಗಿದೆ. ಟ್ರಾಫಿಕ್ ನಿಯಮ ಉಲ್ಲಂಘನೆ ಕೆಲವೊಮ್ಮೆ ರಸ್ತೆ ಅಪಘಾತಗಳನ್ನು ಉಂಟುಮಾಡಿರುವ ಸಾಕಷ್ಟು ಉದಾಹರಣೆಗಳಿವೆ. ದೇಶದಲ್ಲಿ ಸಂಚಾರಿ ನಿಯಮ ಈಗ ಬಹಳ ಕಠಿಣ ಆಗಿದ್ದು ಪ್ರತಿನಿತ್ಯ ಕೋಟಿಗಟ್ಟಲೆ ಹಣ ಸಂಚಾರಿ ನಿಯಮ ಉಲ್ಲಂಘನೆಯಿಂದ ಬರುತ್ತಿದೆ ಎಂದು ಹೇಳಬಹುದು.

Complaint Against Wrong Traffic Challan
Image Credit: The Economic Times

ವಾಹನ ಸವಾರರು ಟ್ರಾಫಿಕ್ ಪೋಲೀಸರ ವಿರುದ್ಧವೇ ದೂರು ನೀಡಬಹುದು
ಇನ್ನು ಟ್ರಾಫಿಕ್ ನಿಯಮ ಉಲ್ಲಂಘನೆಯಾದರೆ ಸಂಚಾರಿ ಪೊಲೀಸರು ಅದರ ವಿರುದ್ಧ ಕ್ರಮ ಕೈಗೊಳ್ಳುತ್ತಾರೆ ಎನ್ನುವುದು ಎಲ್ಲರಿಗು ತಿಳಿದಿರುವ ವಿಚಾರ. ಟ್ರಾಫಿಕ್ ನಿಯಮವನ್ನು ಉಲ್ಲಂಘಿಸಿ ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎನ್ನಬಹುದು. ಕೆಲವೊಮೆ ಕೆಲ ಸಂಚಾರಿ ಪೋಲೀಸರ ವಿರುದ್ಧ ವಾಹನ ಸವಾರರು ದೂರನ್ನು ಕೊಟ್ಟಿರುವುದುಂಟು, ಕಾರಣ ವಾಹನ ಸವಾರರ ತಪ್ಪಿಲ್ಲದಿದ್ದರು ಪೊಲೀಸರು ದಂಡ ವಿಧಿಸುತ್ತಿದ್ದಾರೆ ಎನ್ನುವುದು.

ಯಾವುದೇ ನಿಯಮ ಉಲಂಘನೆ ಮಾಡದೆಯೇ ತಪ್ಪ ಚಲನ್ ನೀಡಿ, ದಂಡ ಪಾವತಿಸಲು ಪೊಲೀಸರು ಒತ್ತಾಯಿಸುತ್ತಿದ್ದಾರೆ ಎಂದು ಸಾಕಷ್ಟು ದೂರುಗಳು ದಾಖಲಾಗಿದೆ. ಇದನ್ನು ಗಮನಿಸಿದ ಸರ್ಕಾರ ಈ ಬಗ್ಗೆ ಮಹತ್ವದ ನಿರ್ಧಾರ ಕೈಗೊಂಡಿದೆ. ಇನ್ನುಮುಂದೆ ವಾಹನ ಸವಾರರು ಸಂಚಾರಿ ಪೊಲೀಸರು ನೀಡುವ ತಪ್ಪಾದ ಚಲನ್ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಏಕೆಂದರೆ ನೀವು ಇಂತಹ ಸಂದರ್ಭದಲ್ಲಿ ಪೋಲೀಸರ ವಿರುದ್ಧ ನೀವು ದೂರನ್ನು ನೀಡಬಹುದು.

Wrong Traffic Challan
Image Credit: Fleetable

ಆನ್ಲೈನ್ ನಲ್ಲಿ ಈ ರೀತಿಯಾಗಿ ನೀವು ದೂರು ಸಲ್ಲಿಸಬಹುದು.
•ಮೊದಲನೆಯದಾಗಿ, ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಅಧಿಕೃತ ಟ್ರಾಫಿಕ್ ಸೈಟ್‌ echallan.parivahan.gov.in/gsticket/ ಗೆ ಭೇಟಿ ನೀಡಿ ನೀವು ಪೋಲೀಸರ ವಿರುದ್ಧ ದೂರನ್ನು ದಾಖಲಿಸಬಹುದು.

Join Nadunudi News WhatsApp Group

•ಲಿಂಕ್ ತೆರೆದ ತಕ್ಷಣ, ನೀವು ದೂರಿನ ಲಿಂಕ್ ಅನ್ನು ನೋಡುತ್ತೀರಿ, ಆ ಲಿಂಕ್ ನ ಮೇಲೆ ಕ್ಲಿಕ್ ಮಾಡಿ.

•ಈ ಲಿಂಕ್ ತೆರೆದ ತಕ್ಷಣ ನೀವು ನಿಮ್ಮ ಖಾತೆಗೆ ಲಾಗ್ ಇನ್ ಆಗಬೇಕು. ನಿಮ್ಮ ಹೆಸರು, ನಿಮ್ಮ ಸಂಖ್ಯೆ, ನಿಮ್ಮ ಚಲನ್ ಸಂಖ್ಯೆ ಸೇರಿದಂತೆ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ನೀವು ಸ್ವೀಕರಿಸಿದ ಎಲ್ಲಾ ಮಾಹಿತಿಯನ್ನು ನೀವು ಸರಿಯಾಗಿ ನಮೂದಿಸಬೇಕು.

•ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿದ ನಂತರ, ನೀವು ಇ-ಚಲನ್ ದೂರಿನ ಪುರಾವೆಯನ್ನು ಅಪ್‌ ಲೋಡ್ ಮಾಡಬೇಕಾಗುತ್ತದೆ. ಇದಕ್ಕಾಗಿ, ಅಪ್ಲೋಡ್ ಆಯ್ಕೆಯನ್ನು ಬಳಸಿ ಮತ್ತು ಕ್ಯಾಪ್ಚಾ ಕೋಡ್ ಅನ್ನು ಸರಿಯಾಗಿ ಭರ್ತಿ ಮಾಡಿ.

•ಅಪ್‌ ಲೋಡ್ ಪ್ರಕ್ರಿಯೆಯು ಪೂರ್ಣಗೊಂಡ ನಂತರ, ನೀವು ಅಂತಿಮವಾಗಿ ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ ದೂರು ಕ್ಷಣಾರ್ಧದಲ್ಲಿ ದಾಖಲಾಗುತ್ತದೆ.

Join Nadunudi News WhatsApp Group