Guarantee Scheme: ಅರ್ಧಕ್ಕೆ ಬಂದ್ ಆಗುತ್ತಾ ಕಾಂಗ್ರೆಸ್ಸಿನ 5 ಗ್ಯಾರೆಂಟಿ ಯೋಜನೆ, ಸ್ಪಷ್ಟನೆ ನೀಡಿದ CM ಸಿದ್ದರಾಮಯ್ಯ

ಗ್ಯಾರೆಂಟಿ ಯೋಜನೆಗ ಅರ್ಧಕ್ಕೆ ನಿಲ್ಲುತ್ತಾ ಅನ್ನುವ ಪ್ರಶ್ನೆಗೆ ಉತ್ತರ ನೀಡಿದ ಸಿದ್ದರಾಮಯ್ಯ

Congress 5 Guarantee Scheme Update: ಸದ್ಯ ಕರ್ನಾಟಕದಲ್ಲಿ Congress ಸರ್ಕಾರ ಮೇ 2023 ರಿಂದ ತನ್ನ ಅಧಿಕಾರವನ್ನು ಪಡೆದುಕೊಂಡಿದೆ. ರಾಜ್ಯದಲ್ಲಿ ವಿಧಾನಸಭಾ ಚುನಾವಣಾ ಸಮಯದಲ್ಲಿ ವಿವಿಧ ಪಕ್ಷಗಳ ನಡುವೆ ಪೈಪೋಟಿ ಜೋರಾಗಿಯೇ ನಡೆದಿತ್ತು. ಈ ವೇಳೆ ಕಾಂಗ್ರೆಸ್ ಸರ್ಕಾರ ಹೆಚ್ಚಿನ ಮತವನ್ನು ಪಡೆಯಲು ಉಚಿತ ಗ್ಯಾರಂಟಿಗಳ ಆಮಿಷವನ್ನು ಒಡ್ಡಿತ್ತು.

ಐದು ಉಚಿತ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ ಮೇಲೆ ರಾಜ್ಯದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಬೆಂಲವನ್ನು ನೀಡಿದ್ದರು. ಇನ್ನು ಚುನಾವಣೆ ಗೆದ್ದ ನಂತರ ಕಾಂಗ್ರೆಸ್ ಸರ್ಕಾರ ಘೋಷಿಸಿರುವಂತೆ ರಾಜ್ಯದಲ್ಲಿ ಐದು ಉಚಿತ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಇದೀಗ ಈ ಗ್ಯಾರಂಟಿ ಯೋಜನೆಗಳು ಅರ್ಧಕ್ಕೆ ಬಂದ್ ಆಗುತ್ತಾ ಎನ್ನುವ ಪ್ರಶ್ನೆಗೆ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

Congress 5 Guarantee Scheme In Karnataka
Image Credit: Vistaranews

ಅರ್ಧಕ್ಕೆ ಬಂದ್ ಆಗುತ್ತಾ ಕಾಂಗ್ರೆಸ್ಸಿನ 5 ಗ್ಯಾರೆಂಟಿ ಯೋಜನೆ…?
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದ ಅನ್ನ ಭಾಗ್ಯ, ಗೃಹ ಲಕ್ಷ್ಮಿ, ಶಕ್ತಿ ಯೋಜನೆ, ಯುವ ನಿಧಿ, ಉಚಿತ ವಿದ್ಯುತ್ ಯೋಜನೆಯ ಲಾಭವನ್ನು ರಾಜ್ಯದ ಜನತೆ ಪಡೆದುಕೊಳ್ಳುತ್ತಿದ್ದಾರೆ. ಸದ್ಯ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಈ ಯೋಜನೆಗಳು ತಾತ್ಕಾಲಿಕ ಎಂದು ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಜನರನ್ನು ಗೊಂದಲಕ್ಕೆ ಒಳಮಾಡಿದೆ. ಸದ್ಯ ಸಿದ್ದರಾಮಯ್ಯ ಅವರು ಈ ಗ್ಯಾರಂಟಿ ಯೋಜನೆಗಳು ಅರ್ಧಕ್ಕೆ ಬಂದ್ ಆಗುತ್ತಾ ಎನ್ನುವ ಪ್ರಶ್ನೆಗೆ ಸ್ಪಷ್ಟನೆ ನೀಡಿದ್ದಾರೆ.

ಸ್ಪಷ್ಟನೆ ನೀಡಿದ CM ಸಿದ್ದರಾಮಯ್ಯ
CM ಸಿದ್ದರಾಮಯ್ಯ ಅವರು ಗ್ಯಾರಂಟಿ ಯೋಜನೆಗಳು ತಾತ್ಕಲಿಕವಲ್ಲ, ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳು ನಿಲ್ಲಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ನಾವು ಗ್ಯಾರಂಟಿ ಯೋಜನೆಗಳನ್ನು ಮುಂದುವರೆಸುವ ಕೆಲಸ ಮಾಡುತ್ತೇವೆ. ಮುಂದಿನ ವರ್ಷಕ್ಕೆ 52 ಸಾವಿರ ಕೋಟಿ ರೂಪಾಯಿ ಮೀಸಲಿಡಲಾಗಿದೆ. ಕರ್ನಾಟಕದಲ್ಲಿಕ ಈ ಟರ್ಮ್ ನಾವೇ ಇರುತ್ತೇವೆ. ಮುಂದಿನ ಟರ್ಮ್ ಸಹ ನಾವೇ ಇರುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ.

Congress 5 Guarantee Scheme Update
Image Credit: India Today

Join Nadunudi News WhatsApp Group

Join Nadunudi News WhatsApp Group