Mahindra XUV3XO: ಸಾಮಾನ್ಯ ವ್ಯಕ್ತಿ ಕೂಡ ಈ ಮಹಿಂದ್ರಾ ಕಾರ್ ಖರೀದಿಸಬಹುದು, ಕಡಿಮೆ ಬೆಲೆ ಮತ್ತು ಕಡಿಮೆ EMI

ಸಾಮಾನ್ಯ ಜನರಿಗಾಗಿ XUV ಕಾರ್ ಲಾಂಚ್ ಮಾಡಿದ ಮಹಿಂದ್ರಾ

Mahindra XUV3XO Price And Feature:  ಪ್ರಸ್ತುತ ದೇಶಿಯ ಆಟೋ ವಲಯದಲ್ಲಿ Mahindra 2024 ರಲ್ಲಿ ಅನೇಕ ಮಾದರಿಯ ಕಾರ್ ಗಳನ್ನೂ ಪರಿಚಯಿಸಲು ಕಂಪನಿಯು ಸಿದ್ಧತೆ ಮಾಡಿಕೊಂಡಿದೆ. 2024 ರಲ್ಲಿ ಬಿಡುಗಡೆಯಾಗಲಿರುವ ಪಟ್ಟಿಯಲ್ಲಿರುವ Mahindra XUV3XO ಇದೀಗ ಮಾರುಕಟ್ಟೆಯನ್ನು ಪ್ರವೇಶಿಸುವ ದಿನಾಂಕ ನಿಗದಿಯಾಗಿದೆ.

ಕಂಪನಿಯು Mahindra XUV3XO ಬಿಡುಗಡೆಯ ದಿನಾಂಕವನ್ನು ಘೋಷಿಸಿದ್ದು, ಗ್ರಾಹಕರು ಇನ್ನುಮುಂದೆ Mahindra XUV3XO ಮಾದರಿಯನ್ನು ಖರೀದಿಸಬಹುದಾಗಿದೆ. ಕಂಪನಿಯು ನೂತನವಾಗಿ ಪರಿಚಯಿಸಲಿರುವ Mahindra XUV3XO ಮಾದರಿಯು ಅತ್ಯಾಧುನಿಕ ಫೀಚರ್ ನೊಂದಿಗೆ ಬರಲಿದೆ. ಇದೀಗ ನಾವು Mahindra XUV3XO ಮಾದರಿಯ ಫೀಚರ್, ಬೆಲೆ, ಮೈಲೇಜ್ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ.

Mahindra XUV3XO Price And Feature
Image Credit: Livemint

ಸಾಮಾನ್ಯ ವ್ಯಕ್ತಿ ಕೂಡ ಈ ಮಹಿಂದ್ರಾ ಕಾರ್ ಖರೀದಿಸಬಹುದು
Mahindra ಕಂಪನಿಯು ಲೇಟೆಸ್ಟ್ ಮಾಡೆಲ್ Mahindra XUV3XO ಕಾರು ಪನೋರಮಿಕ್ ಸನ್‌ ರೂಫ್ ಅನ್ನು ಒಳಗೊಂಡಿದೆ. ಇದಲ್ಲದೆ ಹೊಸ ಕಾರು ಹಳೆಯ XUV 3OO ಗಿಂತ ವಿಭಿನ್ನವಾದ ಡ್ಯಾಶ್‌ ಬೋರ್ಡ್ ಅನ್ನು ಹೊಂದಿರುವ ಸಾಧ್ಯತೆಯಿದೆ. ಮಹಿಂದ್ರಾ XUV 3XO ಫ್ರೀ ಸ್ಟ್ಯಾಂಡಿಂಗ್ ಟಚ್‌ ಸ್ಕ್ರೀನ್ ಇನ್ಫೋಟೈನ್‌ ಮೆಂಟ್ ಸಿಸ್ಟಮ್ ಅನ್ನು ಹೊಂದಿದೆ. ಕಾರು 5 ಜನರು ಕುಳಿತುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಹೊಸ ಕಾರಿನ ಪ್ರಮುಖ ಆಕರ್ಷಣೆ ಎಂದರೆ ಪನೋರಮಿಕ್ ಸನ್ ರೂಫ್. ಈ ಸನ್‌ ರೂಫ್ 4 ಮೀಟರ್‌ ಗಿಂತಲೂ ದೊಡ್ಡದಾಗಿದೆ.

ಕಡಿಮೆ ಬೆಲೆ ಮತ್ತು ಕಡಿಮೆ EMI
ಕಂಪನಿಯು ಹೊಸ SUV ಯಲ್ಲಿ ಡ್ಯುಯಲ್ ಟೋನ್ ಅನ್ನು ನೀಡುತ್ತದೆ, ಜೊತೆಗೆ ಪಿಯಾನೋ ಕಪ್ಪು ಫಿನಿಶ್ ಹೊಂದಿದೆ. ಇದು ಎಲೆಕ್ಟ್ರಿಕ್ ಸನ್‌ ರೂಫ್, ಹಿಂಭಾಗದ ಸ್ಪಾಯ್ಲರ್, ವೆಂಟಿಲೇಟೆಡ್ ಸೀಟ್‌ ಗಳು, ಒಳಭಾಗದಲ್ಲಿ ಕ್ರೋಮ್ ಬಣ್ಣದ ಸೀಟ್‌ ಗಳೊಂದಿಗೆ ಡ್ಯುಯಲ್ ಟೋನ್ ಡ್ಯಾಶ್‌ ಬೋರ್ಡ್, ಸ್ಟೀರಿಂಗ್ ವೀಲ್‌ ನಲ್ಲಿ ಆಡಿಯೊ ಕಂಟ್ರೋಲ್‌ ಗಳು, ಎಲ್‌ಇಡಿ ಹೆಡ್‌ ಲೈಟ್‌ ಗಳು, ವೆಂಟಿಲೇಟೆಡ್ ಸೀಟ್‌ಗಳು, ಮುಂಭಾಗದಲ್ಲಿ ಗ್ಲಾಸಿ ಫಿನಿಶ್ ಅಲಾಯ್ ವೀಲ್‌ ಗಳನ್ನು ನೀಡುವ ಸಾಧ್ಯತೆಯಿದೆ. ಮಹಿಂದ್ರಾ XUV 3XO 1.2 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್‌ ನಿಂದ ನಿಯಂತ್ರಿಸಲ್ಪಡುವ ಸಾಧ್ಯತೆಯಿದೆ.

Mahindra XUV3XO Price In India
Image Credit: Financialexpress

ಇದು 108bhp ಮತ್ತು 200Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರಲಿದೆ. ಇದು 1.5 ಲೀಟರ್ ಡೀಸೆಲ್ ಎಂಜಿನ್ ಹೊಂದಿರುವ ನಿರೀಕ್ಷೆಯಿದೆ. ಇದು 115bhp ಮತ್ತು 300Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್‌ ಗಳು 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ AMT ಗೇರ್‌ ಬಾಕ್ಸ್ ಆಯ್ಕೆಗಳೊಂದಿಗೆ ಲಭ್ಯವಿದೆ.

Join Nadunudi News WhatsApp Group

ಈ SUV 18.89 kmpl ಮತ್ತು 20.1 kmpl ಮೈಲೇಜ್ ನೀಡುತ್ತದೆ. ಇನ್ನು ಮಹಿಂದ್ರಾದ ಈ ನೂತನ ಮಾದರಿ ಭಾರತೀಯ ಮಾರುಕಟ್ಟೆಯಲ್ಲಿ ಸುಮಾರು 7.99 ಲಕ್ಷದಿಂದ 14.76 ಲಕ್ಷ ಬೆಲೆಗೆ ಬಿಡುಗಡೆಯಾಗುವ ಸಾಧ್ಯತೆ ಇದೆ. ನೀವು ಬೆಲೆಯ ಬಗ್ಗೆ ಚಿಂತಿಸುವ ಅಗತ್ಯ ಇಲ್ಲ. ಕಾರಣ ಕಂಪನಿಯು ಈ ನೂತನ ಮಾದರಿಯ ಖರೀದಿಗೆ ಆಕರ್ಷಕ ಹಣಕಾಸು ಯೋಜನೆಯನ್ನು ಕೂಡ ನೀಡಿದ್ದು, ನೀವು ಕಡಿಮೆ EMI ನೊಂದಿಗೆ ಈ ಮಾದರಿಯನ್ನು ಖರೀದಿಸಬಹುದು.

Mahindra XUV 3XO Features
Image Credit: Carandbike

Join Nadunudi News WhatsApp Group