Pragati Scholarship: ವಿದ್ಯಾರ್ಥಿಗಳಿಗೆ ಕೇಂದ್ರದಿಂದ ಸಿಗಲಿದೆ 2 ಲಕ್ಷ ರೂ ವಿದ್ಯಾರ್ಥಿ ವೇತನ, ಇಂದೇ ಅರ್ಜಿ ಸಲ್ಲಿಸಿ.

ಕೇಂದ್ರದಿಂದ ಈ ವಿದ್ಯಾರ್ಥಿಗಳಿಗೆ ಸಿಗಲಿದೆ 2 ಲಕ್ಷದ ತನಕ ವಿದ್ಯಾರ್ಥಿವೇತನ

Pragati Student Scheme: ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಉತ್ತೇಜನಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಆಗಾಗ ವಿವಿಧ ರೀತಿಯ ವಿದ್ಯಾರ್ಥಿ ವೇತನವನ್ನು ಜಾರಿಗೊಳಿಸುತ್ತ, ವಿದ್ಯಾರ್ಥಿಗಳಿಗೆ ಹಣದ ಸಹಾಯವನ್ನು ಮಾಡುತ್ತಿದೆ. ಈಗಾಗಲೇ ಹಲವು ವಿದ್ಯಾರ್ಥಿ ವೇತನಗಳು ಜಾರಿಯಲ್ಲಿವೆ.

ಅರ್ಹ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುತ್ತ ತಮ್ಮ ವಿದ್ಯಾಭ್ಯಾಸಕ್ಕಾಗಿ ಹಣದ ಸಹಾಯವನ್ನು ಪಡೆದುಕೊಳ್ಳುತ್ತಿದ್ದಾರೆ. ಅದೆಷ್ಟೋ ವಿದ್ಯಾರ್ಥಿಗಳು ಕೇವಲ ವಿದ್ಯಾರ್ಥಿ ವೇತನದಿಂದಲೇ ತಮ್ಮ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿಕೊಂಡಿರುವ ಸಾಕಷ್ಟು ಉದಾಹರಣೆಗಳಿವೆ. ಇದೀಗ ಕೇಂದ್ರದಿಂದ ವಿದ್ಯಾರ್ಥಿಗಳಿಗಾಗಿ ಹೊಸ ವಿದ್ಯಾರ್ಥಿ ವೇತನ ಜಾರಿಯಾಗಿದೆ.

Pragati scholarship 2024
Image Credit: Dailyexcelsior

ವಿದ್ಯಾರ್ಥಿಗಳಿಗೆ ಕೇಂದ್ರದಿಂದ ಸಿಗಲಿದೆ 2 ಲಕ್ಷ ರೂ ವಿದ್ಯಾರ್ಥಿ ವೇತನ
ಕೇಂದ್ರ ಸರ್ಕಾರ ಇದೀಗ ನೂತನವಾಗಿ ವಿದ್ಯಾರ್ಥಿ ವೇತನ ಯೋಜನೆಯನ್ನು ಜಾರಿಗೆ ತಂದಿದೆ. ಕೇಂದ್ರ ಸರ್ಕಾರದ “ಪ್ರಗತಿ ವಿದ್ಯಾರ್ಥಿ ಯೋಜನೆ”ಯಡಿ ಡಿಪ್ಲೊಮೊ ಶಿಕ್ಷಣ ಪಡೆಯುತ್ತಿರುವವರಿಗೆ ಆರ್ಥಿಕ ನೆರವು ನೀಡಲು ಮುಂದಾಗಿದೆ. ಇದನ್ನು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯು ಜಾರಿಗೆ ತಂದಿದೆ. ಎಐಸಿಟಿಇ ಅನುಮೋದಿತ ಸಂಸ್ಥೆಗಳಲ್ಲಿ ತಾಂತ್ರಿಕ ಪದವಿ ಕೋರ್ಸ್‌ ಗಳನ್ನು ಪಡೆಯುತ್ತಿರುವ ಮೊದಲ ವರ್ಷ ಮತ್ತು ಎರಡನೇ ವರ್ಷದ ಅಭ್ಯರ್ಥಿಗಳಿಗೆ ಈ ಯೋಜನೆ ಅನ್ವಯಿಸುತ್ತದೆ.

ಮೊದಲ ವರ್ಷದಲ್ಲಿ ಪ್ರವೇಶ ಪಡೆದವರಿಗೆ 4 ವರ್ಷಗಳ ವಿದ್ಯಾರ್ಥಿವೇತನ ಮತ್ತು ಎರಡನೇ ವರ್ಷದಲ್ಲಿ ಪ್ರವೇಶ ಪಡೆದವರಿಗೆ 3 ವರ್ಷಗಳ ವಿದ್ಯಾರ್ಥಿವೇತನ ಸಿಗುತ್ತದೆ. ಎರಡು ವಿದ್ಯಾರ್ಥಿಗಳನ್ನು ಹೊಂದಿರುವ ಮತ್ತು ಎಐಸಿಟಿಇ ಅನುಮೋದಿತ ಶಿಕ್ಷಣ ಸಂಸ್ಥೆಗಳಲ್ಲಿ ಓದುತ್ತಿರುವ ಕುಟುಂಬದ ಎರಡೂ ವಿದ್ಯಾರ್ಥಿಗಳಿಗೆ ಈ ಯೋಜನೆ ಅನ್ವಯಿಸುತ್ತದೆ. ಪ್ರಗತಿ ಸ್ಕಾಲರ್‌ ಶಿಪ್ ಯೋಜನೆಯಡಿ, 4 ವರ್ಷಗಳವರೆಗೆ ವಾರ್ಷಿಕ 50,000 ರೂ. ಅಂದರೆ ವಿದ್ಯಾರ್ಥಿಗೆ ಉಚಿತವಾಗಿ 2 ಲಕ್ಷ ರೂ. ವಾರ್ಷಿಕ ರೂ. 50,000 ಒಮ್ಮೆ ನೀಡಲಾಗುವುದು.

ಇಂದೇ ಅರ್ಜಿ ಸಲ್ಲಿಸಿ
ಈ ವಿದ್ಯಾರ್ಥಿವೇತನವನ್ನು ಪಡೆಯಲು ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯ ರೂ. 8 ಲಕ್ಷ ಮೀರಬಾರದು. ಅದೇ ರೀತಿ ವಿದ್ಯಾರ್ಥಿ ಅನುತ್ತೀರ್ಣರಾದರೆ ಅಥವಾ ವ್ಯಾಸಂಗವನ್ನು ಮಧ್ಯದಲ್ಲಿ ನಿಲ್ಲಿಸಿದರೆ ಸ್ಕಾಲರ್ ಶಿಪ್ ಬರುವುದಿಲ್ಲ. ಪ್ರಗತಿ ಸ್ಕಾಲರ್‌ ಶಿಪ್ ಪಡೆಯಲು ಅರ್ಹ ವಿದ್ಯಾರ್ಥಿಗಳು ಆನ್‌ ಲೈನ್ ಮೋಡ್ ಮೂಲಕ ಅಧಿಕೃತ ವೆಬ್‌ಸೈಟ್ https://scholarships.gov.in ನಲ್ಲಿ ಅರ್ಜಿ ಸಲ್ಲಿಸಬಹುದು.

Join Nadunudi News WhatsApp Group

Pragati Scholarship Eligibility
Image Credit: Thebetterindia

Join Nadunudi News WhatsApp Group