iPhone 14: ಐಫೋನ್ 14 ಮೇಲೆ ಭರ್ಜರಿ 27,000 ರೂ ಡಿಸ್ಕೌಂಟ್, ತಕ್ಷಣ ಬುಕ್ ಮಾಡಿದ್ರೆ ಮಾತ್ರ ಸಿಗಲಿದೆ.

ಐಫೋನ್ 14 ಮೇಲೆ ಭರ್ಜರಿ 27000 ರೂ ಡಿಸ್ಕೌಂಟ್

iPhone 14 Amazon Offer: ಇನ್ನು 2023 ರಲ್ಲಿ iPhone 15 ರ ಮಾದರಿ ಲಾಂಚ್ ಆಗಿದ್ದು ಭರ್ಜರಿ ಬೇಡಿಕೆ ಪಡೆದುಕೊಂಡಿದೆ. ಸದ್ಯ ಈ ವರ್ಷದಲ್ಲಿ ಈ iPhone 16 ಬಿಡುಗಡೆಗಾಗಿ ಕಂಪನಿ ಸಿದ್ಧತೆ ಮಾಡುತ್ತಿದೆ. ಈಗಾಗಲೇ iPhone 16 ನ ಫೀಚರ್ ನ ಬಗ್ಗೆ ಒಂದಿಷ್ಟು ಮಾಹಿತಿ ಕೂಡ ಸೋರಿಕೆಯಾಗಿದೆ. 

ಇನ್ನು ಕಂಪನಿಯು ಹೊಸ ಹೊಸ ಮಾದರಿಯನ್ನು ಲಾಂಚ್ ಮಾಡುತ್ತಿದ್ದಂತೆ ತನ್ನ ಹಳೆಯ ಮಾದರಿಗಳ ಬೆಲೆಯಲ್ಲಿ ಸ್ವಲ ಇಳಿಕೆ ಮಾಡುತ್ತದೆ. ಹಾಗೆಯೆ ವಿವಿಧ ಇ ಕಾಮರ್ಸ್ ವೆಬ್ ಸೈಟ್ ಗಳು ಕೂಡ ಐಫೋನ್ ಖರೀದಿಗೆ ಆಕರ್ಷಕ ರಿಯಾಯಿತಿಯನ್ನು ಕೂಡ ನೀಡುತ್ತವೆ. ಸದ್ಯ ಜನಪ್ರಿಯ ಇ ಕಾಮರ್ಸ್ ವೆಬ್ ಸೈಟ್ Amazon ಇದೀಗ ಐಫೋನ್ 14 ಖರೀದಿಗೆ ಉತ್ತಮ ರಿಯಾಯಿತಿಯನ್ನು ನೀಡಿದೆ.

iPhone 14 Offer
Image Credit: Live Mint

ತಕ್ಷಣ ಬುಕ್ ಮಾಡಿದ್ರೆ ಮಾತ್ರ ಸಿಗಲಿದೆ ಈ ಆಫರ್
ಹೊಸ ಐಫೋನ್ ಖರೀದಿಸಲು ಬಯಸಿದರೆ, ಪ್ರಸ್ತುತ ನೀವು Amazon ನಲ್ಲಿ iPhone 14 ಅನ್ನು ಖರೀದಿಸಬಹುದು. ಕಂಪನಿಯು ಐಫೋನ್ 15 ಸರಣಿಯನ್ನು ಬಿಡುಗಡೆ ಮಾಡಿದ್ದರೂ ಸಹ, ಮಾರುಕಟ್ಟೆಯಲ್ಲಿ ಈ ಐಫೋನ್‌ 14 ಗೆ ಇನ್ನೂ ಬೇಡಿಕೆಯಿದೆ. ನೀವು ಗ್ರಾಹಕರು ವಿವಿಧ ಬ್ಯಾಂಕ್ ಕೊಡುಗೆಗಳು ಮತ್ತು ವಿನಿಮಯ ಕೊಡುಗೆಗಳೊಂದಿಗೆ ಅಮೆಜಾನ್ ನಲ್ಲಿ ಅತಿ ಕಡಿಮೆ ಬೆಲೆಗೆ iPhone 14 ಅನ್ನು ಖರೀದಿಸಬಹುದು. ಅಮೆಜಾನ್ ನಿಮ್ಮ ಐಫೋನ್ ಖರೀದಿಯ ಆಸೆಯನ್ನು ಈಡೇರಿಸಿಕೊಳ್ಳವು ಒಂದೊಳ್ಳೆ ಅವಕಾಶವನ್ನು ನೀಡುತ್ತಿದೆ.

ಐಫೋನ್ 14 ಮೇಲೆ ಭರ್ಜರಿ 27000 ರೂ ಡಿಸ್ಕೌಂಟ್
Apple iPhone 14 ರ ರಿ128 GB ಸ್ಟೋರೇಜ್ ರೂಪಾಂತರದ ಬೆಲೆ 79,900 ರೂ. ಆಗಿದೆ. ಆದಾಗ್ಯೂ, ಅಮೆಜಾನ್ ನಲ್ಲಿ 58,999 ಕ್ಕೆ ರಿಯಾಯಿತಿಯ ನಂತರ ಖರೀದಿಗೆ ಲಭ್ಯವಾಗುವಂತೆ ಮಾಡಲಾಗುತ್ತಿದೆ. ಬ್ಯಾಂಕ್ ಕೊಡುಗೆಗಳ ಅಡಿಯಲ್ಲಿ, ICICI ಮತ್ತು SBI ಬ್ಯಾಂಕ್ ಕಾರ್ಡ್‌ ಗಳ ಮೇಲೆ 3000 ರೂಪಾಯಿಗಳ ರಿಯಾಯಿತಿಯನ್ನು ನೀಡಲಾಗುತ್ತಿದೆ. ಇದಲ್ಲದೇ ನಿಮಗೆ 27,000 ರೂಪಾಯಿ ಎಕ್ಸ್ ಚೇಂಜ್ ಆಫರ್ ಕೂಡ ನೀಡಲಾಗುತ್ತಿದೆ. ಇದರ ಅಡಿಯಲ್ಲಿ ನೀವು ಈ ಹ್ಯಾಂಡ್‌ ಸೆಟ್ ಅನ್ನು ಇನ್ನೂ ಕಡಿಮೆ ಬೆಲೆಗೆ ಖರೀದಿಸಬಹುದು.

iPhone 14 Offer Amazon Offer
Image Credit: India Today

iPhone 14 ರಲ್ಲಿ ಏನೆಲ್ಲಾ ವೈಶಿಷ್ಟ್ಯಗಳಿವೆ ಗೊತ್ತಾ..?
iPhone 14 ನಲ್ಲಿ ನೀವು 6.1 ಇಂಚಿನ ಸೂಪರ್ ರೆಟಿನಾ XDR ಡಿಸ್ಪ್ಲೇಯನ್ನು ಪಡೆಯುತ್ತೀರಿ. ಇದರೊಂದಿಗೆ, ಇದು A15 ಬಯೋನಿಕ್ ಚಿಪ್‌ ಸೆಟ್‌ ನೊಂದಿಗೆ ಬರುತ್ತದೆ. ಇದರ ಪಿಕ್ಸೆಲ್ ರೆಸಲ್ಯೂಶನ್ 2532×1170 ಆಗಿದೆ. ಇದರಲ್ಲಿ ನೀವು 12MP ಡ್ಯುಯಲ್ ಕ್ಯಾಮೆರಾಗಳನ್ನು ಪಡೆಯುತ್ತೀರಿ. ಹಾಗೆಯೆ ಗ್ರಾಹಕರು 128GB, 256GB ಮತ್ತು 512GB ಸ್ಟೋರೇಜ್ ರೂಪಾಂತರಗಳನ್ನು ಪಡೆಯುತ್ತೀರಿ. ಇದು ಸೆರಾಮಿಕ್ ಶೀಲ್ಡ್ನ ಭದ್ರತೆಯೊಂದಿಗೆ ಬರುತ್ತದೆ. ಈ ಸಾಧನವು 3279mAh ಬ್ಯಾಟರಿ ಅವಧಿಯನ್ನು ಹೊಂದಿದೆ. ಇದು 15W ವೈರ್‌ ಲೆಸ್ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ.

Join Nadunudi News WhatsApp Group

iPhone 14 Price In India
Image Credit: Aajtak

Join Nadunudi News WhatsApp Group