Lakshmi Hebbalkar: 5 ಗ್ಯಾರೆಂಟಿ ಬೆನ್ನಲ್ಲೇ 6 ಗ್ಯಾರೆಂಟಿ ಘೋಷಣೆ ಮಾಡಿದ ಲಕ್ಷ್ಮಿ ಹೆಬ್ಬಾಳ್ಕರ್, ಹೊಸ ಯೋಜನೆ ಜಾರಿ

ಶೀಘ್ರದಲ್ಲೇ ಸರ್ಕಾರದಿಂದ 6 ನೇ ಗ್ಯಾರಂಟಿ ಯೋಜನೆ ಘೋಷಣೆಯಾಗಲಿದೆ

Congress 6th Guarantee Scheme: ರಾಜ್ಯದಲ್ಲಿ Congress ಸರ್ಕಾರ ತನ್ನ ಅಧಿಕಾರವನ್ನು ಪಡೆಯಲು ಉಚಿತ ಗ್ಯಾರಂಟಿ ಯೋಜನೆಗಳನ್ನು ಅಸ್ತ್ರವನ್ನಾಗಿ ಬಳಸಿಕೊಂಡಿದೆ. ಉಚಿತ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ ಕಾರಣ ಜನರು ಕಾಂಗ್ರೆಸ್ ಸರ್ಕಾರಕ್ಕೆ ತಮ್ಮ ಬೆಂಬಲವನ್ನು ನೀಡಿದ್ದರು.

ಇನ್ನು ಚುನಾವಣಾ ಸಮಯ್ದಲ್ಲಿ ಘೋಷಿಸಿರುವಂತೆ ಕಾಂಗ್ರೆಸ್ ಸರ್ಕಾರ ಸದ್ಯ ರಾಜ್ಯದಲ್ಲಿ ಐದು ಯೋಜನೆಗಳನ್ನು ಜಾರಿಗೆ ತಂದಿದೆ. ಇನ್ನು ಕಾಂಗ್ರೆಸ್ ಸರ್ಕಾರ ಐದು ಉಚಿತ ಗ್ಯಾರಂಟಿಗಳು ಮಹಿಳೆಯರಿಗೆ ಹೆಚ್ಚು ಅನುಕೂಲವನ್ನು ತಂದು ಕೊಟ್ಟಿದೆ ಎಂದರೆ ತಪ್ಪಾಗಲಾರದು.

Lakshmi Hebbalkar Latest News
Image Credit: The Hindu

ರಾಜ್ಯದ ಜನತೆಗೆ ಇನ್ನೊಂದು ಗುಡ್ ನ್ಯೂಸ್
ಸರ್ಕಾರ ಘೋಷಿಸಿರುವ ಶಕ್ತಿ ಯೋಜನೆ, ಗೃಹ ಲಕ್ಷ್ಮಿ ಯೋಜನೆಗಳ ಲಾಭ ವಿಶೇಷವಾಗಿ ಮಹಿಳೆಯರಿಗೆ ತಲುಪುತ್ತಿದೆ. ಮಹಿಳಾ ಸಬಲೀಕರಣಕ್ಕಾಗಿ ಸರ್ಕಾರ ಈ ಎರಡು ಯೋಜನೆಗಳನ್ನು ಘೋಷಿಸಿತ್ತು. ಇನ್ನು ಅನ್ನ ಭಾಗ್ಯ ಯೋಜನೆಯ ಲಾಭ ಕೂಡ ಮಹಿಳೆಯರೇ ಪಡೆಯುತ್ತಿದ್ದಾರೆ. ಇನ್ನು ಗೃಹ ಜ್ಯೋತಿ ಯೋಜನೆ ಹಾಗೂ ಯುವ ನಿಧಿ ಯೋಜನೆಯ ಲಾಭ ಪಡೆಯುವಲ್ಲಿ ಕೂಡ ಮಹಿಳೆಯರ ಪಾಲು ಇದೆ.

ನಿರುದ್ಯೋಗ ಯುವತಿಯರು ಕೂಡ ಯುವ ನಿಧಿ ಯೋಜನೆಯಡಿ ನಿರುದ್ಯೋಗ ಭತ್ಯೆಯನ್ನು ಪಡೆಯುತ್ತಿದ್ದಾರೆ. ಇಷ್ಟೆಲ್ಲ ಯೋಜನೆಗಳನ್ನು ಘೋಷಿಸಿ ಅನುಷ್ಠಾನಗೊಳಿಸಿರುವ ಕಾಂಗ್ರೆಸ್ ಸರ್ಕಾರ ಇದೀಗ 6 ನೇ ಉಚಿತ ಯೋಜನೆ ಘೋಷಣೆ ನಿರ್ಧರಿಸಿದೆ ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾ ಸಚಿವರಾದ Lakshmi Hebbalkar ಅವರು ಮಾಹಿತಿ ನೀಡಿದ್ದಾರೆ.

Congress 6th Guarantee Scheme For Asha Workers And Anganwadi Workers
Image Credit: Graam

ಶೀಘ್ರದಲ್ಲೇ ಸರ್ಕಾರದಿಂದ 6 ನೇ ಗ್ಯಾರಂಟಿ ಯೋಜನೆ ಘೋಷಣೆಯಾಗಲಿದೆ
ಸದ್ಯ ಕಾಂಗ್ರೆಸ್ ಸರ್ಕಾರ ವಿವಿಧ ಜಿಲ್ಲೆಗಳಲ್ಲಿ ಕಾಂಗ್ರೆಸ್ ಸಮಾವೇಶ ನಡೆಸುತ್ತಿದೆ. ಇತ್ತೀಚಿಗೆ ರಾಮನಗರದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ರಾಜ್ಯದ ಜನತೆಗೆ ಮತ್ತೊಂದು ಸಿಹಿ ಸುದ್ದಿ ನೀಡಿದ್ದಾರೆ. ಶೀಘ್ರದಲ್ಲೇ ಸರ್ಕಾರದಿಂದ 6 ನೇ ಗ್ಯಾರಂಟಿ ಯೋಜನೆ ಘೋಷಣೆಯಾಗಲಿದೆ ಎಂದಿದ್ದಾರೆ. ಈ 6 ನೇ ಗ್ಯಾರಂಟಿಯ ಭರವಸೆಯನ್ನು ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡಲಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

Join Nadunudi News WhatsApp Group

Join Nadunudi News WhatsApp Group