Anna Bhagya: ಅನ್ನಭಾಗ್ಯ ಯೋಜನೆಯಲ್ಲಿ ಮಹತ್ವದ ಬದಲಾವಣೆ ಮಾಡಿದ ಸಿದ್ದರಾಮಯ್ಯ, ಖಾತೆಗೆ ಹಣ ಜಮಾ.

ಜನರು ಉಚಿತ ಅಕ್ಕಿ ನೀಡುವ ಬದಲು ಅವರ ಖಾತೆಗೆ ಹಣವನ್ನ ಜಮಾ ಮಾಡಲು ಕಾಂಗ್ರೆಸ್ ಸರ್ಕಾರ ನಿರ್ಧಾರವನ್ನ ಮಾಡಿದೆ.

Anna Bhagya Scheme Update: ಕಾಂಗ್ರೆಸ್ ಸರ್ಕಾರದ ಐದು ಗ್ಯಾರೆಂಟಿ ಗಳಲ್ಲಿ ಅನ್ನಭಾಗ್ಯ (Anna Bhagya) ಯೋಜನೆಯು ಒಂದಾಗಿದೆ. ಸಿದ್ದರಾಮಯ್ಯ ಅವರು ಚುನಾವಣೆಯ ಪ್ರಚಾರದ ವೇಳೆ ಪ್ರತಿ ತಿಂಗಳು ಬಿಪಿಎಲ್ ಪಡಿತದಾರರಿಗೆ 10 ಕೆ.ಜಿ ರೇಷನ್ ನೀಡುವದಾಗಿ ಗ್ಯಾರೆಂಟಿ ಹೊರಡಸಿದ್ದರು. ಆದರೆ ಇದೀಗ ಕಾಂಗ್ರೆಸ್ ಸರ್ಕಾರ ಬಂದು 2 ತಿಂಗಳು ಕಳೆದರು ಸಹ ಉಚಿತ ಅನ್ನಭಾಗ್ಯ ಯೋಜನೆ ಸೌಲಭ್ಯ ವಿಳಂಬ ಆಗುತ್ತಿದೆ.

ಆದರೆ ಪ್ರತಿ ಕುಟುಂಬಕ್ಕೆ 10 ಕೆಜಿ ಅಕ್ಕಿ ವಿತರಿಸುವುದು ಸರ್ಕಾರಕ್ಕೆ ಸ್ವಲ್ಪ ಕಷ್ಟವಾಗುತ್ತಿದೆ, ಬೇರೆ ಬೇರೆ ರಾಜ್ಯಗಳಿಂದ ಅಕ್ಕಿಯನ್ನು ಸಂಗ್ರಹಿಸುತ್ತಿದ್ದೇವೆ. ಈ ಯೋಜನೆ ಜಾರಿ ಜುಲೈ 1 ಕ್ಕೆ ಆಗದೆ ಇರಬಹುದು ಎಂದು ಸಿದ್ದರಾಮಯ್ಯ ಇತ್ತೀಚಿಗೆ ಸ್ಪಷ್ಟನೆ ನೀಡಿದ್ದಾರೆ.

Instead of giving people free rice, the Congress government has decided to deposit money into their accounts.
Image Credit: amarujala

ಕಾಂಗ್ರೆಸ್ ಸರ್ಕಾರ ಹೊಸ ನಿರ್ಧಾರ
ಕಾಂಗ್ರೆಸ್ ಗ್ಯಾರೆಂಟಿಗಳಲ್ಲಿ ಒಂದಾಗಿರುವ ಅಕ್ಕಿ ವಿತರಣೆಗೆ ತೊಡಕಾಗಿರುವುದರಿಂದ ಐದು ಕೆಜಿ ಅಕ್ಕಿ ಬದಲಿಗೆ ಹಣ ನೀಡಲು ಕರ್ನಾಟಕ ಸಚಿವ ಸಂಪುಟ ಮಹತ್ವದ ನಿರ್ಧಾರ ಕೈಗೊಂಡಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು ಈ ಕುರಿತು ಆಹಾರ ಸಚಿವ ಸಚಿವ ಮುನಿಯಪ್ಪ ಮಾಹಿತಿ ನೀಡಿದ್ದಾರೆ. ಇನ್ನು ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಕಾರ್ಡ್ ದಾರರಿಗೆ 5 ಕೆಜಿ ಅಕ್ಕಿ ಹಾಗು ಇನ್ನುಳಿದ 5 ಕೆಜಿ ಅಕ್ಕಿಯ ಬದಲು ಹಣ ಸಿಗಲಿದೆ.

ಐದು ಕೆಜಿ ಅಕ್ಕಿ ಬದಲು ಹಣ ನೀಡಲು ನಿರ್ಧರಿಸಿದ ಸರ್ಕಾರ
ಸರ್ಕಾರ ಜನರಿಗೆ 5 ಕೆಜಿ ಅಕ್ಕಿ ಬದಲು ಹಣ ನೀಡಲು ಸಂಪುಟ ಸಭೆಯಲ್ಲಿ ತೀರ್ಮಾನಿಸಿದೆ. ಪ್ರತಿ ಕೆಜಿ ಅಕ್ಕಿಗೆ 34 ರೂಪಾಯಿಯಂತೆ ಬಿಪಿಎಲ್ ಪಡಿತರ ಕಾರ್ಡ್ ದಾರರಿಗೆ ಮಾಸಿಕ ತಲಾ 170 ರೂಪಾಯಿ ನೀಡುತ್ತೇವೆ. ಜುಲೈ ತಿಂಗಳಿಂದಲೇ ಪಡಿತದಾರರ ಖಾತೆಗೆ ಹಣ ವರ್ಗಾವಣೆ ಮಾಡಲಾಗುವುದು ಎಂದು ಮುನಿಯಪ್ಪ ತಿಳಿಸಿದ್ದಾರೆ.

Join Nadunudi News WhatsApp Group

Since none of the state and central governments have given rice, the Congress government has decided to put money into people's accounts instead of rice
Image Credit: abplive

ಇನ್ನು 5 ಕೆಜಿ ಅಕ್ಕಿಗೆ ಹಣ ನೀಡುವುದು ಅಕ್ಕಿ ಸಿಗುವವರೆಗೂ ಮಾತ್ರ ಎಂದು ಸರ್ಕಾರ ಹೇಳಿದೆ. ಅಕ್ಕಿ ಸಿಗುವವರೆಗೂ ಮಾತ್ರ ಪರ್ಯಾಯ ವ್ಯವಸ್ಥೆಯಾಗಿ ಹಣ ನೀಡುತ್ತಿದ್ದೇವೆ. ಅಕ್ಕಿ ಸಿಕ್ಕ ನಂತರ ಅನ್ನಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿಯನ್ನೇ ನೀಡುತ್ತೇವೆ ಎಂದು ಮುನಿಯಪ್ಪ ಅವರು ತಿಳಿಸಿದ್ದಾರೆ.

Join Nadunudi News WhatsApp Group