Gruha Lakshmi: ಮನೆಯ ಯಜಮಾನಿಯರಿಗೆ ಅಗತ್ಯ ಮಾಹಿತಿ, ಈ ಕೆಲಸ ಮಾಡದಿದ್ದರೆ ನಿಮ್ಮ ಖಾತೆಗೆ ಬರಲ್ಲ ಗೃಹಲಕ್ಷ್ಮೀ ಹಣ

ಗೃಹ ಲಕ್ಷ್ಮಿ ಹಣ ನಿಮ್ಮ ಖಾತೆಗೆ ಬರಬೇಕಾದ್ರೆ ಇಂದೇ ಈ ಕೆಲಸಗಳನ್ನು ಮಾಡಿ

Congress Gruha Lakshmi Scheme Latest Update: ಪ್ರಸ್ತುತ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ಥಿತ್ವದಲ್ಲಿದೆ. Congress Government ಘೋಷಣೆ ಮಾಡಿದ 4 ಗ್ಯಾರಂಟಿ ಯೋಜನೆಗಳು ಈಗಾಗಲೇ ಜಾರಿಯಲ್ಲಿದೆ. ಇನ್ನು ಯುವ ನಿಧಿ ಯೋಜನೆ ಜಾರಿಯಾಗುದೊಂದು ಬಾಕಿಯಿದೆ.

ಇದೀಗ ಸಿದ್ದರಾಮಯ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಯಾದ ಗೃಹ ಲಕ್ಷ್ಮಿ ಯೋಜನೆಗೆ ಈಗಾಗಲೇ ಚಾಲನೆ ನೀಡಿದ್ದು ಹಲವು ಫಲಾನುಭವಿಗಳ ಖಾತೆಗೆ 2000 ಹಣ ಜಮಾ ಆಗಿದೆ. ಇದೀಗ Gruha Lakshmi ಹಣ ನಿಮ್ಮ ಖಾತೆಗೆ ಜಮಾ ಆಗದಿದ್ದರೆ ಇಂದೇ ಈ ಕೆಲಸ ಮಾಡುವುದು ಉತ್ತಮ.

Congress Gruha Lakshmi Scheme Latest Update
Image Credit: News9live

ಸಿದ್ದರಾಮಯ್ಯ ಸರ್ಕಾರದ ಗೃಹ ಲಕ್ಷ್ಮಿ ಯೋಜನೆ
Gruha Lakshmi ಯೋಜನೆಗೆ ಸರ್ಕಾರ ಈಗಾಗಲೇ ಚಾಲನೆ ನೀಡಿದೆ. ಗೃಹ ಲಕ್ಷ್ಮಿ ಯೋಜನೆಯಡಿ ಒಟ್ಟು 44 .52 ಲಕ್ಷ ಫಲಾನುಭವಿಗಳ ಖಾತೆಗೆ ಹಣ ಜಮಾ ಆಗಿದೆ. ಆದರೆ ಕಾರಣಾಂತರಗಳಿಂದ ಇನ್ನು ಕೆಲವರ ಖಾತೆಗೆ ಹಣ ಜಮಾ ಆಗಿಲ್ಲ. ಆಧಾರ್ ಕಾರ್ಡ್ ಬ್ಯಾಂಕ್ ಖಾತೆಗೆ ಲಿಂಕ್ ಆಗದೆ ಇರುವವರ ಅಕೌಂಟ್ ಗೆ Gruha Lakshmi Money ಬಂದಿಲ್ಲ. ಕೂಡಲೇ ಬ್ಯಾಂಕ್ ಖಾತೆಗೆ ಆಧಾರ ಕಾರ್ಡ್ ಲಿಂಕ್ ಮಾಡುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಗೃಹ ಲಕ್ಷ್ಮಿ ಹಣ ನಿಮ್ಮ ಖಾತೆಗೆ ಬರಬೇಕಾದ್ರೆ ಇಂದೇ ಈ ಕೆಲಸಗಳನ್ನು ಮಾಡಿ
*ರೇಷನ್ ಕಾರ್ಡ್ ತಿದ್ದುಪಡಿ ಬಾಕಿ ಇದ್ದಲಿ, ನಿಮ್ಮ ಹತ್ತಿರದ ಸೇವಾ ಕೇಂದ್ರ ಅಥವಾ ನ್ಯಾಯ ಬೆಲೆ ಅಂಗಡಿಗೆ ಹೋಗಿ ತಿದ್ದುಪಡಿ ಮಾಡಿಸಿಕೊಳ್ಳುದು ಉತ್ತಮ.

*ನಿಮ್ಮ Ration Card KYC ಆಗದಿದ್ದರೆ ಕೂಡಲೇ ಹತ್ತಿರದ ನ್ಯಾಯ ಬೆಲೆ ಅಂಗಡಿಗೆ ಹೋಗಿ KYC ಅಪ್ಡೇಟ್ ಮಾಡಿಕೊಳ್ಳಿ.

Join Nadunudi News WhatsApp Group

gruha lakshmi scheme new updates
Image Credit: Asianetnews

*ರೇಷನ್ ಕಾರ್ಡ್, ಆಧಾರ್ ಕಾರ್ಡ್, ಮತ್ತು ಬ್ಯಾಂಕ್ ಖಾತೆ ಮಾಹಿತಿಯಲ್ಲಿ ತಪ್ಪಿದ್ದರೆ ಸರಿ ಪಡಿಸಿ, NPCI ಮ್ಯಾಪಿಂಗ್ ಮಾಡಿಸಿದರೆ ಗೃಹ ಲಕ್ಷ್ಮಿ ಹಣ ಖಾತೆಗೆ ಜಮಾ ಆಗಲಿದೆ.

*ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗದೆ ಇದ್ದರೆ ಆದಷ್ಟು ಬೇಗ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ, ಆಧಾರ್ ಅನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡುವುದು ಉತ್ತಮ.

* ಹಾಗೆ ಇದುವರೆಗೆ ಅರ್ಜಿ ಸಲ್ಲಿಸಿದವರು ಮತ್ತು ತಾಂತ್ರಿಕ ತೊಂದರೆಯಿಂದ ಅರ್ಜಿ ಶಾಲಿಯಾಳು ಸಾಧ್ಯವಾಗದೆ ಇದ್ದವರು ಎಲ್ಲ ದಾಖಲೆಗಳನ್ನು ಸರಿ ಪಡಿಸಿಕೊಂಡು ಅರ್ಜಿ ಸಲ್ಲಿಸಿದರೆ ಸೆಪ್ಟೆಂಬರ್ ನಿಂದ ಗೃಹ ಲಕ್ಷ್ಮಿ ಯೋಜನೆಯ ಹಣವನ್ನು ಪಡೆಯಬಹುದು.

Join Nadunudi News WhatsApp Group