Gruha Lakshmi: ಗೃಹಲಕ್ಷ್ಮಿ ಯೋಜನೆಯ ಬಿಗ್ ಅಪ್ಡೇಟ್, ಹಣ ಪಡೆಯಲು ಮಹಿಳೆಯರು ತಕ್ಷಣ ಈ ಕೆಲಸ ಮಾಡಿ

ಗೃಹ ಲಕ್ಷ್ಮಿ ಯೋಜನೆಯ ಹಣವನ್ನು ಪಡೆದುಕೊಳ್ಳಲು ತಕ್ಷಣ ಈ ಕೆಲಸ ಮಾಡಿ

Gruha Lakshmi Yojana Latest Update: ಸದ್ಯ ರಾಜ್ಯದಲ್ಲಿ ಉಚಿತ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ Gruha Lakshmi ಯೋಜನೆ ಅನುಷ್ಠಾನಗೊಂಡು ಸತತ 8 ತಿಂಗಳು ಕಳೆದಿದೆ. ರಾಜ್ಯ ಸರ್ಕಾರ ಇಗ್ಗಲೇ ಗೃಹಲಕ್ಷ್ಮಿ ಯೋಜನೆಯಡಿ ಅರ್ಹ ಮಹಿಳೆಯರಿಗೆ 7 ಕಂತಿನ ಹಣವನ್ನು ಜಮಾ ಮಾಡಿದೆ.

ಈ ಮಾರ್ಚ್ ತಿಂಗಳಿನಲ್ಲಿ ಸಾಕಷ್ಟು ಮಹಿಳೆಯರು 6 ಮತ್ತು 7 ಕಂತಿನ ಹಣವನ್ನು ಪಡೆದುಕೊಂಡಿದ್ದಾರೆ. ಗೃಹ ಲಕ್ಷ್ಮಿ ಯೋಜನೆ ಸರಿಸುಮಾರು 90 ಪ್ರತಿಶತ ಅರ್ಹರಿಗೆ ತಲುಪಿದೆ. ಇನ್ನು 10 % ಪ್ರತಿಶತದಷ್ಟು ಮಹಿಳೆಯರಿಗೆ ದಾಖಲೆ ಹಾಗೂ ತಾಂತ್ರಿಕ ದೋಷದ ಕಾರಣ ಅರ್ಹರಿಗೆ ತಲುಪಿಲ್ಲ ಎನ್ನಬಹುದು.

Gruha Lakshmi 7th Installment Money
Image Credit: Karnataka Times

ಗೃಹ ಲಕ್ಷ್ಮಿ ಫಲಾನುಭವಿಗಳಿಗೆ ಬಿಗ್ ಅಪ್ಡೇಟ್
ಇನ್ನು ಆದಷ್ಟು ಬೇಗ ಎಲ್ಲ ಅರ್ಹರಿಗೂ ಅಂದರೆ ಗೃಹ ಲಕ್ಷ್ಮಿ ಯೋಜನೆಯನ್ನು ರಾಜ್ಯದಲ್ಲಿ 100% ಯಶಸ್ವಿಗೊಳಿಸಲು ಸರ್ಕಾರ ಸಂಪೂರ್ಣ ಸಿದ್ಧತೆ ನಡೆಸುತ್ತಿದೆ. ಈ ಹಿನ್ನಲೆ ರಾಜ್ಯ ಸರ್ಕಾರ ಗೃಹ ಲಕ್ಷ್ಮಿ ಫಲಾನುಭವಿಗಳಿಗೆ ಮತ್ತೊಮ್ಮೆ ಅರ್ಜಿ ಸಲ್ಲಿಕೆಯ ಸರಿಪಡಿಸುವಿಕೆಗೆ ಅವಕಾಶವನ್ನ ನೀಡಿದೆ. ನೀವು ಗೃಹ ಲಕ್ಷ್ಮಿ ಫಲಾನುಭವಿಗಳಾಗಿದ್ದು, ಇನ್ನು ಕೂಡ ಹಣವನ್ನು ಪಡೆಯದಿದ್ದರೆ ತಕ್ಷಣ ಈ ದಾಖಲೆಗಳನ್ನು ನೀಡಿ ಆದಷ್ಟು ಬೇಗ ಗೃಹ ಲಕ್ಷ್ಮಿ ಯೋಜನೆಯ ಹಣವನ್ನು ಪಡೆದುಕೊಳ್ಳಿ.

ಗೃಹ ಲಕ್ಷ್ಮಿ ಯೋಜನೆಯ ಹಣವನ್ನು ಪಡೆದುಕೊಳ್ಳಲು ತಕ್ಷಣ ಈ ಕೆಲಸ ಮಾಡಿ
•ಗೃಹ ಲಕ್ಷ್ಮಿ ಯೋಜನೆಯ ಹಣ ಈ ವರೆಗೆ ನಿಮ್ಮ ಖಾತೆಗೆ ಜಮಾ ಆಗದೆ ಇದ್ದರೆ ನೀವು ಈಕೂಡಲೇ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕಿದೆ. ನಿಮ್ಮ ಹತ್ತಿರದ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಆಧಾರ್ ಕಾರ್ಡ್, ಪಡಿತರ ಚೀಟಿ ಮತ್ತು ಬ್ಯಾಂಕ್ ಪಾಸ್ ಪುಸ್ತಕದ ದಾಖಲೆ ನೀಡಿ ಅರ್ಜಿಯನ್ನು ಪರಿಶೀಲಿಸಿಕೊಳ್ಳಬೇಕು.

Gruha Lakshmi Scheme Latest Update
Image Credit: Livemint

•ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ ಯೋಜನೆ ಖಾತೆಗೆ ಜಮೆಯಾದ ಹಣ ಇನ್ನೂ ಸಿಗದಿರುವ ಗೃಹಿಣಿಯರು ನೇರವಾಗಿ ಸಿಡಿಪಿಒ ಕಚೇರಿಗೆ ಭೇಟಿ ನೀಡಬಹುದು. ಒಮ್ಮೆ ನೀವು ಸಲ್ಲಿಸಿದ ದಾಖಲೆಗಳು ಅಥವಾ ಅರ್ಜಿಯಲ್ಲಿ ಯಾವುದೇ ಲೋಪ ಕಂಡುಬಂದರೆ, ಅದನ್ನು ಸರಿಪಡಿಸಲು ಅವಕಾಶವಿದೆ.

Join Nadunudi News WhatsApp Group

•ನೀವು ಸಲ್ಲಿಸಿದ ದಾಖಲೆಗಳಲ್ಲಿ ಯಾವುದೇ ಲೋಪಗಳಿದ್ದರೆ ನೀವು ಗೃಹಲಕ್ಷ್ಮಿ ಯೋಜನೆಗೆ ಹೊಸದಾಗಿ ಅರ್ಜಿ ಸಲ್ಲಿಸಬಹುದು. ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿದ ನಂತರ, ಆಧಾರ್ ಕಾರ್ಡ್ ಮತ್ತು ಪಡಿತರ ಚೀಟಿ ಲಿಂಕ್ ಆಗಿಲ್ಲ, ಅಥವಾ ಆಧಾರ್ ಸೀಡಿಂಗ್ ಮಾಡದಿದ್ದರೆ ತಕ್ಷಣ ಇದನ್ನು ಮಾಡಿ.

•ನಿಮ್ಮ ಬ್ಯಾಂಕ್ ಖಾತೆಯಲ್ಲಿ ಯಾವುದೇ ದೋಷಗಳಿದ್ದರೆ, ನೀವು ತಕ್ಷಣ ಬ್ಯಾಂಕ್‌ ನಲ್ಲಿ ಹೊಸ ಖಾತೆಯನ್ನು ತೆರೆಯಬಹುದು ಮತ್ತು ಆ ಬ್ಯಾಂಕ್ ಖಾತೆಯನ್ನು ಗೃಹಲಕ್ಷ್ಮಿಯೋಜನೆಗೆ ಲಿಂಕ್ ಮಾಡಬಹುದು ಇದರಿಂದ ನೀವು ಎಲ್ಲಾ ಬಾಕಿ ಮೊತ್ತವನ್ನು ಪಡೆಯಬಹುದು.

Gruha Lakshmi Yojana Latest
Image Credit: Oneindia

Join Nadunudi News WhatsApp Group