Guarantee Card: ಕಾಂಗ್ರೆಸ್ ಸೋತ ಬೆನ್ನಲ್ಲೇ ದೇಶದ ಮಹಿಳೆಯರ ದಿಟ್ಟ ನಿರ್ಧಾರ, ಬರುತ್ತಾ ಖಾತೆಗೆ 1 ಲಕ್ಷ ರೂ.

ಕಾಂಗ್ರೆಸ್ ಸೋತ ಬೆನ್ನಲ್ಲೇ ಗ್ಯಾರಂಟಿ ಘೋಷಣೆ ಹೊಸ ರೀತಿಯ ಸಮಸ್ಯೆ ಸೃಷ್ಟಿದೆ

Congress Guarantee Card: ಈ ಹಿಂದೆಯಷ್ಟೇ ಇಂಡಿಯಾ ಬ್ಲಾಕ್ ಅಧಿಕಾರಕ್ಕೆ ಬಂದರೆ ತಮ್ಮ ಖಾತೆಗೆ ಹಣ ಬರುತ್ತದೆ ಎಂದು ಮಹಿಳೆಯರು ಸರತಿ ಸಾಲಿನಲ್ಲಿ ಅಂಚೆ ಕಚೇರಿಯ ಮುಂದೆ ನಿಂತು ಹೊಸ ಖಾತೆಯನ್ನು ತೆರೆಸಿದ್ದರು. ಈ ಸುದ್ದಿ ಎಲ್ಲೆಡೆ ವೈರಲ್ ಆಗಿತ್ತು. ಸದ್ಯ ಲೋಕಸಭಾ ಚುನಾವಣಾ ಪಲಿತಾಂಶದ ಬಳಿಕ ಕಾಂಗ್ರೆಸ್ ಸರ್ಕಾರ ಸಂಕಷ್ಟಕ್ಕೆ ಸಿಲುಕುವಂತಹ ಪರಿಸ್ಥಿತಿ ಎದುರಾಗಿದೆ.

ಹೌದು, ಚುನವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆನ್ನು ಈಡೇರಿಸುವಂತೆ ಉತ್ತರ ಪ್ರದೇಶದ ಮಹಿಳೆಯರೂ ಒತ್ತಾಯಿಸುತ್ತಿದ್ದರೆ. ಉಚಿತ ಗ್ಯಾರಂಟಿ ಕಾರ್ಡ್ ಪಡೆಯಲು ಮಹಿಳೆಯರು ಕಾಂಗ್ರೆಸ್ ಕಚೇರಿಯ ಮುಂದೆ ಸರತಿ ಸಾಲಿನಲ್ಲಿ ನಿಂತಿದ್ದಾರೆ.

Congress Guarantee Card
Image Credit: India

ಕಾಂಗ್ರೆಸ್ ಸೋತ ಬೆನ್ನಲ್ಲೇ ದೇಶದ ಮಹಿಳೆಯರ ದಿಟ್ಟ ನಿರ್ಧಾರ
ಈ ಬಾರಿ ಚುನಾವಣಾ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಭರವಸೆಗಳನ್ನು ಮುಂದಿಟ್ಟುಕೊಂಡು ಜನರ ಮತ ಕೇಳಿತ್ತು. ‘ಘರ್ ಘರ್ ಗ್ಯಾರಂಟಿ’ ಕಾರ್ಯಕ್ರಮ ಆರಂಭಿಸಿ ಗ್ಯಾರಂಟಿ ಕಾರ್ಡ್ ವಿತರಿಸುವುದಾಗಿ ಹೇಳಿದೆ. ಈ ಭರವಸೆಗಳ ಪೈಕಿ ‘ಮಹಾಲಕ್ಷ್ಮಿ ಯೋಜನೆ’ ಯನ್ನು ಅನುಷ್ಠಾನಗೊಳಿಸುವುದಾಗಿ ಹೇಳಿತ್ತು. ಈ ಯೋಜನೆಯಡಿಯಲ್ಲಿ ಬಡತನ ರೇಖೆಗಿಂತ ಕೆಳಗಿರುವ ಅಂದರೆ BPL ಕಾರ್ಡ್ ಹೊಂದಿರುವ ವರ್ಗಕ್ಕೆ ಸೇರಿದ ಕುಟುಂಬದ ಮಹಿಳೆಯರ ಖಾತೆಗೆ ತಿಂಗಳಿಗೆ 8,500 ರೂ.ಗಳನ್ನು ನೇರವಾಗಿ ಜಮಾ ಮಾಡಲಾಗುವುದು ಎಂದು ಪಕ್ಷವು ಭರವಸೆ ನೀಡಿತ್ತು. ಆ ಮೂಲಕ 1 ಲಕ್ಷ ರೂ. ಗಳನ್ನೂ ಮಹಿಳೆಯರ ಖಾತೆಗೆ ಜಮಾ ಮಾಡುವುದಾಗಿ ಕಾಂಗ್ರೆಸ್ ಸರ್ಕಾರ ಘೋಷಿಸಿತ್ತು. ಸದ್ಯ ಉತ್ತರ ಪ್ರದೇಶದ ಮಹಿಳೆಯರು ಈ ಯೋಜನೆಯ ಲಾಭ ಪಡೆಯಲು ಮುಂದಾಗಿದ್ದಾರೆ.

ಬರುತ್ತಾ ಖಾತೆಗೆ 1 ಲಕ್ಷ ರೂ….!
ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ಬಿಸಿಲ ಬೇಗೆಯನ್ನೂ ಲೆಕ್ಕಿಸದೆ ಕಾಂಗ್ರೆಸ್ ಕಚೇರಿ ಎದುರು ಮಹಿಳೆಯರು ಗ್ಯಾರಂಟಿ ಕಾರ್ಡ್ ಗಾಗಿ ಸರತಿ ಸಾಲಿನಲ್ಲಿ ನಿಂತಿದ್ದರು. ಈ ಪೈಕಿ ಕೆಲ ಮಹಿಳೆಯರು ‘ಗ್ಯಾರಂಟಿ ಕಾರ್ಡ್’ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಕೆಲವರು ಈ ಹಿಂದೆಯೇ ಕಾರ್ಡ್‌ ಗಾಗಿ ಅರ್ಜಿ ಸಲ್ಲಿಸಿದ್ದರು ಹಣ ಪಡೆಯಲು ವಿವರ ನೀಡಿದ ಬಳಿಕ ಕಾಂಗ್ರೆಸ್ ಕಚೇರಿಯಿಂದ ರಸೀದಿ ಪಡೆದಿರುವುದಾಗಿ ತಿಳಿಸಿದರೆ. ಸದ್ಯ ಕಾಂಗ್ರೆಸ್ ಸೋತ ಬೆನ್ನಲ್ಲೇ ಗ್ಯಾರಂಟಿ ಘೋಷಣೆ ಹೊಸ ರೀತಿಯ ಸಮಸ್ಯೆಯನ್ನು ಸೃಷ್ಟಿದೆ ಎನ್ನಬಹುದು. ಇನ್ನು ಮಹಿಳೆಯರ ಬೇಡಿಕೆಯನ್ನು ಕಾಂಗ್ರೆಸ್ ಸರ್ಕಾರ ಈಡೇರಿಸುತ್ತ ಎನ್ನುವ ಬಗ್ಗೆ ಕಾದು ನೋಡಬೇಕಿದೆ.

Congress Guarantee Card Latest News
Image Credit: Moneycontrol

Join Nadunudi News WhatsApp Group

Join Nadunudi News WhatsApp Group