Guarantee Scheme: ಮಹಿಳೆಯರಿಗೆ ಮತ್ತೆ ಗುಡ್ ನ್ಯೂಸ್ ನೀಡಿದ ಸಿದ್ದರಾಮಯ್ಯ, 1 ಲಕ್ಷ ಮಹಿಳೆಯರ ಖಾತೆಗೆ ಜಮಾ.

ಮಹಿಳೆಯರಿಗೆ ಮತ್ತೆ ಗುಡ್ ನ್ಯೂಸ್ ನೀಡಿದ ಸಿದ್ದರಾಮಯ್ಯ

Congress Guarantee Latest News: ಪ್ರಸ್ತುತ ದೇಶದಲ್ಲಿ ಲೋಕಸಭಾ ಚುನಾವಣೆಯ ಕಾವು ರಂಗೇರುತ್ತಿದೆ. ಕರ್ನಾಟಕದಲ್ಲಿ ಇದೀಗ ಎರಡನೇ ಹಂತದ ಚುನಾವಣೆ ಆರಂಭವಾಗಿದೆ. ಸಾಕಷ್ಟು ಜನರು ಈಗಾಗಲೇ ತಮ್ಮ ಮತವನ್ನು ಚಲಾಯಿಸಿದ್ದು, ಮತ ಹಾಕದೆ ಇರುವ ಜನರು ಮತ ಹಾಕಲು ಕಾಯುತ್ತಿದ್ದಾರೆ. ಇನ್ನು ಈ ಬಾರಿ ಕೇಂದ್ರದಲ್ಲಿ ಸ್ಥಾನ ಪಡೆಯಲು BJP ಹಾಗೂ Congress ಹೊಸ ಹೊಸ ರೀತಿಯಲ್ಲಿ ಪ್ರಯತ್ನಿಸುತ್ತಿದೆ.

ಎರಡು ಪಕ್ಷಗಳ ಚುನಾವಣೆಯ ಪ್ರಚಾರ ಜೋರಾಗಿಯೇ ಇದೆ. ಈ ಬಾರಿ ಕಾಂಗ್ರೆಸ್ ಗೆ ಬಾರಿ ಪೈಪೋಟಿ ಇದೆ. ಕಾರಣ ಜೆಡಿಎಸ್ ಹಾಗು BJP ಮೈತ್ರಿಯಾಗಿರುವುದು ಕಾಂಗ್ರೆಸ್ ಗೆ ಇನ್ನೊಂದು ರೀತಿಯ ಸಮಸ್ಯೆಯಾಗಿದೆ ಎನ್ನಬಹುದು. ಇನ್ನು ಲೋಕಸಭಾ ಚುನಾವಣೆಯಲ್ಲಿ ಮತದಾರರ ಓಲೈಕೆಗಾಗಿ ಎರಡು ಪಕ್ಷಗಳು ಉಚಿತ ಗ್ಯಾರಂಟಿ ಘೋಷಣೆ ಮಾಡಿರುವ ಬಗೆ ಎಲ್ಲರಿಗು ಮಾಹಿತಿ ತಿಳಿದೇ ಇದೆ.

Congress Guarantee Latest News
Image Credit: Business-standard

ಮಹಿಳೆಯರಿಗೆ ಮತ್ತೆ ಗುಡ್ ನ್ಯೂಸ್ ನೀಡಿದ ಸಿದ್ದರಾಮಯ್ಯ
ಇನ್ನು ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ತನ್ನ ಅಧಿಕಾರವನ್ನು ಕಂಡುಕೊಳ್ಳವು 5 ಉಚಿತ ಗ್ಯಾರಂಟಿಯನ್ನು ಘೋಷಿಸಿತ್ತು. ಇದೆ ಅಸ್ತ್ರವನ್ನು ಇದೀಗ ಲೋಕಸಭಾ ಚುನಾವಣೆಯಲ್ಲಿಯೂ ಬಳಸಿದೆ. ಇನ್ನು ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನ ಐದು ಗ್ಯಾರಂಟಿ ಯೋಜನೆಗಳು ಹೆಚ್ಚಾಗಿ ಮಹಿಳೆಯರಿಗೆ ಅನುಕೂಲವನ್ನು ಮಾಡಿಕೊಟ್ಟಿತ್ತು. ಉಚಿತ ಗ್ಯಾರಂಟಿಗಳಿಗಾಗಿ ಮಹಿಳೆಯಯರು ಕಾಂಗ್ರೆಸ್ ಸರ್ಕಾರಕ್ಕೆ ಬೆಂಬಲ ನೀಡಿದ್ದರು. ಅದೇ ರೀತಿ ಈ ಲೋಕಸಭಾ ಚುನಾವಣೆಯಲ್ಲಿ ಕೂಡ ಕಾಂಗ್ರೆಸ್ ಸರ್ಕಾರ ಮಹಿಳೆಯರಿಗಾಗಿ ವಿಶೇಷ ಯೋಜನೆಯನ್ನು ಘೋಷಿಸಿದೆ.

Congress Guarantee Card
Image Credit: Indian Express

1 ಲಕ್ಷ ಮಹಿಳೆಯರ ಖಾತೆಗೆ ಜಮಾ
ಈ ಬಾರಿ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಕೂಡ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿ ಘೋಷಣೆಯನ್ನು ಘೋಷಿಸಿದೆ. ವಿಧಾನಸಭಾ ಚುನಾವಣೆಯಲ್ಲಿ ವಿಶೇಷವಾಗಿ ಶಕ್ತಿ ಯೋಜನೆ, ಗೃಹ ಲಕ್ಷ್ಮಿ ಯೋಜನೆಯನ್ನು ಮಹಿಳೆಯರಿಗಾಗಿ ಪರಿಚಯಿಸಿದ್ದ ರಾಜ್ಯ ಸರ್ಕಾರ ಲೋಕಸಭಾ ಚುನಾವಣೆಯಲ್ಲಿ ಕೂಡ ಮಹಿಳೆಯರಿಗೆ ಆರ್ಥಿಕ ಸಹಾಯ ಮಾಡುವಂತಹ ವಿಶೇಷ ಸೌಲಭ್ಯವನ್ನು ಘೋಷಿಸಿದೆ.

ಹೌದು, ಕಾಂಗ್ರೆಸ್ ಸರ್ಕಾರ ದೇಶದ ಮಹಿಳೆಯರಿಗೆ ಈ ಬಾರಿ ಕಾಂಗ್ರೆಸ್ ಸರ್ಕಾರ ಗೆದ್ದರೆ ಮಹಿಳೆಯರಿಗೆ ವರ್ಷಕ್ಕೆ 1 ಲಕ್ಷ ಹಣ ನೀಡುವುದಾಗಿ ಘೋಷಿಸಿದೆ. ಕಾಂಗ್ರೆಸ್ ಅಧಿಕಾರದಲ್ಲಿ ಇರುವವರೆಗೂ ಮಹಿಳೆಯರ ಖಾತೆಗೆ ವಾರ್ಷಿಕವಾಗಿ 1 ಲಕ್ಷ ಜಮಾ ಆಗುವುದಂತೂ ಖಂಡಿತ ಎಂದು ಕಾಂಗ್ರೆಸ್ ಸರ್ಕಾರ ಘೋಷಿಸಿದೆ. ಈ ಘೋಷಣೆಯ ಜೊತೆಗೆ ಇನ್ನು 4 ಉಚಿತ ಗ್ಯಾರಂಟಿಗಳ ಘೋಷಣೆ ಹೊರಬಿದ್ದಿದೆ. ಇನ್ನು ಜೂನ್ 4 ರಂದು ಚುನವಣಾ ಫಲಿತಾಂಶ ಬರಲಿದ್ದು, ಈ ಬಾರಿ ಕೇಂದ್ರದಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆ ಎನ್ನುವುದರ ಬಗ್ಗೆ ಉತ್ತರ ಸಿಗಲಿದೆ.

Join Nadunudi News WhatsApp Group

Congress Guarantee Scheme Update
Image Credit: Taazatv

Join Nadunudi News WhatsApp Group