Congress Guarantee: ಯಾರಿಗೂ ಸಿಗಲ್ಲ 8500 ರೂಪಾಯಿ, ಪೋಸ್ಟ್ ಆಫೀಸ್ ಮುಂದೆ ಸಾಲುಗಟ್ಟಿ ನಿಂತ ಮಹಿಳೆಯರಿಗೆ ಹೊಸ ರೂಲ್ಸ್

ಈ ಯೋಜನೆಯ ಲಾಭವನ್ನು ಪಡೆಯುಲು ಕಾಯುತ್ತಿದ್ದ ಮಹಿಳೆಯರಿಗೆ ರಾಜ್ಯ ಸರ್ಕಾರದಿಂದ ಬಿಗ್ ಅಪ್ಡೇಟ್

Congress Guarantee Latest Update: ದೇಶದಲ್ಲಿ ಸಾರ್ವತ್ರಿಕ ಚುನಾವಣೆಯ ಕೊನೆಯ ಹಂತದ ಅಂದರೆ ಲೋಕಸಭೆಯ ಮತದಾನ ಇನ್ನಷ್ಟೇ ನಡೆಯಬೇಕಿದೆ. ಇಂತಹ ಸಮಯದಲ್ಲಿ ವಿವಿಧ ಉಚಿತ ಗ್ಯಾರಂಟಿ ಭರವಸೆಗಳನ್ನು ರಾಜಕೀಯ ಪಕ್ಷಗಳು ನೀಡಿವೆ. ಸದ್ಯ ಕಾಂಗ್ರೆಸ್ ಸರ್ಕಾರ ಈ ಯೋಜನೆಯು ಜನರಿಗೆ ಹೆಚ್ಚಿನ ಕುತೂಹಲವನ್ನು ಮೂಡಿಸಿದೆ.

ಚುನಾವಣಾ ಫಲಿತಾಂಶ ಪ್ರಕಟವಾಗುವ ಮುನ್ನವೇ ಯೋಜನೆಯ ಲಾಭ ಪಡೆಯಲು ಮಹಿಳೆಯರು ಮುಂದಾಗಿದ್ದಾರೆ. ಸದ್ಯ ಈ ಯೋಜನೆಯ ಲಾಭವನ್ನು ಪಡೆಯುಲು ಕಾಯುತ್ತಿದ್ದ ಮಹಿಳೆಯರಿಗೆ ರಾಜ್ಯ ಸರ್ಕಾರದಿಂದ ಬಿಗ್ ಅಪ್ಡೇಟ್ ಹೊರಬಿದ್ದಿದೆ.

Congress Guarantee Latest Update
Image Credit: News 18

ಪೋಸ್ಟ್ ಆಫೀಸ್ ಮುಂದೆ ಸಾಲುಗಟ್ಟಿ ನಿಂತ ಮಹಿಳೆಯರಿಗೆ ಬಿಗ್ ಅಪ್ಡೇಟ್
ಹೊಸ ಯೋಜನೆಯ ಲಾಭ ಪಡೆಯಲು ಖಾತೆಗಳನ್ನು ತೆರೆಯಲು ಬೆಂಗಳೂರಿನ ಜನರಲ್ ಪೋಸ್ಟ್ ಆಫೀಸ್‌ ನಲ್ಲಿ ಭಾರೀ ಸಂಖ್ಯೆಯಲ್ಲಿ ಮಹಿಳೆಯರ ದಂಡೇ ಕಂಡುಬಂದಿದೆ. ವಾಸ್ತವವಾಗಿ, ದೇಶದಲ್ಲಿ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ, ರಾಜಕೀಯ ಪಕ್ಷಗಳು ಅನೇಕ ದೊಡ್ಡ ಜನಪರ ಭರವಸೆಗಳನ್ನು ನೀಡಿವೆ. ಜನರಲ್ಲಿ ಹಲವು ರೀತಿಯ ವದಂತಿಗಳೂ ಹಬ್ಬಿವೆ. ಇದರಿಂದ ಅಂಚೆ ಕಚೇರಿಯಲ್ಲಿ ಜನಸಂದಣಿ ಜಮಾಯಿಸಿದ್ದರಿಂದ ಹೊಸ ಖಾತೆ ತೆರೆಯಲು ಪ್ರತಿನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಬರುತ್ತಿದ್ದು, ಜನಸಂದಣಿಯನ್ನು ನಿಯಂತ್ರಿಸುವುದು ಕಷ್ಟಕರವಾಗಿತ್ತು. ಇಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಕೆಲ ರಾಜಕಾರಣಿಗಳು ಮಹಿಳೆಯರ ಐಪಿಬಿ ಖಾತೆಗೆ ಪ್ರತಿ ತಿಂಗಳು 2,000 ರೂಪಾಯಿ ಜಮಾ ಮಾಡುವುದಾಗಿ ಭರವಸೆ ನೀಡಿದ್ದರು ಎಂದು ಸುದ್ದಿಯಲ್ಲಿ ಹೇಳಲಾಗುತ್ತಿದೆ. ಇದರಿಂದಾಗಿ ಅಂಚೆ ಇಲಾಖೆಯಿಂದ ಮಹಿಳೆಯರ ಐಪಿಬಿ ಖಾತೆಗೆ 8,000 ರೂಪಾಯಿ ರವಾನೆಯಾಗುತ್ತಿದೆ ಎಂಬ ವದಂತಿ ಹಬ್ಬಿತ್ತು. ಹೀಗಿರುವಾಗ ಈ ವದಂತಿ ವ್ಯಾಪಕವಾಗಿ ಹರಡಿದ್ದು, ಇಲ್ಲಿ ಖಾತೆ ತೆರೆಯಲು ಅಪಾರ ಜನರು ಅಂಚೆ ಕಚೇರಿಯಲ್ಲಿ ಜಮಾಯಿಸಿತ್ತು.

Join Nadunudi News WhatsApp Group

Congress Guarantee Scheme 2024
Image Credit: The Hindu Businessline

ಯಾರಿಗೂ ಸಿಗಲ್ಲ 8500 ರೂಪಾಯಿ
ತಮ್ಮ ಖಾತೆಗೆ ಎಂಟು ಸಾವಿರ ರೂಪಾಯಿ ಜಮಾ ಆಗಲಿದೆ ಎಂಬ ಮಾಹಿತಿ ವಾಟ್ಸಾಪ್ ಮತ್ತು ಸ್ಥಳೀಯ ಸುದ್ದಿಗಳಿಂದ ಬಂದಿದೆ ಎಂದು ಜನರು ಹೇಳುತ್ತಾರೆ ಎಂದು ಅಂಚೆ ಇಲಾಖೆ ಸುದ್ದಿ ಮೂಲಕ ತಿಳಿಸಿದೆ. ಹೀಗಾಗಿ ಈ ವಿಚಾರದಲ್ಲಿ ವದಂತಿಯನ್ನು ಅಲ್ಲಗಳೆದ ಅಂಚೆ ಇಲಾಖೆ ಹಲವು ಮಾಹಿತಿಗಳನ್ನು ನೀಡಿದ್ದು, ನೀವೂ ಇಂತಹ ವದಂತಿಗಳಿಂದ ದೂರವಿರಿ ಎಂದು ಜನರಿಗೆ ಸೂಚಿಸಿದೆ. ಖಾತೆಗೆ ಎಂಟು ಸಾವಿರ ರೂಪಾಯಿ ಜಮಾ ಆಗುತ್ತದೆ ಎನ್ನುವ ಅಂತಹ ಯಾವುದೇ ಯೋಜನೆಯನ್ನು ಅಂಚೆ ಇಲಾಖೆ ನಡೆಸುತ್ತಿಲ್ಲ ಎಂದು ಅಂಚೆ ಇಲಾಖೆ ಸ್ಪಷ್ಟಪಡಿಸಿದೆ.

Congress Guarantee Scheme
Image Credit: Deccanherald

Join Nadunudi News WhatsApp Group