Gurantee Scam: ಗೃಹ ಲಕ್ಷ್ಮಿ 2000 ಕ್ಕಾಗಿ ಈ ತಪ್ಪು ಮಾಡಿದರೆ ನಿಮ್ಮ ಬ್ಯಾಂಕ್ ಖಾತೆ ಖಾಲಿಯಾಗಲಿದೆ, ಸರ್ಕಾರದ ಎಚ್ಚರಿಕೆ.

ಗೃಹ ಲಕ್ಷ್ಮಿ ಯೋಜನೆಯ ಹಲವು ನಕಲಿ ಆಪ್ ಮತ್ತು ವೆಬ್ಸೈಟ್ ಮೂಲಕ ಸೈಬರ್ ಕಳ್ಳರು ಜನರ ಖಾತೆಯಲ್ಲಿ ಹಣ ಕದಿಯುತ್ತಿದ್ದಾರೆ.

Congress Guarantee Fraud Application: ಕಾಂಗ್ರೆಸ್ ನ ಗೃಹಲಕ್ಷ್ಮಿ (Gruha Lakshmi) ಯೋಜನೆಗೆ ಅರ್ಜಿ ಸಲ್ಲಿಸಲು ಆನ್ ಲೈನ್ ನಲ್ಲಿ ಇನ್ನು ಅರ್ಜಿ ಆರಂಭವಾಗಿಲ್ಲ. ಸದ್ಯದಲ್ಲಿ ಅರ್ಜಿ ಆರಂಭಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.

ಆದರೆ ಇತ್ತೀಚಿಗೆ ಗೃಹಲಕ್ಷ್ಮಿ ಅಪ್ಲಿಕೇಶನ್ ಗೆ ಸಂಬಂಧಿಸಿದಂತೆ ಆನ್ ಲೈನ್ ನಲ್ಲಿ ಫ್ರಾಡ್ ಅಪ್ ಗಳು ಸೃಷ್ಟಿಯಾಗಿವೆ. ಆದ್ದರಿಂದ ಈ ಅಪ್ ನಲ್ಲಿ ನಿಮ್ಮ ದಾಖಲೆಗಳನ್ನು ನೀಡುವ ಮುನ್ನ ನೀವು ಎಚ್ಚರದಿಂದ ಇರಬೇಕು.

If you apply through a fake website or app, your bank account will be hacked
Image Credit: sarkariyojanahindimein

ಗ್ಯಾರೆಂಟಿ ಯೋಜನೆಗೆ ಅರ್ಜಿ ಸಲ್ಲಿಸುವ ಮೊದಲು ಈ ವಿಚಾರ ತಿಳಿದುಕೊಳ್ಳಿ
ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಯೋಜನೆ, ಗೃಹಜ್ಯೋತಿ ಯೋಜನೆ ಸೇರಿದಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಹಲವು ಯೋಜನೆಗಳ ಹೆಸರಿನಲ್ಲಿ ನೂರಾರು ನಕಲಿ ಅಪ್ ಗಳು ಅಪ್ ಸ್ಟಾರ್ ನಲ್ಲಿ ಇರುತ್ತದೆ. ಎಲ್ಲಾದರೂ ನಿಮ್ಮ ಮೊಬೈಲ್ ನಲ್ಲಿ ಇಂತಹ ಅಪ್ ಗಳನ್ನೂ ಡೌನ್ ಲೋಡ್ ಮಾಡಿಕೊಳ್ಳಿ ಎಂಬ ಸಂದೇಶಗಳು ಬಂದಾಗ ದಯವಿಟ್ಟು ಆ ಅಪ್ ನಿಜವೇ ಅಥವಾ ನಕಲಿನೆ ಎನ್ನುವುದನ್ನು ತಿಳಿದುಕೊಳ್ಳಿ.

ಗೃಹಲಕ್ಷ್ಮಿ ಯೋಜನೆಗೆ ಸಂಬಂಧಪಟ್ಟಂತೆ ಕರ್ನಾಟಕ ಸರ್ಕಾರ ಯಾವುದೇ ಆಪ್ ಬಿಡುಗಡೆ ಮಾಡಿಲ್ಲ. ಸೇವಾ ಸಿಂಧು ಪೋರ್ಟಲ್ ಹೊರತುಪಡಿಸಿ ಯಾವುದೇ ಪೋರ್ಟಲ್ ಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.

There are fake apps of Griha Lakshmi Yojana and if you apply through them, your account will be hackedOpen in Google Translate
•
Feedback
Image Credit: indiascheme

ಗ್ಯಾರೆಂಟಿ ಯೋಜನೆಗೆ ಅರ್ಜಿ ಸಲ್ಲಿಸುವವರಿಗೆ ಎಚ್ಚರದ ಮಾಹಿತಿ
ನೀವು ನಕಲಿ ಅಪ್ ಗಳಲ್ಲಿ ಅರ್ಜಿ ಸಲ್ಲಿಸಿ ಮೋಸ ಹೋಗಬೇಡಿ. ಇಂತಹ ವಿವಿಧ ಯೋಜನೆಗಳ ಹೆಸರಿನಲ್ಲಿರುವ ಅಪ್ ಗಳು ಜನರಿಂದ ಆಧಾರ್, ಬ್ಯಾಂಕ್ ಖಾತೆ ಸಂಖ್ಯೆ, ವಯಕ್ತಿಕ ಮಾಹಿತಿ, ಫೋನ್ ನಂಬರ್ ಇತ್ಯಾದಿ ಸೂಕ್ಷ್ಮ ಮಾಹಿತಿಗಳನ್ನು ಸಂಗ್ರಹಿಸುವ ದುರುದ್ದೇಶ ಹೊಂದಿರುವ ಕಾರಣ ಬಳಕೆದಾರರು ಎಚ್ಚರಿಕೆಯಿಂದ ಇರಬೇಕು.

Join Nadunudi News WhatsApp Group

ಗೃಹಲಕ್ಷ್ಮಿ ಅಥವಾ ಗೃಹಜ್ಯೋತಿ ಹೆಸರಿನಲ್ಲಿ ನಕಲಿ ಆಪ್‌ ಗಳು ಮಾತ್ರವಲ್ಲದೆ ನಕಲಿ ವೆಬ್‌ಸೈಟ್‌ಗಳೂ ಇವೆ. ಈ ಹೆಸರಿನ ಡೊಮೈನ್‌ ಖರೀದಿಸಿ ಇಂತಹ ಯೋಜನೆಗಳ ಮಾಹಿತಿ ನೀಡುವ ಉದ್ದೇಶದಿಂದ ಕೆಲವು ವೆಬ್‌ ಗಳನ್ನು ರಚಿಸಲಾಗಿವೆ.

Cyber ​​thieves are stealing money from people's accounts through many fake apps and websites of Griha Lakshmi Yojana
Image Credit: newsdrum

ಕೆಲವೊಂದು ಇಂತಹ ವೆಬ್‌ ಸೈಟ್‌ಗಳು ದುರುದ್ದೇಶದಿಂದ ರಚನೆಯಾಗಿರಬಹುದು. ಹೀಗಾಗಿ ಸರ್ಕಾರದ ಅಧಿಕೃತ ವೆಬ್‌ ಸೈಟ್‌ ಎಂದು ಖಾತ್ರಿಪಡಿಸಿಕೊಂಡು ಅರ್ಜಿ ಸಲ್ಲಿಸುವುದು ಉತ್ತಮ. ನೀವು ನಕಲಿ ಅಪ್ ಗಳಲ್ಲಿ ನಿಮ್ಮ ಆಧಾರ್ ನಂಬರ್, ಬ್ಯಾಂಕ್ ನಂಬರ್ ಹಾಕಿದರೆ ವಂಚಕರಿಂದ ನಿಮ್ಮ ಬ್ಯಾಂಕ್ ಅಕೌಂಟ್ ಖಾಲಿ ಆಗಬಹುದು.

Join Nadunudi News WhatsApp Group