Congress Guarantee: ಸಿದ್ದರಾಮಯ್ಯ ಇನ್ನೊಂದು ಘೋಷಣೆ, ಪ್ರತಿಯೊಬ್ಬರಿಗೂ ಸಿಗಲಿದೆ 25 ಲಕ್ಷ ರೂಪಾಯಿ.

ಸರ್ಕಾರದ ಈ ಯೋಜನೆಯಲ್ಲಿ ಮಹಿಳೆಯರಿಗೆ ಸಿಗಲಿದೆ 25 ಲಕ್ಷ ರೂ

Congress Guarantee Update: ಲೋಕಸಭಾ ಚುನಾವಣೆಯ ಕಾರಣ ದೇಶದಲ್ಲಿ ಹಲವಾರು ಘೋಷಣೆಗಳು ಮೊಳಗುತ್ತಿವೆ. ರಾಜಕೀಯ ಪಕ್ಷಗಳು ಮುಂದಿನ 5 ವರ್ಷ ಕೇಂದ್ರದಲ್ಲಿ ಅಧಿಕಾರವನ್ನು ಪಡೆದುಕೊಳ್ಳಲು ಹೊಸ ರೀತಿಯಲ್ಲಿ ಪ್ರಯತ್ನಿಸುತ್ತಿದೆ.

ವಿಧಾನಸಭಾ ಚುನಾವಣೆಯಲ್ಲಿ ಬಳಸಲಾದ ಗ್ಯಾರಂಟಿ ಅಸ್ತ್ರವನ್ನು ಇದೀಗ ಲೋಕಸಭಾ ಚುನಾವಣೆಯಲ್ಲಿ ಕೂಡ ಬಳಸಲಾಗಿದೆ. ಈ ಕಾರಣಕ್ಕೆ ಈಗಾಗಲೇ ದೇಶದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಸರ್ಕಾರ ಹಲವಾರು ಘೋಷಣೆಯನ್ನ ಹೊರಡಿಸಿದೆ. ಈಗಾಗಲೇ ಸರ್ಕಾರ ಗ್ಯಾರಂಟಿಗಳ ಬಗ್ಗೆ ಘೋಷಣೆ ಕೂಡ ಹೊರಡಿಸಿದೆ. ಸದ್ಯ ಕಾಂಗ್ರೆಸ್ ಸರ್ಕಾರ ಜನರಿಗಾಗಿ ಮಹತ್ವವಾದ ಘೋಷಣೆಯನ್ನು ಹೊರಡಿಸಿದೆ.

Congress Guarantee Update
Image Credit: Indiatoday

ಸಿದ್ದರಾಮಯ್ಯ ಇನ್ನೊಂದು ಘೋಷಣೆ
•ಪ್ರತಿಯೊಬ್ಬರಿಗೂ ಸಿಗಲಿದೆ 25 ಲಕ್ಷ ರೂಪಾಯಿ
ಕೇಂದ್ರ ಮತ್ತು ರಾಜ್ಯ ಸರ್ಕಾರ ಈಗಾಗಲೇ ಆರೋಗ್ಯ ಯೋಜನೆಯನ್ನು ಘೋಷಿಸಿದೆ. ಸದ್ಯ ಲೋಕಸಭಾ ಚುನಾವಣೆಯ ಹಿನ್ನಲೆ ಕಾಂಗ್ರೆಸ್ ಸರ್ಕಾರ ಬಹುದೊಡ್ಡ ಆರೋಗ್ಯ ವಿಮಾ ಯೋಜನೆಯನ್ನು ಘೋಷಿಸಿದೆ. ಕಾಂಗ್ರೆಸ್ ಸರ್ಕಾರದ ಐದು ಉಚಿತ ಗ್ಯಾರಂಟಿ ಘೋಷಣೆಗಳಲ್ಲಿ ಈ ಘೋಷಣೆ ಕೂಡ ಒಂದಾಗಿದೆ. ಪ್ರತಿ ಭಾರತೀಯರಿಗೆ 25 ಲಕ್ಷಗಳ ಆರೋಗ್ಯ ವಿಮೆ ನೀಡುವುದಾಗಿ ಕಾಂಗ್ರೆಸ್ ಸರ್ಕಾರ ಘೋಷಿಸಿದೆ.

•ಮಹಿಳೆಯರಿಗೆ ವಾರ್ಷಿಕವಾಗಿ ಸಿಗಲಿದೆ 1 ಲಕ್ಷ
ಹೌದು, ಕಾಂಗ್ರೆಸ್ ಸರ್ಕಾರ ದೇಶದ ಮಹಿಳೆಯರಿಗೆ ಈ ಬಾರಿ ಕಾಂಗ್ರೆಸ್ ಸರ್ಕಾರ ಗೆದ್ದರೆ ಮಹಿಳೆಯರಿಗೆ ವರ್ಷಕ್ಕೆ 1 ಲಕ್ಷ ಹಣ ನೀಡುವುದಾಗಿ ಘೋಷಿಸಿದೆ. ಕಾಂಗ್ರೆಸ್ ಅಧಿಕಾರದಲ್ಲಿ ಇರುವವರೆಗೂ ಮಹಿಳೆಯರ ಖಾತೆಗೆ ವಾರ್ಷಿಕವಾಗಿ 1 ಲಕ್ಷ ಜಮಾ ಆಗುವುದಂತೂ ಖಂಡಿತ ಎಂದು ಕಾಂಗ್ರೆಸ್ ಸರ್ಕಾರ ಘೋಷಿಸಿದೆ.

Siddaramaiah New Guarantee
Image Credit: Business-standard

•ನಿರುದ್ಯೋಗಿಗಳಿಗೆ 1 ಲಕ್ಷ
ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಯುವ ನಿಧಿ ಯೋಜನೆಯಡಿ ನಿರುದ್ಯೋಗಿಗಳು ಆರ್ಥಿಕ ನೆರವನ್ನು ನೀಡುತ್ತಿದೆ. ಡಿಪ್ಲೊಮೊ ಓದಿದವರಿಗಾಗಿ 1500 ರೂ ಹಾಗೂ ಪದವಿ ಪದವೀಧರರಿಗಾಗಿ 3000 ರೂ ನೀಡಲು ಸರ್ಕಾರ ನಿರ್ಧರಿಸಿದೆ. ಇದರ ಬೆನ್ನಲ್ಲೇ ಲೋಕಸಭಾ ಚುನಾವಣೆಯ ಸಲುವಾಗಿ ಇದೀಗ ದೇಶದ ನಿರುದ್ಯೋಗಿಗಳಿಗಾಗಿ 1 ಲಕ್ಷ ರೂ ನೀಡುವುದಾಗಿ ಕಾಂಗ್ರೆಸ್ ಸರ್ಕಾರ ಘೋಷಿಸಿದೆ.

Join Nadunudi News WhatsApp Group

Congress Govt Latest News
Image Credit: News 18

Join Nadunudi News WhatsApp Group