Congress Offer: ಕಾಂಗ್ರೆಸ್ ನ 5 ಗ್ಯಾರೆಂಟಿ ಜಾರಿಗೆ ತರಲು ಎಷ್ಟು ಹಣ ಬೇಕು, ಜನರ ಜೇಬಿಗೆ ಬೀಳಬಹುದು ಕತ್ತರಿ.

ಕಾಂಗ್ರೆಸ್ ನ ಐದು ಭರವಸೆಗಳನ್ನ ಈಡೇರಿಸಲು ಎಷ್ಟು ಹಣ ಬೇಕಾಗುತ್ತದೆ, ಬೇಕು ಕೋಟಿಗಟ್ಟಲೆ ಹಣ.

Congress Promises Guarantee: ಈ ಬಾರಿ ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯಾಗಿದೆ. ಬರೋಬ್ಬರಿ 135 ಸ್ಥಾನಗಳನ್ನು ಸ್ಥಾನಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ (Congress) ಸರ್ಕಾರ ಅಧಿಕಾರವನ್ನು ಪಡೆದಿದೆ. ಪ್ರಚಾರ ವೇಳೆ ಕಾಂಗ್ರೆಸ್ ಸರ್ಕಾರ ಜನತೆಗೆ ಐದು ಭರವಸೆಗಳನ್ನು ನೀಡುತ್ತು.

ಕಾಂಗ್ರೆಸ್ ಪಕ್ಷ ನೀಡಿದ ಭರವಸೆಗಳನ್ನು ಈಡೇರಿಸುತ್ತದೆ ಎನ್ನುವ ಕಾರಣ ಜನತೆ ಕೈ ಗೆ ಬೆಂಬಲವನ್ನು ನೀಡಿದರು. ಇದೀಗ ಹೊಸ ಸರ್ಕಾರದ ಭರವಸೆಗಳ ಲಭ್ಯತೆಯ ಬಗ್ಗೆ ಕರ್ನಾಟಕದ ಜನತೆ ಕುತೂಹಲರಾಗಿದ್ದಾರೆ.

How much money is needed to fulfill the five promises of the Congress, crores of money is needed.
Image Credit: abplive

ಈಗಾಗಲೇ ಕಾಂಗ್ರೆಸ್ ನ ಭರವಸೆಗಳ ಈಡೇರಿಕೆಯ ಬಗ್ಗೆ ಸಾಕಷ್ಟು ಅಪ್ಡೇಟ್ ಗಳು ಹೊರಬಿದ್ದಿವೆ. ಇದೀಗ ಕಾಂಗ್ರೆಸ್ ಐದು ಗ್ಯಾರಂಟಿಗಳನ್ನು ಜಾರಿಗೆ ತರಲು ಸರ್ಕಾರ ಎಷ್ಟು ಹಣ ಖರ್ಚು ಮಾಡಬೇಕು ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

ಕಾಂಗ್ರೆಸ್ ನ 5 ಗ್ಯಾರೆಂಟಿ ಜಾರಿಗೆ ತರಲು ಎಷ್ಟು ಹಣ ಬೇಕು
ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಐದು ಭರವಸೆಗಳನ್ನು ನೀಡಿತ್ತು. ಈಗಾಗಲೇ ಈ ಐದು ಭರವಸೆಗಳ ಈಡೇರಿಕೆಗೆ ಷರತ್ತುಗಳ ಇರುತ್ತದೆ ಎಂದು ಕಾಂಗ್ರೆಸ್ ಅಧ್ಯಕ್ಷ ಜಿ. ಪರಮೇಶ್ವರ್ ಅವರು ಮಾಹಿತಿ ನೀಡಿದ್ದರು. ಇನ್ನು ಕಾಂಗ್ರೆಸ್ ನೀಡಿರುವ ಭರವಸೆಗಳನ್ನು ಅನುಷ್ಠಾನಕ್ಕೆ ತರುವುದಿಲ್ಲ ಎನ್ನುವ ಮಾತುಗಳು ಕೇಳಿಬಂದಿದ್ದವು. ಇದೀಗ ಕೆ. ಇ ರಾಧಾಕೃಷ್ಣ ಅವರು ಕಾಂಗ್ರೆಸ್ ನ ಐದು ಭರವಸೆಗಳ ಪೂರೈಕೆಯ ಬಗ್ಗೆ ಮಾತನಾಡಿದ್ದಾರೆ.

Crores of money are needed to fulfill the five promises given by the Congress
Imag Credit: hindustantimes

ಐದು ಭರವಸೆಗಳ ಅನುಷ್ಠಾನಕ್ಕೆ ಎಷ್ಟು ಕೋಟಿ ಹಣ ಅಗತ್ಯ
ಇನ್ನು ಕಾಂಗ್ರೆಸ್ ಪ್ರಣಾಳಿಕೆಯ ಕರಡು ಸಮಿತಿಯ ಉಪಾಧ್ಯಕ್ಷ ಪ್ರೊಫೆಸರ್ ಕೆ. ಇ ರಾಧಾಕೃಷ್ಣ ಅವರು ಕಾಂಗ್ರೆಸ್ ನ ಐದು ಭರವಸೆಗಳಿಗೆ ತಗಲುವ ವೆಚ್ಚದ ಬಗ್ಗೆ ಮಾಹಿತಿ ನೀಡಿದ್ದಾರೆ. ಐದು ಯೋಜನೆಗಳ ಅನುಷ್ಠಾನಕ್ಕೆ ವಾರ್ಷಿಕವಾಗಿ 50,000 ಕೋಟಿ ರೂ. ಗಿಂತ ಹೆಚ್ಚು ವೆಚ್ಚವಾಗುವುದಿಲ್ಲ ಎಂದು ಹೇಳಿದ್ದಾರೆ.

Join Nadunudi News WhatsApp Group

ಮೂರು ಲಕ್ಷ ಕೋಟಿ ರೂ. ಗಳ ಬಜೆಟ್ ನಲ್ಲಿ 1 .50 ಲಕ್ಷ ಕೋಟಿ ರೂ. ಗಳನ್ನೂ ಖರ್ಚು ಮಾಡಬೇಕಾಗಿದೆ. ಅದು ಸಂಭವಿಸದಿದ್ದರೆ ಇನ್ನು 1 .5 ಲಕ್ಷ ಕೋಟಿ ರೂ. ಗಳನ್ನೂ ಖರ್ಚು ಮಾಡಲು ನಮ್ಮ ಬಳಿ ಹಣವಿಲ್ಲ. ಅದನ್ನು ಪರಸ್ಪರ ಹೊಂದಾಣಿಕೆಯಿಂದ ಸರಿದೂಗಿಸಬಹುದು ಎಂದು ಹೇಳಿದ್ದಾರೆ.

Join Nadunudi News WhatsApp Group