ಬಿಗ್ ಬಾಸ್ ಮನೆಯಲ್ಲಿ ಕರೋನ ಆರ್ಭಟ, ಮನೆ ಲಾಕ್ ಡೌನ್, ನೋಡಿ ಬಿಗ್ ಬಾಸ್ ಮನೆಯಲ್ಲಿ ಕರೋನ ಜಿದ್ದಾಜಿದ್ದಿ.

ಸದ್ಯ ಎಲ್ಲರ ಮನೆಯಲ್ಲಿ ವೀಕ್ಷಣೆ ಆಗುತ್ತಿರುವ ಒಂದೇ ಒಂದು ರಿಯಾಲಿಟಿ ಶೋ ಅಂದರೆ ಅದೂ ಕನ್ನಡದ ಬಿಗ್ ಬಾಸ್ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ರಾತ್ರಿಯಾದರೆ ಸಾಕು ಜನರು ಟಿವಿ ಮುಂದೆ ಕುಳಿತುಕೊಂಡು ಬಿಗ್ ನೋಡಲು ಆರಂಭ ಮಾಡಿದ್ದು ಇದು ವಾಹಿನಿಯ TRP ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಹೇಳಬಹುದು. ಇನ್ನು ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳಿಗೆ ಬಹಳ ಕಠಿಣವಾದ ಟಾಸ್ಕ್ ಗಳನ್ನ ನೀಡಲಾಗುತ್ತಿದ್ದು ಬಿಗ್ ಬಾಸ್ ಬಹಳ ರೋಚಕ ಹಂತವನ್ನ ಕೂಡ ಪಡೆದುಕೊಳ್ಳುತ್ತಿದೆ ಎಂದು ಹೇಳಬಹುದು. ಇನ್ನು ಈಗಾಗಲೇ ಬಿಗ್ ಬಾಸ್ ಆರಂಭವಾಗಿ ಒಂದು ವಾರ ಕಳೆದಿದ್ದು ಮೊದಲ ವಾರದಲ್ಲಿ ಟಿಕ್ ಟಾಕ್ ಸ್ಟಾರ್ ಧನುಶ್ರೀ ಅವರು ಮನೆಯಿಂದ ಹೊರಗೆ ಬಂದಿದ್ದಾರೆ.

ಇನ್ನು ಈಗ ವಿಷಯಕ್ಕೆ ಬರುವುದಾದರೆ ಈಗ ಬಿಗ್ ಬಾಸ್ ಮನೆಯಲ್ಲಿ ಕೂಡ ಕರೋನ ಜಿದ್ದಾಜಿದ್ದಿ ಶುರುವಾಗಿದ್ದು ಜನರಿಗೆ ಬಹಳ ಕುತೂಹಲ ಮೂಡಿಸಿದೆ ಎಂದು ಹೇಳಬಹುದು. ಬಿಗ್ ಬಾಸ್ ಮನೆಯಲ್ಲಿ ಕರೋನ ಅಂದರೆ ನೀವು ಶಾಕ್ ಆಗುವ ಅಗತ್ಯ ಇಲ್ಲ. ಹಾಗಾದರೆ ಏನದು ಕರೋನ ಜಿದ್ದಾಜಿದ್ದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಸ್ನೇಹಿತರೆ ಇಷ್ಟು ದಿನ ಕೂಲ್ ಆಗಿದ್ದ ಬಿಗ್ ಬಾಸ್ ಮನೆ ಈಗ ಆಕ್ರೋಶದ ಮನೆಯಾಗಿ ಮಾರ್ಪಟ್ಟಿದೆ ಎಂದು ಹೇಳಬಹುದು. ಹೌದು ಇಷ್ಟು ದಿನ ಹೊರಗೆಡೆ ಇದ್ದ ಕರೋನ ಈಗ ಬಿಗ್ ಬಾಸ್ ಮನೆಗೆ ಕೂಡ ಎಂಟ್ರಿ ಕೊಟ್ಟಿದೆ.

corona in big boss

ಕರೋನ ವಿಷಯವಾಗಿ ಬಿಗ್ ಬಾಸ್ ಮನೆಯಲ್ಲಿ ಇರುವ ಸ್ಪರ್ಧಿಗಳಿಗೆ ಟಾಸ್ಕ್ ಕೊಡಲಾಗಿತ್ತು ಸದ್ಯ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳಿ ಜಿದ್ದಾಜಿದ್ದಿಯನ್ನ ನಡೆಸಿದ್ದಾರೆ ಎಂದು ಹೇಳಬಹುದು. ನಿಮಗೆಲ್ಲ ತಿಳಿದಿರುವ ಹಾಗೆ ಕಳೆದ ವರ್ಷ ದೇಶದಲ್ಲಿ ಕರೋನ ಮಹಾಮಾರಿ ಕಾಣಿಸಿಕೊಂಡಾಗ ಯಾವ ಯಾವ ಸಮಸ್ಯೆಗಳು ಆದವು ಅನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಚಾರ ಆಗಿದೆ. ಇನ್ನು ಇದೆ ವಿಷಯಾಗಿ ಬಿಗ್ ಬಾಸ್ ಕೂಡ  ಇದೀಗ ನೀವೆಲ್ಲರೂ ಕೊರೊನಾ ವೈಸ್ ವಿರುದ್ಧ ಹೋರಾಡಲು ಸಿದ್ಧರಾಗಿ ಎಂದು ಘೋಷಿಸಿದರು.

ಇನ್ನು ಬಿಗ್ ಬಾಸ್ ಘೋಷಣೆಯಂತೆ ಮನೆಯಲ್ಲಿ ಒಂದು ಮನುಷ್ಯರ ತಂಡ ಮತ್ತು ಇನ್ನೊಂದು ಕರೋನ ತಂಡವನ್ನ ಮಾಡಲಾಯಿತು. ಲ್ಯಾಂಗ್ ಮಂಜುರನ್ನು ಮನುಷ್ಯ ತಂಡದ ನಾಯಕರಾಗಿ ಹಾಗೂ ಪ್ರಶಾಂತ್ ಸಂಬರಗಿಯನ್ನು ವೈರಸ್ ತಂಡದ ನಾಯಕರಾಗಿ ನೇಮಿಸಿದರು. ಕೊರೊನಾ ಟಾಸ್ಕ್ ಪ್ರಕಟಣೆಯನ್ನು ಓದಿದ ಲ್ಯಾಂಗ್ ಮಂಜು, ಬಿಗ್ ಕ್ಯಾಪ್ಟನ್ಸಿ ಕಂಟೆಂಟರ್ ಟಾಸ್ಕ್‍ವೊಂದನ್ನು ನೀಡುತ್ತಿದ್ದು, ಅದುವೇ ಲಾಕ್‍ ಡೌನ್. ಇನ್ನು ಬಿಗ್ ಬಾಸ್ ಮನೆಯಲ್ಲಿ ಬಜಾರ್ ಆಗುತ್ತಿದ್ದಂತೆಯೇ ಮನೆಯನ್ನ ಲಾಕ್ ಡೌನ್ ಮಾಡಲಾಯಿತು, ಮನುಷ್ಯರು ವೈರಸ್ ದಾಳಿಯಿಂದ ತಪ್ಪಿಸಿಕೊಳ್ಳಬೇಕು.

Join Nadunudi News WhatsApp Group

corona in big boss

ದಾಳಿ ಮಾಡಿದಾಗ ವೈರಸ್ ಯಶಸ್ವಿಯಾದಲ್ಲಿ ಮನುಷ್ಯರು ಕ್ವಾರಂಟೈನ್‍ಗೆ ಹೋಗಬೇಕು. ಮನುಷ್ಯ ಕ್ವಾರಂಟೈನ್ ಅವಧಿಯಲ್ಲಿ ವೈರಸ್ ಹಿಂಸೆಯನ್ನು ಸಹಿಸಿಕೊಂಡು ಯಶಸ್ವಿಯಾದರೆ ಅವರು ಉಳಿಯುತ್ತಾರೆ ಎಂದು ತಿಳಿಸಲಾಯಿತು. ಸದ್ಯ ಟಾಸ್ಕ್ ಬಹಳ ರೋಚಕ ಹಂತವನ್ನ ತಲುಪಿದ್ದು ಸ್ಪರ್ಧಿಗಳ ನಡುವೆ ಜಗಳ ಕೂಡ ಆದವು. ಸ್ನೇಹಿತರೆ ಈ ಕರೋನ ಟಾಸ್ಕ್ ಹೇಗಿತ್ತು ಅನ್ನುವುದರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group