Covishield Vaccine: ಕರೋನ ಲಸಿಕೆ ಪಡೆದವರಿಗೆ ನಿಜಕ್ಕೂ ಹೃದಯಾಘಾತ ಆಗುತ್ತಿದೆಯಾ…? ಆರೋಗ್ಯ ಇಲಾಖೆ ಹೇಳುವುದೇನು…?

ಕರೋನ ಲಸಿಕೆ ಪಡೆದವರಿಗೆ ನಿಜಕ್ಕೂ ಹೃದಯಾಘಾತ ಆಗುತ್ತಿದೆಯಾ...?

Covishield Vaccine Latest Update: ಪ್ರಸ್ತುತ ಕೋವಿಡ್ ಸಮಯದಲ್ಲಿ ಪಡೆದಿರುವ ಲಸಿಕೆಗೆ ಸಂಬಂಧಿಸಿದಂತೆ ಸುದ್ದಿಗಳು ವೈರಲ್ ಆಗುತ್ತಿದೆ. ಕೋವಿಡ್ ಲಸಿಕೆಯನ್ನು ಅಭಿವೃದ್ಧಿಪಡಿಸಿದ ಕಂಪನಿ, ಕೋವಿಶೀಲ್ಡ್ ಲಸಿಕೆ ಮಾರಣಾಂತಿಕ ಅಡ್ಡ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ಲಂಡನ್‌ ನ ನ್ಯಾಯಾಲಯದ ಮುಂದೆ ಒಪ್ಪಿಕೊಂಡಿದೆ.

ಭಾರತದಲ್ಲಿ ಸುಮಾರು 80 ಕೋಟಿ ಜನರಿಗೆ ಈ ಕೋವಿಶೀಲ್ಡ್ ಲಸಿಕೆ ನೀಡಲಾಗಿದೆ.ಕೋವಿಡ್ ನಿಯಂತ್ರಣಕ್ಕಾಗಿ ಅಭಿವೃದ್ಧಿಪಡಿಸಿದ ‘ಕೋವಿಶೀಲ್ಡ್’ ಲಸಿಕೆ ಮಾರಣಾಂತಿಕ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ಅಸ್ಟ್ರಾಜೆನೆಕಾ ಕಂಪನಿಯು ಒಪ್ಪಿಕೊಂಡಿರುವುದು ಸದ್ಯ ಆತಂಕಕ್ಕೆ ಕಾರಣವಾಗಿದೆ.

ಈ ಸಮಯದಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಕೋವಿಶಿಲ್ಡ್ ಲಸಿಕೆಗೆ ಸಂಬಂಧಿಸಿದಂತೆ ಎಚ್ಚರಿಕೆಯ ಸಂದೇಶವೊಂದು ವೈರಲ್ ಆಗುತ್ತಿದೆ. ಈ ವೈರಲ್ ಮಾಹಿತಿಯ ಬಗ್ಗೆ ಅರೋಗ್ಯ ಇಲಾಖೆ ಏನು ಹೇಳುತ್ತದೆ…? ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

Covishield Vaccine Latest Update
Image Credit: Livemint

ಕರೋನ ಲಸಿಕೆ ಪಡೆದವರಿಗೆ ನಿಜಕ್ಕೂ ಹೃದಯಾಘಾತ ಆಗುತ್ತಿದೆಯಾ…?
ಕರೋನಾ ಸಂದರ್ಭದಲ್ಲಿ, ಕೋವಿಡ್ ಶೀಲ್ಡ್ ಲಸಿಕೆಯನ್ನು ಪಡೆದವರು ತಂಪು ಪಾನೀಯಗಳು, ಐಸ್ ಕ್ರೀಮ್ ಮತ್ತು ಫ್ರಿಡ್ಜ್‌ ನಲ್ಲಿ ಇರಿಸಲಾದ ತಣ್ಣೀರನ್ನು ಸೇವಿಸಬಾರದು. ಹೀಗೆ ಮಾಡಿದರೆ ರಕ್ತ ಹೆಪ್ಪುಗಟ್ಟಿ ಏಕಾಏಕಿ ಹೃದಯಾಘಾತವಾಗಿ ಸಾವನ್ನಪ್ಪಬಹುದು ಎಂದು ಆರೋಗ್ಯ ಇಲಾಖೆ ಸೂಚಿಸಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಸದ್ಯ ಲಸಿಕೆಗೆ ಸಂಬಂಧಿಸಿದಂತೆ ಇಂತಹ ಎಚ್ಚರಿಕೆಯ ಸಂದೇಶ ವೈರಲ್ ಆಗುತ್ತಿರುವ ಬಗ್ಗೆ ನಿಮಗೆ ಮಾಹಿತಿ ತಿಳಿದಿರಬಹುದು. ಈ ವೈರಲ್ ಸಂದೇಶದ ಬಗ್ಗೆ ಜನರು ಚಿಂತಿಸುವಂತಾಗಿದೆ. ಈ ವೈರಲ್ ಮಾಹಿತಿಯ ಬಗ್ಗೆ ಆಹಾರ ಇಲಾಖೆಯು ಇದೀಗ ಸ್ಪಷ್ಟನೆ ನೀಡಿದೆ ಎನ್ನಬಹುದು.

Join Nadunudi News WhatsApp Group

ಚಿಕ್ಕಬಳ್ಳಾಪುರದ ಖಾಸಗಿ ಲಾ ಕಾಲೇಜಿನ ಸೂಚನಾ ಫಲಕದಲ್ಲಿ ಆರೋಗ್ಯ ಇಲಾಖೆ ಹೇಳಿರುವ ಸುಳ್ಳು ಸಂದೇಶವುಳ್ಳ ನೋಟೀಸ್ ಫೋಟೋ ವೈರಲ್ ಆಗಿದೆ. ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಈ ರೀತಿಯ ಸೂಚನೆ ನೀಡಿ ಯಾವುದೇ ಸುತ್ತೋಲೆ ಹೊರಡಿಸಿಲ್ಲ ಎಂದು ಆರೋಗ್ಯ ಇಲಾಖೆ ಜನಪ್ರಿಯ ಸಾಮಾಜಿಕ ಜಾಲತಾಣ X ನಲ್ಲಿ ಸ್ಪಷ್ಟಪಡಿಸಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಸಂದೇಶದಲ್ಲಿ ಯಾವುದೇ ಸತ್ಯಂಶ ಇಲ್ಲ ಎನ್ನುವುದು ಸ್ಪಷ್ಟವಾಗಿದೆ. ಜನರು ವೈರಲ್ ಸಂದೇಶದ ಬಗ್ಗೆ ಹೆಚ್ಚು ಯೋಚಿಸುವ ಅಗತ್ಯ ಇರುವುದಿಲ್ಲ.

Covishield Vaccine Latest News Update
Image Credit: Thelogicalindian

Join Nadunudi News WhatsApp Group