Covishield Vaccine: ಕರೋನ ಲಸಿಕೆ ಪಡೆದುಕೊಂಡವರಿಗೆ ಐಸ್ ಕ್ರೀಮ್ ಮತ್ತು ಕೂಲ್ ಡ್ರಿಂಕ್ಸ್ ಕುಡಿದರೆ ರಕ್ತ ಹೆಪ್ಪುಗಟ್ಟುತ್ತಾ…? ಸಿಕ್ಕಿತು ಸ್ಪಷ್ಟನೆ.

ಕೋವಿಶಿಲ್ಡ್ ಲಸಿಕೆ ಪಡೆದವರಿಗೆ ತೊಂದರೆ ಆಗುತ್ತಾ,...? ಇದರ ಬಗ್ಗೆ ಆರೋಗ್ಯ ಇಲಾಖೆ ಹೇಳುವುದೇನು...?

Covishield Vaccine Latest Update: ಈ ಹಿಂದೆ ದೇಶದಲ್ಲಿ ಕರೋನ ಭಯ ಜನರಲ್ಲಿ ಹೇಗಿತ್ತು ಎನ್ನುವುದರ ಬಗ್ಗೆ ಎಲ್ಲರಿಗು ತಿಳಿದೇ ಇದೆ. ಕರೋನದಿಂದ ಮುಕ್ತಿ ಪಡೆಯಲು ಸಾಕಷ್ಟು ಸಮಯ ಬೇಕಾಗಿತ್ತು. ಕರೋನದಿಂದ ರಕ್ಷಣೆ ಪಡೆಯಲು ವ್ಯಾಕ್ಸಿನ್ ಅನ್ನು ಕಂಡು ಹಿಡಿಯಲಾಯಿತು. ಕರೋನ ನಮ್ಮ ಮೇಲೆ ದಾಳಿ ಮಾಡಬಾರದು ಎನ್ನುವ ಉದ್ದೇಶದಿಂದ ಪ್ರತಿಯೊಬ್ಬರೂ ಕೂಡ ವ್ಯಾಕ್ಸಿನೇಷನ್ ಪಡೆದಿದ್ದರು.

ಆದರೆ ಇದೀಗ ಆ ವ್ಯಾಕ್ಸಿನೇಷನ್ ಜನಸಾಮಾನ್ಯರಿಗೆ ಕಂಟಕವಾಗಿದೆ. ಹೌದು, ಕರೋನದಿಂದ ರಕ್ಷಣೆ ಪಡೆಯಲು ತೆಗೆದುಕೊಂಡಿದ್ದ ವ್ಯಾಕ್ಸಿನೇಷನ್ ಬಗ್ಗೆ ಇದೀಗ ಆಘಾತಕಾರಿ ಸುದ್ದಿಯೊಂದು ಬಾರಿ ವೈರಲ್ ಆಗಿದ್ದು, ಜನರ ನಿದ್ದೆ ಕೆಡಿಸುತ್ತಿದೆ ಎನ್ನಬಹುದು. ಕರೋನ ಬಂದ ಸಮಯದಲ್ಲಿ ಜನರಿಗೆ ಎರಡು ರೀತಿಯ ವ್ಯಾಕ್ಸಿನೇಷನ್ ಅನ್ನು ನೀಡಾಲಾಗಿತ್ತು.

ಅದರಲ್ಲಿ ಕೊವ್ಯಾಕ್ಸಿನ್ ಒಂದಾದರೆ ಇನ್ನೊಂದು ಕೋವಿಶಿಲ್ಡ್ ಆಗಿದೆ. ಕರೋನ ಲಸಿಕೆ ಪಡೆದುಕೊಂಡವರಿಗೆ ಐಸ್ ಕ್ರೀಮ್ ಮತ್ತು ಕೂಲ್ ಡ್ರಿಂಕ್ಸ್ ಕುಡಿದರೆ ರಕ್ತ ಹೆಪ್ಪುಗಟ್ಟುತ್ತದೆ ಎನ್ನುವುದು ಸದ್ಯದ ಚರ್ಚೆಯಾಗಿದೆ. ಅಷ್ಟಕ್ಕೂ ನಿಜವಾಗಿಯೂ ಕೋವಿಶಿಲ್ಡ್ ಲಸಿಕೆ ಪಡೆದವರಿಗೆ ತೊಂದರೆ ಆಗುತ್ತಾ…? ಇದರ ಬಗ್ಗೆ ಆರೋಗ್ಯ ಇಲಾಖೆ ಹೇಳುವುದೇನು  ಎನ್ನುವ ಬಗ್ಗೆ ನೋಡೋಣ.

Covishield Vaccine Latest Updates
Image Credit: Business-standard

ಕರೋನ ಲಸಿಕೆ ಪಡೆದುಕೊಂಡವರಿಗೆ ಐಸ್ ಕ್ರೀಮ್ ಮತ್ತು ಕೂಲ್ ಡ್ರಿಂಕ್ಸ್ ಕುಡಿದರೆ ರಕ್ತ ಹೆಪ್ಪುಗಟ್ಟುತ್ತಾ…?
ಕರೋನಾ ಸಂದರ್ಭದಲ್ಲಿ, ಕೋವಿಡ್ ಶೀಲ್ಡ್ ಲಸಿಕೆಯನ್ನು ಪಡೆದವರು ತಂಪು ಪಾನೀಯಗಳು, ಐಸ್ ಕ್ರೀಮ್ ಮತ್ತು ಫ್ರಿಡ್ಜ್‌ ನಲ್ಲಿ ಇರಿಸಲಾದ ತಣ್ಣೀರನ್ನು ಸೇವಿಸಬಾರದು. ಹೀಗೆ ಮಾಡಿದರೆ ರಕ್ತ ಹೆಪ್ಪುಗಟ್ಟಿ ಏಕಾಏಕಿ ಹೃದಯಾಘಾತವಾಗಿ ಸಾವನ್ನಪ್ಪಬಹುದು ಎಂದು ಆರೋಗ್ಯ ಇಲಾಖೆ ಸೂಚಿಸಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಸದ್ಯ ಲಸಿಕೆಗೆ ಸಂಬಂಧಿಸಿದಂತೆ ಇಂತಹ ಎಚ್ಚರಿಕೆಯ ಸಂದೇಶ ವೈರಲ್ ಆಗುತ್ತಿರುವ ಬಗ್ಗೆ ನಿಮಗೆ ಮಾಹಿತಿ ತಿಳಿದಿರಬಹುದು. ಈ ವೈರಲ್ ಸಂದೇಶದ ಬಗ್ಗೆ ಜನರು ಚಿಂತಿಸುವಂತಾಗಿದೆ. ಈ ವೈರಲ್ ಮಾಹಿತಿಯ ಬಗ್ಗೆ ಆಹಾರ ಇಲಾಖೆಯು ಇದೀಗ ಸ್ಪಷ್ಟನೆ ನೀಡಿದೆ ಎನ್ನಬಹುದು.

Join Nadunudi News WhatsApp Group

ಚಿಕ್ಕಬಳ್ಳಾಪುರದ ಖಾಸಗಿ ಲಾ ಕಾಲೇಜಿನ ಸೂಚನಾ ಫಲಕದಲ್ಲಿ ಆರೋಗ್ಯ ಇಲಾಖೆ ಹೇಳಿರುವ ಸುಳ್ಳು ಸಂದೇಶವುಳ್ಳ ನೋಟೀಸ್ ಫೋಟೋ ವೈರಲ್ ಆಗಿದೆ. ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಈ ರೀತಿಯ ಸೂಚನೆ ನೀಡಿ ಯಾವುದೇ ಸುತ್ತೋಲೆ ಹೊರಡಿಸಿಲ್ಲ ಎಂದು ಆರೋಗ್ಯ ಇಲಾಖೆ ಜನಪ್ರಿಯ ಸಾಮಾಜಿಕ ಜಾಲತಾಣ X ನಲ್ಲಿ ಸ್ಪಷ್ಟಪಡಿಸಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಸಂದೇಶದಲ್ಲಿ ಯಾವುದೇ ಸತ್ಯಂಶ ಇಲ್ಲ ಎನ್ನುವುದು ಸ್ಪಷ್ಟವಾಗಿದೆ. ಜನರು ವೈರಲ್ ಸಂದೇಶದ ಬಗ್ಗೆ ಹೆಚ್ಚು ಯೋಚಿಸುವ ಅಗತ್ಯ ಇರುವುದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಸುದ್ದಿ ಸಂಪೂರ್ಣವಾಗಿ ಸುಳ್ಳು ಎಂದು ಆರೋಗ್ಯ ಇಲಾಖೆ ಸ್ಪಷ್ಟ ಮಾಹಿತಿ ನೀಡಿದೆ.

Covishield Vaccine New Update
Image Credit: Mathrubhumi

Join Nadunudi News WhatsApp Group