Covishield Vaccine: ಕರೋನ ಲಸಿಕೆ ಪಡೆದುಕೊಂಡವರ ರಕ್ತ ಹೆಪ್ಪುಗಟ್ಟುತ್ತಿದೆ, ಆತಂಕದಲ್ಲಿ ಲಸಿಕೆ ಪಡೆದುಕೊಂಡ ಜನರು.

ಕರೋನ ಲಸಿಕೆ ಪಡೆದುಕೊಂಡವರು ಆತಂಕದಲ್ಲಿ, ರಕ್ತ ಹೆಪ್ಪುಗಟ್ಟುತ್ತಿದೆ

Covishield Vaccine Side Effects: ಭಾರತದಲ್ಲಿ ಈ ಹಿಂದೆ ಕೋವಿಡ್ 19 ರ ಏಲ್ ಎಷ್ಟರ ಮಟ್ಟಿಗೆ ಇದ್ದಿತ್ತು ಎನ್ನುವ ಬಗ್ಗೆ ಎಲ್ಲರಿಗು ತಿಳಿದೇ ಇದೆ. ಕೋವಿಡ್ ನಿಂದಾಗಿ ಪ್ರತಿಯೊಬ್ಬರು ಕೂಡ ಸಾವು ಬದುಕಿನ ನಡುವೆ ಹೋರಾಟ ನಡೆಸುವಂತಾಗಿತ್ತು.

ಇನ್ನು ಕರೋನದಿಂದ ಮುಕ್ತಿ ಪಡೆಯಲು ವ್ಯಾಕ್ಸಿನ್ ಕಂಡು ಹಿಡಿಯಲಾಗಿತ್ತು. ಕೋವಿಡ್ ನಿಂದ ರಕ್ಷಿಸಿಕೊಳ್ಳವು ಪ್ರತಿಯೊಬ್ಬರೂ ವ್ಯಾಕ್ಸಿನೇಷನ್ ಮಾಡಿಸಿಕೊಂಡಿದ್ದರು. ಪ್ರಸ್ತುತ ಕರೋನ ಕಡಿಮೆಯಾಗಿದೆ. ಆದರೆ ಇದೀಗ ಕರೋನದಿಂದ ರಕ್ಷಿಸಿಕೊಳ್ಳಲು ತೆಗೆದುಕೊಂಡಿದ್ದ ವ್ಯಾಕ್ಸಿನ್ ನಿಂದ ಅಪಾಯದ ಸೂಚನೆ ಕೇಳಿಬರುತ್ತಿದೆ.

Covishield Vaccine Side Effects
Image Credit: Jagran

ಕರೋನ ಲಸಿಕೆ ಪಡೆದುಕೊಂಡವರ ರಕ್ತ ಹೆಪ್ಪುಗಟ್ಟುತ್ತಿದೆ
ಹೌದು, ಕೋವಿಡ್ ಲಸಿಕೆಯನ್ನು ಅಭಿವೃದ್ಧಿಪಡಿಸಿದ ಕಂಪನಿ , ಕೋವಿಶೀಲ್ಡ್ ಲಸಿಕೆ ಮಾರಣಾಂತಿಕ ಅಡ್ಡ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ಲಂಡನ್‌ ನ ನ್ಯಾಯಾಲಯದ ಮುಂದೆ ಒಪ್ಪಿಕೊಂಡಿದೆ. ಭಾರತದಲ್ಲಿ ಸುಮಾರು 80 ಕೋಟಿ ಜನರಿಗೆ ಈ ಕೋವಿಶೀಲ್ಡ್ ಲಸಿಕೆ ನೀಡಲಾಗಿದೆ, ಕೋವಿಡ್ ನಿಯಂತ್ರಣಕ್ಕಾಗಿ ಅಭಿವೃದ್ಧಿಪಡಿಸಿದ ‘ಕೋವಿಶೀಲ್ಡ್’ ಲಸಿಕೆ ಮಾರಣಾಂತಿಕ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ಅಸ್ಟ್ರಾಜೆನೆಕಾ ಕಂಪನಿಯು ಒಪ್ಪಿಕೊಂಡಿರುವುದು ಇದೇ ಮೊದಲು.

ಲಸಿಕೆಯ ಅಡ್ಡ ಪರಿಣಾಮಗಳ ಸಂತ್ರಸ್ತರು ಸಲ್ಲಿಸಿದ ಮೊಕದ್ದಮೆಯ ಭಾಗವಾಗಿ ಕಂಪನಿಯು ಲಂಡನ್ ನ್ಯಾಯಾಲಯಕ್ಕೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ಈ ಮಾಹಿತಿ ಇದೆ ಎಂದು ಡೈಲಿ ಟೆಲಿಗ್ರಾಫ್ ವರದಿ ಮಾಡಿದೆ. ಪ್ರಮಾಣಪತ್ರದಲ್ಲಿ, ಕೋವಿಶೀಲ್ಡ್ ಪಡೆದವರಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಮತ್ತು ಕಡಿಮೆ ಪ್ಲೇಟ್‌ ಲೆಟ್ ಕೌಂಟ್ (ಟಿಟಿಎಸ್) ಅಪರೂಪದ ಪ್ರಕರಣಗಳು ಮಾತ್ರ ಸಂಭವಿಸುತ್ತವೆ ಎಂದು ಕಂಪನಿ ವಿವರಿಸಿದೆ. ಆದರೆ ವಿಶ್ವ ಆರೋಗ್ಯ ಸಂಸ್ಥೆಯು ಇದು ಅಪರೂಪದ ಅಡ್ಡ ಪರಿಣಾಮವಾದರೂ ಮಾರಣಾಂತಿಕ ಸಮಸ್ಯೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

Covishield Vaccine
Image Credit: Indiatodayne

ಆತಂಕದಲ್ಲಿ ಲಸಿಕೆ ಪಡೆದುಕೊಂಡ ಜನರು
ಬ್ರಿಟನ್‌ ನ ಆಕ್ಸ್‌ ಫರ್ಡ್ ವಿಶ್ವವಿದ್ಯಾಲಯ ಮತ್ತು ಅಸ್ಟ್ರಾಜೆನೆಕಾ ಜಂಟಿಯಾಗಿ ಕೋವಿಶೀಲ್ಡ್ ಲಸಿಕೆಯನ್ನು ಅಭಿವೃದ್ಧಿಪಡಿಸಿವೆ. ಈ ಲಸಿಕೆಗಳನ್ನು ತಯಾರಿಸಲು ಭಾರತೀಯ ಕಂಪನಿ ‘ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ’ (SII) ಒಪ್ಪಂದ ಮಾಡಿಕೊಂಡಿದೆ. ಈ ಲಸಿಕೆಯ ಬಳಕೆಯನ್ನು ಬ್ರಿಟನ್, ಯುರೋಪಿಯನ್ ದೇಶಗಳು, ದಕ್ಷಿಣ ಏಷ್ಯಾದ ದೇಶಗಳು ಮತ್ತು ಕೆರಿಬಿಯನ್‌ ನ ಕೆಲವು ದೇಶಗಳಲ್ಲಿ ಅಳವಡಿಸಲಾಗಿದೆ.

Join Nadunudi News WhatsApp Group

ಆದರೆ ಆಸ್ಟ್ರಿಯಾದಲ್ಲಿ, ಲಸಿಕೆ ಪಡೆದವರಲ್ಲಿ ಇಬ್ಬರು ರಕ್ತ ಹೆಪ್ಪುಗಟ್ಟುವಿಕೆಯಿಂದ ಸಾವನ್ನಪ್ಪಿದರು. ಹೀಗಾಗಿ, ಮಾರ್ಚ್ 2021 ರಲ್ಲಿ, ಆಸ್ಟ್ರಿಯನ್ ಸರ್ಕಾರವು ಈ ಲಸಿಕೆ ಬಳಕೆಯನ್ನು ನಿಷೇಧಿಸಿತು. ನಂತರ, ಯುರೋಪಿಯನ್ ಒಕ್ಕೂಟದ 19 ದೇಶಗಳು ಲಸಿಕೆಯನ್ನು ನಿಷೇಧಿಸಿದವು. ಅಮೆರಿಕ ಕೂಡ ಈ ಲಸಿಕೆ ಬಳಸದಂತೆ ಎಚ್ಚರಿಕೆ ನೀಡಿದೆ. ಆದರೆ ಅಸ್ಟ್ರಾಜೆನೆಕಾ ಇದನ್ನೆಲ್ಲ ನಿರಾಕರಿಸಿ, ಕೋವಿಶೀಲ್ಡ್ ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ಹೇಳಿದ್ದಾರೆ.

ಡಿಸೆಂಬರ್ 2020 ರಲ್ಲಿ, ತುರ್ತು ಸಂದರ್ಭಗಳಲ್ಲಿ ಮಾತ್ರ ಕೋವಿಶೀಲ್ಡ್ ಬಳಕೆಗೆ ಅನುಮತಿ ನೀಡಲಾಯಿತು. ಆಗ ಬ್ರಿಟಿಷ್ ಸರ್ಕಾರ ತನ್ನ ನಾಗರಿಕರಿಗೆ ಸುಮಾರು 5 ಕೋಟಿ ಡೋಸ್ ನೀಡಿತ್ತು. ಆ ಸಂದರ್ಭದಲ್ಲಿ ಸಂಭಸಿದ ಕೋವಿಡ್ ಸಾವುಗಳಲ್ಲಿ 81 ಮಂದಿ ರಕ್ತಹೆಪ್ಪುಗಟ್ಟುವಿಕೆಯ ಸಮಸ್ಯೆಯಿಂದ ಮೃತಪಟ್ಟಿದ್ದರು ಮತ್ತು ಅಷ್ಟು ಮಂದಿ ಕೋವಿಡ್ ಶೀಲ್ಡ್ ಲಸಿಕೆ ಪಡೆದುಕೊಂಡಿದ್ದರು ಎಂದು ಬ್ರಿಟನ್ ನ ಮೆಡಿಸನ್ & ಹೆಲ್ತ್ ಕೇರ್ ಪ್ರಾಡಕ್ಟ್ ರೆಗ್ಯುಲೇಟರಿ ಏಜೆನ್ಸಿ ವರದಿ ನೀಡಿತ್ತು. TTS ನಿಂದ ಮೃತಪಟ್ಟವರು ಒಂದೆಡೆಯಾದರೆ, ಲಸಿಕೆ ಪಡೆದುಕೊಂಡವರಲ್ಲಿ ಸುಮಾರು 50000 ಮಂದಿಯಲ್ಲಿ TTS ಸಮಸ್ಯೆ ತೆಲೆದೊರಿತ್ತು ಎಂದು ಆ ಏಜೆನ್ಸಿ ಮಾಹಿತಿ ನೀಡಿದೆ.

Covishield Vaccine Latest News
Image Credit: Livemint

Join Nadunudi News WhatsApp Group