Cashback Offer: ಕ್ರೆಡಿಟ್ ಕಾರ್ಡ್ ಬಳಸುವವರಿಗೆ ಗುಡ್ ನ್ಯೂಸ್, ಇನ್ಮುಂದೆ ಈ ವ್ಯವಹಾರಗಳಿಗೆ 2000 ರೂ ಕ್ಯಾಶ್ ಬ್ಯಾಕ್

ಈ ಕ್ರೆಡಿಟ್ ಕಾರ್ಡ್ ಬಳಸುವವರಿಗೆ ತಮ್ಮ ವ್ಯವಹಾರದ ಮೇಲೆ ಕ್ಯಾಶ್ ಬ್ಯಾಕ್ ಸಿಗಲಿದೆ

Credit Card Cashback Offer: ಪ್ರಸ್ತುತ ದೇಶದಲ್ಲಿ ಎಲ್ಲಾ ವ್ಯವಹಾರಗಳು ಡಿಜಿಟಲೀಕರಣಗೊಂಡಿದೆ. ಜನರು ಯಾವುದೇ ರೀತಿಯ ಸಣ್ಣ ವ್ಯವಹಾರವನ್ನು ಮಾಡಬೇಕಿದ್ದರೂ ಕೂಡ ಆನ್ಲೈನ್ ಪೇಮೆಂಟ್ ಅನ್ನು ಬಳಸುತ್ತಿದ್ದಾರೆ. ಇನ್ನು ಬಳಕೆದಾರರಿಗೆ UPI ಅಪ್ಲಿಕೇಶನ್ ಗಳು ಸಾಕಷ್ಟು ಹೊಸ ಹೊಸ ಫೀಚರ್ ಗಳನ್ನೂ ನೀಡುತ್ತಾ ಬರುತ್ತಿದೆ.

ಇದೀಗ UPI Application ವಿಶೇಷವಾಗಿ Cash Back ಅನ್ನು ನೀಡುವ ಮೂಲಕ ಗ್ರಾಹಕರನ್ನು ಮತ್ತಿಷ್ಟು ಸೆಳೆಯಲು ಮುಂದಾಗಿದೆ. ಹೌದು ನೀವು ಈ ಕ್ರೆಡಿಟ್ ಕಾರ್ಡ್ ಅನ್ನು ಬಳಸುವವರಾಗಿದ್ದರೆ UPI ವಹಿವಾಟಿನಲ್ಲಿ ಭರ್ಜರಿಯಾಗಿ ಕ್ಯಾಶ್ ಬ್ಯಾಕ್ ಅನ್ನು ಪಡೆಯಬಹುದು. ಅದು ಹೇಗೆ..? ಎನ್ನುವುದರ ಬಗ್ಗೆ ಇಲ್ಲಿದೆ ವಿವರ.

Credit Card Latest Update
Image Credit: Bankofbaroda

ಕ್ರೆಡಿಟ್ ಕಾರ್ಡ್ ಬಳಸುವವರಿಗೆ ಗುಡ್ ನ್ಯೂಸ್
ಇನ್ನು 2022 ರಲ್ಲಿ UPI ಸೌಲಭ್ಯದಲ್ಲಿ Rupay Credit card ಆನು ಬಳಸಲು ಅನುಮತಿ ನೀಡಲಾಗಿದೆ. ಇದರಿಂದಾಗಿ ಯಾವುದೇ ವ್ಯಾಪಾರಿಯ QR Code ಅನ್ನು ಸ್ಕ್ಯಾನ್ ಮಾಡುವ ಮೂಲಕ ಕ್ರೆಡಿಟ್ ಕಾರ್ಡ್ ನ ಮೂಲಕ ಪಾವತಿಯನ್ನು ಮಾಡಲು ಸಾಧ್ಯವಾಗುತ್ತದೆ. ಇದೀಗ UPI ನಲ್ಲಿ ರೂಪೇ ಕ್ರೆಡಿಟ್ ಕಾರ್ಡ್ ಬಳಸುವವರಿಗೆ ಭರ್ಜರಿ ಆಫರ್ ಲಭ್ಯವಾಗಲಿದೆ. ನೀವು UPI Application ನೊಂದಿಗೆ Rupay Credit card ಅನ್ನು ಲಿಂಕ್ ಮಾಡಿಕೊಂಡರೆ ಭರ್ಜರಿ ಕ್ಯಾಶ್ ಬ್ಯಾಕ್ ಅನ್ನು ಪಡೆಯಬಹುದು.

ಇನ್ಮುಂದೆ ಈ ವ್ಯವಹಾರಗಳಿಗೆ 2000 ರೂ. ಕ್ಯಾಶ್ ಬ್ಯಾಕ್
ನೀವು ಯುಪಿಐ ಅಪ್ಲಿಕೇಶನ್‌ ನೊಂದಿಗೆ ರುಪೇ ಕ್ರೆಡಿಟ್ ಕಾರ್ಡ್ ಅನ್ನು ಲಿಂಕ್ ಮಾಡುವ ಮೂಲಕ ಪಾವತಿ ಮಾಡಿದರೆ, ಮನರಂಜನೆ, ಪ್ರಯಾಣ, ಉಡುಪು, ಎಲೆಕ್ಟ್ರಾನಿಕ್ಸ್ ಮತ್ತು ಊಟದ ವೆಚ್ಚಗಳ ಮೇಲೆ ನೀವು ಶೇಕಡಾ 10 ರಷ್ಟು ಕ್ಯಾಶ್‌ ಬ್ಯಾಕ್ ಪಡೆಯಬಹುದು.

Credit Card Cashback Offer
Image Credit: Kanakkupillai

ನೀವು ಜನವರಿ 26 ರಿಂದ 28, 2024 ರವರೆಗೆ UPI ಕ್ರೆಡಿಟ್ ಕಾರ್ಡ್ ಮೂಲಕ ಕನಿಷ್ಠ 7,500 ರೂಪಾಯಿಗಳ ಪಾವತಿಯನ್ನು ಮಾಡಿದರೆ, ನೀವು 10 ಪ್ರತಿಶತ ಕ್ಯಾಶ್‌ ಬ್ಯಾಕ್ ಪಡೆಯುತ್ತೀರಿ. ಕ್ಯಾಶ್‌ ಬ್ಯಾಕ್‌ ನ ಗರಿಷ್ಠ ಮಿತಿ 2,000 ರೂ. ಆಗಿದೆ. ಈ ಕೊಡುಗೆಯು Cleartrip, Ajio, Croma, EaseMyTrip, ixigo, Vijay Sales, West Side ಮತ್ತು Yatra ನಂತಹ ವ್ಯಾಪಾರಿಗಳಿಗೆ ಮಾನ್ಯವಾಗಿದೆ. ಇಂದೇ UPI ಕ್ರೆಡಿಟ್ ಕಾರ್ಡ್ ಮೂಲಕ ಪಾವತಿ ಮಾಡಿ ಗರಿಷ್ಟ ಕ್ಯಾಶ್ ಬ್ಯಾಕ್ ಅನ್ನು ಪಡೆದುಕೊಳ್ಳಿ.

Join Nadunudi News WhatsApp Group

Join Nadunudi News WhatsApp Group