Credit Card: ಕ್ರೆಡಿಟ್ ಕಾರ್ಡ್ ಬಳಸುವವರ ಗಮನಕ್ಕೆ, ನಿಮಗೆ ತಿಳಿಯಂತೆ ಪ್ರತಿ ತಿಂಗಳು ಬರುತ್ತಿದೆ ಈ ಶುಲ್ಕ.

ನಿಮಗೆ ತಿಳಿಯಂತೆ ಕ್ರೆಡಿಟ್ ಕಾರ್ಡ್ ನಿಂದ ಬರುವ ಶುಲ್ಕಗಳ ಬಗ್ಗೆ ಮಾಹಿತಿ ತಿಳಿಯಿರಿ.

Credit Card Charges: ದೇಶದ ಅನೇಕ ಪ್ರತಿಷ್ಠಿತ ಬ್ಯಾಂಕ್ ಗಳು ಅನೇಕ ನಿಯಮಗಳನ್ನು ಪರಿಚಯಿಸಿದೆ. ಇನ್ನು ಬ್ಯಾಂಕ್ ಗಳು ತನ್ನ ಗ್ರಾಹಕರಿಗೆ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್ ಸೌಲಭ್ಯವನ್ನು ನೀಡುತ್ತದೆ. ಇತ್ತೀಚಿಗೆ ಬ್ಯಾಂಕ್ ಕ್ರೆಡಿಟ್ ಕಾರ್ಡ್ (Credit Card)  ನಿಯಮಗಳನ್ನು ಬದಲಾಯಿಸುತ್ತಿವೆ. ಇನ್ನು ಕ್ರೆಡಿಟ್ ಕಾರ್ಡ್ ಬಳಕೆಯಲ್ಲಿ ಯಾವುದೇ ರೀತಿಯಲ್ಲಿ ತಪ್ಪು ಕಂಡು ಬಂದರು ಕೂಡ ಹೆಚ್ಚಿನ ದಂಡವನ್ನು ವಿದಿಸಬೇಕಾಗುತ್ತದೆ.

ಇನ್ನು ಕ್ರೆಡಿಟ್ ಕಾರ್ಡ್ ಬಳಸುತ್ತಿರುವುದರಿಂದ ನಿಮಗೆ ಗೊತ್ತಿಲ್ಲದೇ ಕೆಲವು ಶುಲ್ಕ ಆಗುತ್ತಿರುತ್ತವೆ. ಇದರ ಬಗ್ಗೆ ಮಾಹಿತಿ ತಿಳಿಯೋಣ.ನೀವು ಕ್ರೆಡಿಟ್ ಕಾರ್ಡ್ ಖರೀದಿಸಿದಾಗ ಕೆಲವು ಬ್ಯಾಂಕ್ ಗಳು ಆರಂಭಿಕ ಶುಲ್ಕ ವಿಧಿಸುತ್ತವೆ. ಮತ್ತೆ ಕೆಲವು ಬ್ಯಾಂಕ್ ಗಳು ರಿನೀವಲ್ ಪೀಸ್ ಅಥವಾ ವಾರ್ಷಿಕ ಶುಲ್ಕ ಪಡೆಯುತ್ತವೆ. ಮತ್ತೆ ಕೆಲವು ಕ್ರೆಡಿಟ್ ಕಾರ್ಡ್ ಕಂಪನಿಗಳು ಈ ಆರಂಭಿಕ ಅಥವಾ ವಾರ್ಷಿಕ ಶುಲ್ಕ ಪಡೆಯುವುದಿಲ್ಲ. ನೀವು ಕ್ರೆಡಿಟ್ ಕಾರ್ಡ್ ಪಡೆಯುವಾಗ ಕೆಲವು ಅಂಶವನ್ನು ಗಮನಿಸಬೇಕು.

Credit card charges include late payment charges and over limit fees
Image Credit: Timesnownews

ಕ್ರೆಡಿಟ್ ಕಾರ್ಡ್ ನಿಂದ ಆಗುವ ಶುಲ್ಕಗಳು
ಕ್ರೆಡಿಟ್ ಕಾರ್ಡ್ ಬಳಸಿ ಎಟಿಎಂ ನಲ್ಲಿ ನಿರ್ದಿಷ್ಟ ಮೊತ್ತದ ಹಣವನ್ನು ಪಡೆಯುವ ಅವಕಾಶ ಇರುತ್ತದೆ. ಇದಕ್ಕೆ ಶುಲ್ಕ ವಿಧಿಸಲಾಗುತ್ತದೆ. ಬ್ಯಾಂಕಿಂದ ಬ್ಯಾಂಕಿಗೆ ಇದರ ಶುಲ್ಕಗಳಲ್ಲಿ ವ್ಯತ್ಯಾಸ ಆಗುತ್ತದೆ.

ಕೆನರಾ ಬ್ಯಾಂಕ್ ನಲ್ಲಿ ನೀವು ಕ್ಯಾಶ್ ಬ್ಯಾಕ್ ಪಡೆದರೆ ಆ ಮೊತ್ತಕ್ಕೆ ಶೇಕಡಾ 3 ರಷ್ಟು ಶುಲ್ಕ ಇರುತ್ತದೆ. ಕ್ರೆಡಿಟ್ ಕಾರ್ಡ್ ನಲ್ಲಿ ಫೈನಾನ್ಸ್ ಚಾರ್ಜಸ್ ಬಹಳ ಮುಖ್ಯವಾದ ಅಂಶ. ನೀವು ನಿಗದಿತ ಅವಧಿಯಲ್ಲಿ ಪೂರ್ಣವಾಗಿ ಬಿಲ್ ಕಟ್ಟದಿದ್ದರೆ ಕಾಡುವ ಶುಲ್ಕ ಇದಾಗಿದೆ. ನಿಮ್ಮ ಕ್ರೆಡಿಟ್ ಕಾರ್ಡ್ ಬ್ಯಾಲೆನ್ಸ್ ಮೇಲೆ ನಿರ್ದಿಷ್ಟ ಬಡ್ಡಿ ಬೀಳುತ್ತಲೇ ಇರುತ್ತದೆ.

ಲೇಟ್ ಪೇಮೆಂಟ್ ಚಾರ್ಜಸ್
ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ಗಡುವಿನೊಳಗೆ ಕಟ್ಟದಿದ್ದರೆ ತಡ ಪಾವತಿ ಶುಲ್ಕ ಅಥವಾ ಲೇಟ್ ಪೇಮೆಂಟ್ ಫೀಸ್ ಹೇರಲಾಗುತ್ತದೆ. ನೀವು ಕನಿಷ್ಠ ಮೊತ್ತವನ್ನು ಪಾವತಿಸಿದರೆ ಈ ಶುಲ್ಕ ಇರುವುದಿಲ್ಲ.

Join Nadunudi News WhatsApp Group

Credit card charges include late payment charges and over limit fees
Image Credit: Bankrate

ಓವರ್ ​ಲಿಮಿಟ್ ಫೀಸ್
ಒಂದೊಂದು ಕ್ರೆಡಿಟ್ ಕಾರ್ಡ್​ಗೂ ಬಳಕೆಗೆ ಮಿತಿ ನಿಗದಿ ಮಾಡಲಾಗಿರುತ್ತದೆ. ಈ ಮಿತಿಗಿಂತ ಹೆಚ್ಚು ಮೊತ್ತದ ವಹಿವಾಟು ನಡೆಸಿದರೆ ಓವರ್​ಲಿಮಿಟ್ ಫೀ ವಿಧಿಸಲಾಗುತ್ತದೆ. ಹೆಚ್ಚುವರಿ ಮೊತ್ತದ ಶೇ. 2.5 ಅಥವಾ ಬೇರೆ ಪ್ರಮಾಣದಷ್ಟು ಹಣವನ್ನು ಶುಲ್ಕವಾಗಿ ಪಡೆಯಲಾಗುತ್ತದೆ.

ಇದರ ಜೊತೆಗೆ ಬ್ಯಾಂಕು ಕಚೇರಿಗೆ ಹೋಗಿ ಕ್ರೆಡಿಟ್ ಕಾರ್ಡ್ ಬಿಲ್ ಕಟ್ಟಿದರೆ 250 ರೂವರೆಗೆ ಶುಲ್ಕ, ಅಂತಾರಾಷ್ಟ್ರೀಯ ವಹಿವಾಟಿಗೆ ಕ್ರೆಡಿಟ್ ಕಾರ್ಡ್ ಬಳಸಿದರೆ ಫೋರೆಕ್ಸ್ ಮಾರ್ಕಪ್ ಫೀ ಇತ್ಯಾದಿ ಶುಲ್ಕಗಳಿರುತ್ತವೆ. ಕೊನೆಯಲ್ಲಿ ಬಿಲ್ ಮೊತ್ತಕ್ಕೆ ಜಿಎಸ್​ಟಿ ಕೂಡ ಸೇರಿಸಲಾಗುತ್ತದೆ.

Join Nadunudi News WhatsApp Group