Credit Score: ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದರೂ ಬ್ಯಾಂಕಿನಲ್ಲಿ ಸಾಲ ಪಡೆಯುವುದು ಹೇಗೆ…? ಇಲ್ಲಿದೆ ಡೀಟೇಲ್ಸ್

ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದು, ಕಡಿಮೆ ಬಡ್ಡಿಗೆ ಸಾಲ ಪಡೆಯಲು ಈ ಮಾರ್ಗವನ್ನು ಅನುಸರಿಸಿ

Credit Score Latest News Update: ಜೀವನದಲ್ಲಿ ಹಣದ ಅವಶ್ಯಕತೆ ತುಂಬ ಇರುತ್ತದೆ ಅಂತಹ ಸಂದರ್ಭಗಳಲ್ಲಿ ಸಾಲವು ಅವಶ್ಯಕವಾಗಿರುತ್ತದೆ. ಸಾಲ ಪಡೆಯುವುದು ಸ್ವಲ್ಪ ಕಷ್ಟಕರವಾದ ಸಂಗತಿ ಆಗಿದೆ. ಏಕೆಂದರೆ ಸಾಲ ಪಡೆಯಲು ನಿಮ್ಮ ಕ್ರೆಡಿಟ್ ಸ್ಕೋರ್ (Credit Score) ಉತ್ತಮವಾಗಿದ್ದರೆ ಮಾತ್ರ ಬ್ಯಾಂಕಿನವರು ಸಾಲವನ್ನು ಕೊಡುತ್ತಾರೆ.

300 ರಿಂದ 900 ಅಂಕಗಳವರೆಗೆ ಇರುವ ಕ್ರೆಡಿಟ್ ಸ್ಕೋರ್​ ನಲ್ಲಿ 750 ಕ್ಕಿಂತ ಹೆಚ್ಚಿನದ್ದನ್ನು ಉತ್ತಮ ಸ್ಕೋರ್ ಎಂದು ಪರಿಗಣಿಸಲಾಗುತ್ತದೆ. ನಿಮ್ಮ ಕ್ರೆಡಿಟ್ ಸ್ಕೋರ್ ಸಾಲ ಪಡೆಯಲು ಬಹಳ ಮುಖ್ಯವಾಗಿರುತ್ತದೆ. ಆದರೆ ಈಗ ನೀವು ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದರೂ ಬ್ಯಾಂಕಿನಲ್ಲಿ ಸಾಲ ಪಡೆಯಲು ಸಾಧ್ಯವಾಗುತ್ತದೆ. ಅದು ಹೇಗೆ ಎಂದು ನಾವೀಗ ತಿಳಿದುಕೊಳ್ಳೋಣ.

Credit Score Latest News
Image Credit: Informalnewz

ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದು, ಕಡಿಮೆ ಬಡ್ಡಿಗೆ ಸಾಲ ಪಡೆಯಲು ಈ ಮಾರ್ಗವನ್ನು ಅನುಸರಿಸಿ
1) ಹೆಚ್ಚು ಡೌನ್ ಪೇಮೆಂಟ್ ಮಾಡುವುದು
ಸಾಲ ಪಡೆಯಲು ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದರೆ, ಹೆಚ್ಚಿನ ಡೌನ್ ಪೇಮೆಂಟ್ ಮಾಡುದಾಗಿ ಆಫರ್ ಮಾಡಿ. ಇದರಿಂದ ಅವರಿಗೆ ನಿಮ್ಮ ಮೇಲೆ ಭರವಸೆ ಮೂಡಬಹುದು ಹಾಗೆ ಸಾಲದ ಹೊರೆ ಕೂಡ ಕಡಿಮೆ ಆಗಬಹುದು.

2) ಬೇರೆ ಬೇರೆ ಬ್ಯಾಂಕ್ ಗಳಲ್ಲಿ ವಿಚಾರಿಸಿ
ಬೇರೆ ಬೇರೆ ಬ್ಯಾಂಕ್ ಗಳಲ್ಲಿ ಬೇರೆ ಬೇರೆ ರೀತಿಯ ಸಾಲ ನೀಡುವ ಕ್ರಮ ಇರಬಹುದು. ಕೆಲ ಬ್ಯಾಂಕ್ ಗಳು ಕ್ರೆಡಿಟ್ ಸ್ಕೋರ್ ಗೆ ಆಧ್ಯತೆ ನೀಡಿದರೆ ಇನ್ನು ಕೆಲ ಬ್ಯಾಂಕ್ ಗಳು ಕ್ರೆಡಿಟ್ ಸ್ಕೋರ್ ಗೆ ಆಧ್ಯತೆ ನೀಡದೆ ಇರಬಹುದು. ಹಾಗಾಗಿ ನೀವು ಬೇರೆ ಬೇರೆ ಬ್ಯಾಂಕ್ ಗಳಲ್ಲಿ ವಿಚಾರಿಸುದು ಉತ್ತಮ.

Credit Score For Loan
Image Credit: Jagran

3) ಜಂಟಿಯಾಗಿ ಸಾಲ ಪಡೆಯುವುದು
ಕ್ರೆಡಿಟ್ ಸ್ಕೋರ್ ಉತ್ತಮ ಇರುವ ಕುಟುಂಬ ಸದಸ್ಯರೊಬ್ಬರ ಜೊತೆ ಸೇರಿ ಜಂಟಿಯಾಗಿ ಸಾಲಕ್ಕೆ ಅರ್ಜಿ ಸಲ್ಲಿಸುದರಿಂದ ಸಾಲವನ್ನು ಸುಲಭವಾಗಿ ಪಡೆದುಕೊಳ್ಳಬಹುದು.

Join Nadunudi News WhatsApp Group

4) ಹೆಚ್ಚುವರಿ ದಾಖಲೆ ನೀಡಿ
ಕ್ರೆಡಿಟ್ ಸ್ಕೋರ್ ಬೇರೆ ಬೇರೆ ಕಾರಣಕ್ಕೆ ಕಡಿಮೆ ಆಗಿದ್ದಿರಬಹುದು. ನಿಮಗೆ ಉತ್ತಮ ಆದಾಯ, ಸ್ಥಿರ ಕೆಲಸ ಇದ್ದರೆ ಅದನ್ನು ಬಿಂಬಿಸುವ ದಾಖಲೆಯನ್ನು ನೀಡಿ. ಉದಾಹರಣೆಗೆ ಬ್ಯಾಂಕ್ ಸ್ಟೇಟ್ಮೆಂಟ್, ಸ್ಯಾಲರಿ ಸ್ಲಿಪ್, ಇತ್ಯಾದಿ.

Credit Score Updates
Image Credit: experian

Join Nadunudi News WhatsApp Group