ICC Rule: ಕ್ರಿಕೆಟ್ ಅಭಿಮಾನಿಗಳಿಗೆ ಬಿಗ್ ಅಪ್ಡೇಟ್, ಕ್ರಿಕೆಟ್ ನಿಯಮದಲ್ಲಿ ದೊಡ್ಡ ಬದಲಾವಣೆ ಮಾಡಿದ ICC

ಕ್ರಿಕೆಟ್ ನಿಯಮದಲ್ಲಿ 3 ದೊಡ್ಡ ಬದಲಾವಣೆ ಮಾಡಿದ ICC

ICC Change DRS Rules: ಸದ್ಯ ಕ್ರಿಕೆಟ್ ಮ್ಯಾಚ್ ಗಳು ಕ್ರಿಕೆಟ್ ಪ್ರಿಯರನ್ನು ಸೆಳೆಯುತ್ತಿದೆ. ವಿವಿಧ ತಂಡಗಳ ನಡುವೆ ಪಂದ್ಯ ನಡೆಯುತ್ತಿದೆ. ಸದ್ಯ ಇತ್ತೀಚೆಗಷ್ಟೇ ನಡೆದ ಇಂಡಿಯಾ ಮತ್ತು ಇಂಗ್ಲೆಂಡ್ ನಡುವೆ ನಡೆದ ಕ್ರಿಕೆಟ್ ಸರಣಿಯಲ್ಲಿ Decision Review System ಸಾಕಷ್ಟು ವಿವಾದವನ್ನು ಸೃಸ್ತಿಸಿತ್ತು.

ಇಂಡಿಯಾ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯದಲ್ಲಿ DRS ವಿವಾದವನ್ನೇ ಎಬ್ಬಿಸಿತ್ತು. ಇದರಲ್ಲಿ ಅಂಪೈರ್ ನೀಡಿದ LBW ತೀರ್ಪಿಗೆ ಸಂಬಂಧಿಸಿದಂತೆ ಹಲವು ಪ್ರಶ್ನೆಗಳು ಎದ್ದಿದ್ದವು. ಈ ಹಿನ್ನಲೆ DRS ನಿಯಮವನ್ನು ಮರು ಪರಿಶೀಲಿಸಬೇಕೆನ್ನುವ ಮಾತು ಕೂಡ ಕೇಳಿಬಂದಿದೆ. ಸದ್ಯ ICC ಕ್ರಿಕೆಟ್ ನಿಯಮದಲ್ಲಿ ಮಹತ್ವದ ಬದಲಾವಣೆಯನ್ನು ಜಾರಿಗೊಳಿಸಿದೆ.

Cricket New Rule
Image Credit: icc-cricket

ಕ್ರಿಕೆಟ್ ಅಭಿಮಾನಿಗಳಿಗೆ ಬಿಗ್ ಅಪ್ಡೇಟ್
DRS ನಿಯಮದ ಮರುಪರಿಶೀಲನೆಗೆ ಬೇಡಿಕೆ ಬಂದರು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಅಂಪೈರ್‌ ಗಳ ತೀರ್ಪನ್ನು ಮುಂದುವರಿಸಲು ನಿರ್ಧರಿಸಿದೆ. ಐಸಿಸಿ ಕ್ರಿಕೆಟ್ ಮಂಡಳಿ ಮತ್ತು ಕ್ರಿಕೆಟ್ ಸಮಿತಿ ಕೂಡ DRS ನ 3 ನಿಯಮಗಳನ್ನು ಬದಲಾಯಿಸಿದೆ. LBW ಗಾಗಿ ಹೆಚ್ಚಿದ ವಿಕೆಟ್ ವಲಯ ವ್ಯಾಪ್ತಿಯನ್ನು ಹೆಚ್ಚಿಸಲಾಗಿದೆ. ಅಲ್ಲದೆ ಟಿವಿ ಅಂಪೈರ್‌ ಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ.

ಕ್ರಿಕೆಟ್ ನಿಯಮದಲ್ಲಿ 3 ದೊಡ್ಡ ಬದಲಾವಣೆ ಮಾಡಿದ ICC
•DRS ನಲ್ಲಿ LBW ಪರಿಶೀಲಿಸುವ ನಿಯಮಗಳಲ್ಲಿ ಐಸಿಸಿ ಕೆಲವು ಬದಲಾವಣೆಗಳನ್ನು ಮಾಡಿದೆ. ಹೊಸ ನಿಯಮಗಳ ಪ್ರಕಾರ LBW ತೀರ್ಪು ನೀಡಲು ಬೆಲ್ಸ್ ವರೆಗೆ ಚೆಂಡು ಬಡಿದರು ಅದನ್ನು ಔಟ್ ಎಂದು ನೀಡಲಾಗುತ್ತದೆ. ಇನ್ನು 50% ಚೆಂಡನ್ನು ಬೇಲ್‌ ಗಳ ಕೆಳಭಾಗವನ್ನು ಸ್ಪರ್ಶಿಸುವುದು ಅಂಪೈರ್‌ನಿಂದ ಕರೆಯಲ್ಪಡುತ್ತದೆ. ಇನ್ನುಮುಂದೆ 50% ಬಾಲ್ ಬೆಲ್‌ಗಳ ಮೇಲ್ಭಾಗವನ್ನು ಸ್ಪರ್ಶಿಸಿದರೂ ಅಂಪೈರ್ ಕರೆ ನೀಡಲಾಗುತ್ತದೆ.

ICC Rule Change Update
Image Credit: Newsroompost

•ಅಂಪೈರ್ ನಿರ್ಧಾರವನ್ನು ಪರಿಶೀಲಿಸುವ ಮೊದಲು, ಆಟಗಾರನಿಗೆ ಅಂಪೈರ್ ಜೊತೆ ಮಾತನಾಡಲು ಅವಕಾಶವಿದೆ. ಮತ್ತು ಬ್ಯಾಟ್ಸ್‌ ಮನ್ ಚೆಂಡನ್ನು ಆಡಲು ಪ್ರಯತ್ನ ಮಾಡಿದ್ದಾನೋ ಇಲ್ಲವೋ ಎಂದು ಕೇಳಲು ಸಾಧ್ಯವಾಗುತ್ತದೆ. ಇದು ಅವರಿಗೆ ತೀರ್ಪು ತೆಗೆದುಕೊಳ್ಳಲು ಸುಲಭವಾಗುತ್ತದೆ ಮತ್ತು DRS ವ್ಯರ್ಥವಾಗುವುದಿಲ್ಲ.

Join Nadunudi News WhatsApp Group

•ಶಾರ್ಟ್ ರನ್ ಗಳಿಗೆ ಸಂಬಂದಂತೆ ICC ನಿಯಮವನ್ನು ಬದಲಿಸಿದೆ. ಹೊಸ ನಿಯಮದ ಪ್ರಕಾರ ಟಿವಿ ಅಂಪೈರ್ ಶಾರ್ಟ್ ರನ್ ನಿರ್ಧರಿಸಲಿದ್ದಾರೆ. ಮೂರನೇ ಅಂಪೈರ್ ಮರುಪಂದ್ಯವನ್ನು ಪರಿಶೀಲಿಸುತ್ತಾರೆ ಎಂದು ಐಸಿಸಿ ಹೇಳಿಕೆಯಲ್ಲಿ ತಿಳಿಸಿದೆ. ತಪ್ಪು ಮಾಡಿದ್ದರೆ ಮುಂದಿನ ಎಸೆತ ಆಗುವ ಮುನ್ನ ಸರಿಪಡಿಸಲಾಗುವುದು.

Join Nadunudi News WhatsApp Group