Shahid Afridi: ಬಕ್ರೀದ್ ಹಬ್ಬಕ್ಕೆ ಶಾಹಿದ್ ಆಫ್ರಿದಿ ಖರೀದಿಸಿದ ಗೂಳಿ ಬೆಲೆ ಎಷ್ಟು, ಟೀಕೆಗೆ ಒಳಗಾದ ಕ್ರಿಕೆಟಿಗ.

ಬಕ್ರೀದ್ ಹಬ್ಬಕ್ಕೆ ಕೋಟಿ ಕೋಟಿ ಕೊಟ್ಟು ಗೂಳಿ ಖರೀದಿಸಿದ ಶಾಹಿದ್ ಅಫ್ರಿದಿ.

Cricket Player Shahid Afridi: ನಿನ್ನೆ ವಿಶ್ವದೆಲ್ಲೆಡೆ ಬಕ್ರೀದ್ ಹಬ್ಬವನ್ನು ಆಚರಿಸಲಾಗಿತ್ತು. ಬಕ್ರೀದ್ ಹಬ್ಬಕ್ಕೆ ಭಾರತ ತಂಡದ ಕ್ರಿಕೆಟಿಗ ಮೊಹಮ್ಮದ್ ಶಮಿ ಅಲ್ಲದೆ ಆಫ್ಘಾನಿಸ್ತಾನದ ಆಟಗಾರ ರಶೀದ್ ಖಾನ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಅಭಿಮಾನಿಗಳಿಗೆ ಬಕ್ರೀದ್ ಶುಭಾಶಯ ಕೋರಿದ್ದಾರೆ.

ಆದರೆ ಇದೀಗ ಪಾಕಿಸ್ತಾನದ ಮಾಜಿ ಆಲ್ ರೌಂಡರ್ ಶಾಹಿದ್ ಆಫ್ರಿದಿ (Shahid Afridi) ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣರಾಗಿದ್ದಾರೆ. ಪಾಕಿಸ್ತಾನದ ಆಲ್ ರೌಂಡರ್ ಶಾಹಿದ್ ಆಫ್ರಿದಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಶೇರ್ ಮಾಡುವ ಮೂಲಕ ಬಕ್ರೀದ್ ಹಬ್ಬದ ಶುಭಾಶಯ ತಿಳಿಸಿದ್ದಾರೆ.

Shahid Afridi bought a bull by paying crores
Image Credit: Aajtak

ಕೋಟಿ ಕೋಟಿ ಕೊಟ್ಟು ಗೂಳಿ ಖರೀದಿಸಿದ ಶಾಹಿದ್ ಆಫ್ರಿದಿ
ಶಾಹಿದ್ ಆಫ್ರಿದಿ ಇದೀಗ ಕುರ್ಬಾನ್ ನೀಡಲು ಕೋಟಿ ಕೋಟಿ ರೂಪಾಯಿ ಕೊಟ್ಟು ಗೂಳಿ ಖರೀದಿಸಿದ್ದಾರೆ. ಇದರ ಸಲುವಾಗಿ ಇವರು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿದ್ದಾರೆ. ಶಾಹಿದ್ ಆಫ್ರಿದಿ ಬಲಿ ಕೊಟ್ಟಿರುವ ಗೂಳಿ ಪಾಕಿಸ್ತಾನದ ಕರೆನ್ಸಿಯಲ್ಲಿ ಸುಮಾರು 4 ಕೋಟಿ ರೂಪಾಯಿ.

 

View this post on Instagram

 

A post shared by Shahid Afridi (@safridiofficial)

ಪಾಕಿಸ್ತಾನದ ಆಲ್ ರೌಂಡರ್ ಶಾಹಿದ್ ಆಫ್ರಿದಿ ಬಡವರಿಗೆ ಕೈಮುಗಿದು ಗೂಳಿಯನ್ನು ನೀಡಿದ್ದಾರೆ. ಶಾಹಿದ್ ಆಫ್ರಿದಿ ಈ ಗೂಳಿಯ ಜೊತೆ ತೋಟದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Join Nadunudi News WhatsApp Group

Shahid Afridi bought a bull by paying crores
Image Credit: Latestly

ಬಕ್ರೀದ್ ಹಬ್ಬಕ್ಕೆ ವಿಡಿಯೋ ಮೂಲಕ ಶುಭಾಶಯ ತಿಳಿಸಿದ ಶಾಹಿದ್ ಅಫ್ರಿದಿ
ಪಾಕಿಸ್ತಾನದ ಆಲ್ ರೌಂಡರ್ ಶಾಹಿದ್ ಅಫ್ರಿದಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಶೇರ್ ಮಾಡುವ ಮೂಲಕ ಬಕ್ರೀದ್ ಹಬ್ಬದ ಶುಭಾಶಯ ತಿಳಿಸಿದ್ದಾರೆ. ಶಾಹಿದ್ ಅಫ್ರಿದಿ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅನೇಕರು ಪಾಕಿಸ್ತಾನ ಭಿಕ್ಷೆ ಬೇಡುವ ಪರಿಸ್ಥಿತಿಯಲ್ಲಿ ಇರುವಾಗ ಪ್ರಾಣಿಯನ್ನು ಬಳಿ ಕೊಡಬಾರದು ಎಂದು ಕಾಮೆಂಟ್ ಮಾಡಿದ್ದಾರೆ.

Join Nadunudi News WhatsApp Group