Crop Compensation: ಬರ ಪರಿಹಾರದ ಕುರಿತಂತೆ ಇನ್ನೊಂದು ಬಿಗ್ ಅಪ್ಡೇಟ್, ಮತ್ತೆ ರೈತರ ಖಾತೆಗೆ ಬರಲಿದೆ ಇಷ್ಟು ಹಣ.

ಬರ ಪರಿಹಾರದ ಕುರಿತಂತೆ ಮತ್ತೊಂದು ಬಿಗ್ ಅಪ್ಡೇಟ್ ನೀಡಿದ ರಾಜ್ಯ ಸರ್ಕಾರ

Crop Compensation New Update: ಮಳೆಯ ಕೊರತೆಯಿಂದ ರೈತರು ಬೆಳೆ ಹಾನಿ ಸಮಸ್ಯೆಯನ್ನು ಎದುರಿಸಿದ್ದಾರೆ. ಸರಿಯಾದ ಸಮಯದಲ್ಲಿ ಮಳೆ ಬಾರದ ರೈತರ ಬೆಳೆ ಎಲ್ಲವು ನಾಶವಾಗಿದ್ದು, ರೈತರು ಹೆಚ್ಚಿನ ಸಮಸ್ಯೆಯನ್ನು ಎದುರಿಸಬೇಕಾಗಿತ್ತು.

ಬರ ಪರಿಸ್ಥಿತಿಯಿಂದ ಇನ್ನು ರೈತರಿಗೆ ರಾಜ್ಯ ಸರ್ಕಾರ ಬೆಳೆ ಪರಿಹಾರವನ್ನು ಕೂಡ ಘೋಷಿಸಿದೆ. ಸದ್ಯ ರಾಜ್ಯ ಸರ್ಕಾರ ರೈತರಿಗೆ ಬೆಳೆ ಪರಿಹಾರ ಮೊತ್ತವನ್ನು ಬಿಡುಗಡೆ ಮಾಡಿದೆ. ರೈತರ ಖಾತೆಗೆ ಬೆಳೆ ಪರಿಹಾರ ಮೊತ್ತ ಜಮಾ ಆಗಲಿದೆ. ಸದ್ಯ ರಾಜ್ಯ ಸರ್ಕಾರ ಯಾವುದಕ್ಕೆ ಎಷ್ಟು ಹಣ ಸಿಗಲಿದೆ ಎಂದು ಪಟ್ಟಿ ಬಿಡುಗಡೆ ಮಾಡಿದೆ. ಸದ್ಯ ರಾಜ್ಯ ಸರ್ಕಾರದಿಂದ ಬರ ಪರಿಹಾರದ ಕುರಿತಂತೆ ಇನ್ನೊಂದು ಬಿಗ್ ಅಪ್ಡೇಟ್ ಹೊರಬಿದ್ದಿದೆ.

Crop Compensation Amount Credit
Image Credit: Gnanabandar

ಬರ ಪರಿಹಾರದ ಕುರಿತಂತೆ ಇನ್ನೊಂದು ಬಿಗ್ ಅಪ್ಡೇಟ್
ಇನ್ನು NDRF ಹಣ ಬಿಡುಗಡೆಯಾದ ತಕ್ಷಣ ಅವರ ಅರ್ಹತೆಗೆ ಅನುಗುಣವಾಗಿ ಪರಿಹಾರವನ್ನು ನೀಡಲಾಗುತ್ತದೆ. ಇದುವರೆಗೆ ಮೊದಲ ಹಂತದಲ್ಲಿ 2,000 ರೂ. ಮತ್ತು ಇದುವರೆಗೆ ಎರಡನೇ ಕಂತಿನ ಪರಿಹಾರ ಸೇರಿದಂತೆ ಒಟ್ಟು 32.12 ಲಕ್ಷ ರೈತರ ಖಾತೆಗಳಿಗೆ ಬೆಳೆ ಪರಿಹಾರವನ್ನು ಜಮಾ ಮಾಡಲಾಗಿದೆ. ಸುಮಾರು 2 ಲಕ್ಷ ರೈತರಿಗೆ ಪರಿಹಾರ ನೀಡುವ ಪ್ರಕ್ರಿಯೆ ದಾಖಲೆ ಪರಿಶೀಲನೆಯಲ್ಲಿದೆ.

ಸುಮಾರು ತಾಲೂಕುಗಳಲ್ಲಿ ಬರಪರಿಹಾರ ಪಟ್ಟಿಗೆ ಸೇರ್ಪಡೆಯಾಗದ ಮಳೆಯಾಶ್ರಿತ ಬೆಳೆಗಳಿಗೆ ಪರಿಹಾರ ವಿತರಿಸಲು ಹಾಗೂ 2 ಲಕ್ಷ ಹೆಕ್ಟೇರ್ ನೀರಾವರಿ ಪ್ರದೇಶದ ಸುಮಾರು 1.63 ಲಕ್ಷ ಅರ್ಹ ರೈತರಿಗೆ ಪರಿಹಾರ ವಿತರಿಸಲು ನಿರ್ಧರಿಸಲಾಗಿದೆ. ಅಲ್ಲದೆ, ಸಣ್ಣ ಮತ್ತು ಅತಿಸಣ್ಣ ಒಣ ಬೇಸಾಯದಲ್ಲಿ ತೊಡಗಿರುವ ಸುಮಾರು 16 ಲಕ್ಷ ಕುಟುಂಬಗಳಿಗೆ ಬರಗಾಲದಿಂದ ಜೀವನಾಧಾರ ಕಳೆದುಕೊಂಡವರಿಗೆ ತಲಾ 3,000 ರೂ. ಪರಿಹಾರ ನೀಡಲು ಕೂಡ ನಿರ್ಧರಿಸಲಾಗಿದೆ.

Crop Compensation New Updates
Image Credit: Hindustantimes

ಮತ್ತೆ ರೈತರ ಖಾತೆಗೆ ಬರಲಿದೆ ಇಷ್ಟು ಹಣ
ಇನ್ನು NDRF ನಿಂದ ಬಿಡುಗಡೆಯಾದ ಹಣ ರೈತರ ಸಾಲಕ್ಕೆ ಕಡಿತಗೊಳ್ಳಲಿದೆ ಎನ್ನುವ ಬಗ್ಗೆ ಮಾಹಿತಿ ಕೇಳಿಬಂದಿತ್ತು. ಇದರಿಂದ ರೈತರು ಚಿಂತೆಗೆ ಒಳಗಾಗಲಿದ್ದರು. ಸದ್ಯ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬರ ಪರಿಹಾರದ ಕುರಿತಂತೆ ಇನ್ನೊಂದು ಬಿಗ್ ಅಪ್ಡೇಟ್ ನೀಡಿದ್ದಾರೆ. ಬರ ಪರಿಹಾರ ಹಣಕ್ಕಾಗಿ ರಾಜ್ಯ ಸರಕಾರ ಈಗಾಗಲೇ ರೈತರಿಗೆ ತಲಾ 2 ಸಾವಿರ ರೂ. ನೀಡಿದೆ. ಅದರ ಜೊತೆಗೆ ಎನ್‌ಡಿಆರ್‌ಎಫ್‌ ನಿಂದಲೂ ಹಣ ಬಂದಿದೆ. ಇದನ್ನು ರೈತರಿಗೂತಲುಪಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಆದಷ್ಟು ಬೇಗ ರೈತರ ಖಾತೆಗೆ ಬರ ಪರಿಹಾರದ ಹಣ ಜಮಾ ಆಗಲಿದೆ.

Join Nadunudi News WhatsApp Group

Crop Compensation Latest News
Image Credit: Original Source

Join Nadunudi News WhatsApp Group